ಗೆಲುವೇ ಸಾಧನೆಯ ಮಾನದಂಡವಲ್ಲ: ಡಾI ಬಿ. ಮಹಾಬಲೇಶ್ವರ ರಾವ್

Call us

Call us

Call us

Call us

ಕುಂದಾಪುರ: ಸಾಧನೆ ಪ್ರತಿಭೆಯ ಪ್ರತಿಬಿಂಬವಲ್ಲ. ಗೆಲುವೇ ಸಾಧನೆಯ ಮಾನದಂಡವಲ್ಲ ಎಂಬ ಸೂಕ್ಷ್ಮವನ್ನರಿತು ವಿದ್ಯಾರ್ಥಿಗಳಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಬೇಕೆಂದು ಡಾ. ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ. ಮಹಾಬಲೇಶ್ವರ ರಾವ್ ಕರೆ ನೀಡಿದರು.

Call us

Click Here

Click here

Click Here

Call us

Visit Now

Click here

ಅವರು ಕುಂದಾಪುರದ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಮಾತನಾಡಿ ಇಂದು ವಿದ್ಯಾರ್ಥಿಗಳು ಸರ್ವಾಂಗೀಣ ಬೆಳವಣಿಗೆಗೆ ಪ್ರಯತ್ನಿಸುತ್ತಾ ಪ್ರಶ್ನಿಸುವ ಮನೋಭಾವದ ಮೂಲಕ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು ಭಿನ್ನವಾದ ರೀತಿಯಲ್ಲಿ ಯೋಚಿಸುವುದರೊಂದಿಗೆ ಸೃಜನಾತ್ಮಕವಾದ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ರಕ್ಷಕರು ತಮ್ಮ ಮಕ್ಕಳನ್ನು ಬೌದ್ಧಿಕ ಕೂಲಿಗಳನ್ನಾಗಿ ರೂಪಿಸುವ ಚಿಂತನೆಯಿಂದ ಹೊರಬಂದು ಅವರಲ್ಲಿನ ಪ್ರತಿಭೆ ದಕ್ಷತೆ ಮತ್ತು ಬದ್ಧತೆಗಳ ಬೆಳಸಿಗೆ ಸಾರ, ನೀರೆರೆದು ಪೋಷಿಸಬೇಕೆಂದು ಅಭಿಪ್ರಾಯ ಪಟ್ಟರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಮೋಹನ್ ಕಾಮತ್ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಕಲ್ಪಿಸಲಾದ ಮೂಲಭೂತ ಸೌಕರ್ಯಗಳು ಹಾಗೂ ಶೈಕ್ಷಣಿಕ ಮಾರ್ಗದರ್ಶನದ ತರಬೇತಿಯನ್ನು ಹೆಚ್ಚಿನ ವಿದ್ಯಾರ್ಥಿಗಳು ಪಡೆಯುವಂತಾಗಬೇಕೆಂದು ಆಶಿಸಿದರು. ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ, ಸಂಸ್ಥೆಯ ಆಡಳಿತಾಧಿಕಾರಿ ಪಿ. ಶ್ರೀಪತಿ ಹೇರ್ಳೆ, ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲೆ ರೂಪಾ ಶೆಣೈ, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಜಯಶೀಲಾ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಗಣೇಶ ನಾಯಕ್ ಕಾಲೇಜಿನ ವರದಿಯನ್ನು ವಾಚಿಸಿದರು. ಕುಮಾರಿ ಅಕ್ಷತಾ ಶೆಣೈ ನಿರೂಪಿಸಿದರು. ಚೈತನ್ಯಲಕ್ಷ್ಮಿ ಸ್ವಾಗತಿಸಿದರು. ರಮ್ಯ ಎನ್.ಎಸ್. ಅತಿಥಿಗಳನ್ನು ಪರಿಚಯಿಸಿದರು. ರಂಜನ್ ಆರ್. ಪೈ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.news venkataramana school1

Leave a Reply

Your email address will not be published. Required fields are marked *

three × four =