ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗೆಳೆಯರ ಬಳಗ ಶ್ರೀ ಆನಗಳ್ಳಿ ಇದರ ವಾರ್ಷಿಕೋತ್ಸವ ಸಮಾರಂಭವು ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ ಕೊರೊನ ವಾರಿಯರ್ಸ್ ಆದ ಕುಂದಾಪುರ ಸರಕಾರಿ ಆಸ್ಪತ್ರೆ ವೈದ್ಯರಾದ ಡಾ. ನಾಗೇಶ್, ಆಶಾ ಕಾರ್ಯಕರ್ತರಾದ ನಾಗರತ್ನ, ಫಿಲೋಮಿನ ಡಿ’ಸೋಜಾ, ಪೊಲೀಸ್ ಇಲಾಖೆಯ ರೊನಾಲ್ಡ್ ಡಿ’ಸೋಜಾ, ರಕ್ತದಾನಿ ಸತೀಶ್ ಸಾಲಿಯಾನ್ ಇವರನ್ನು ಸನ್ಮಾನಿಸಲಾಯಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ರವಿ ಬಿ ನಾಯ್ಕ್ ಆನಗಳ್ಳಿ, ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಸುರೇಶ ಆರ್ ನಾಯ್ಕ್, ಸಂಸ್ಥೆಯ ಹಿರಿಯರಾದ ಮಂಜುನಾಥ್ ಹೆಬ್ಬಾರ್, ರಾಮಚಂದ್ರ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.