ಗೇರು ಬೀಜ ಇಳುವರಿ ಕುಸಿತ: ಗೇರುತೋಪು ಗುತ್ತಿಗೆಯಲ್ಲಿ ರಿಯಾಯತಿ ನೀಡಲು ‘ಕೆಸಿಡಿಸಿ’ಗೆ ಮನವಿ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರಾವಳಿ ಜಿಲ್ಲೆಯ ವಾಣಿಜ್ಯ ಬೆಳೆ ಗೇರು ಮರದಲ್ಲಿ ಇಳುವರಿ ಈ ಸಾಲಿನಲ್ಲಿ ಇಳುವರಿ ಕಡಿಮೆಯಾಗಿರುವುದರಿಂದ ಗೇರುತೋಪು ಹೊಂದಿರುವವರಿಗೆ ಭಾರಿ ನಷ್ಟ ಉಂಟಾಗುತ್ತಿದ್ದು, ನೆಡುತೋಪು ಗುತ್ತಿಗೆ ಪಡೆದ ಗುತ್ತಿಗೆದಾರರು ನಿಗಮಕ್ಕೆ ಪಾವತಿಸಿರುವ ಹಣದಲ್ಲಿ ಶೇ.65ರಷ್ಟು ಹಣವನ್ನು ಮರುಪಾವತಿಸುವಂತೆ ಹಾಗೂ ಪಾವತಿಸಲು ಬಾಕಿ ಇರುವವರಿಗೂ ಕೂಡಾ ಶೇ.65ರಷ್ಟು ರಿಯಾಯಿತಿ ಮಾಡುವಂತೆ ಎಸ್. ರಾಜು ಪೂಜಾರಿ ನೇತೃತ್ವದಲ್ಲಿ ನಡುತೋಪು ಗುತ್ತಿಗೆದಾರರ ತಂಡ ಮಂಗಳೂರಿನಲ್ಲಿರುವ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕರಿಗೆ ಕುಂದಾಪುರ ವಿಭಾಗೀಯ ವ್ಯವಸ್ಥಾಪಕ ಚಂದ್ರಣ್ಣ ಮೂಲಕ ಮನವಿ ಸಲ್ಲಿಸಿದೆ.

Call us

Call us

Click Here

Visit Now

ಪ್ರಸಕ್ತ ಸಾಲಿನಲ್ಲಿ ಹಿಂದೆಂದೂ ಕಂಡರಿಯದ ಹವಾಮಾನ ವೈಫಲ್ಯ ಕಂಡುಬಂದಿದ್ದು ಗೇರುಬೀಜ ಉತ್ಪಾದನೆಯಲ್ಲಿ ತೀರಾ ಕುಸಿತ ಕಂಡಿದೆ. ಕಳೆದ ವರ್ಷದ ಇಳುವರಿಗೆ ಹೋಲಿಸಿದರೆ ಈ ವರ್ಷ ಶೇ.19-15ರಷ್ಟು ಆಗಿದೆ. ಬೀಜ ಸಂಗ್ರಹಣೆ ಮಾಡಲು ಸಹ ಖರ್ಚು ಹೆಚ್ಚಾಗಿದ್ದು, ಗುತ್ತಿಗೆ ಪಡೆದವರೆಲ್ಲರಿಗೂ ಅಪಾರ ನಷ್ಟವಾಗಿದೆ. ಗೇರುಬೆಳೆಯಲ್ಲಿ ಶೇ.80-90ರಷ್ಟು ನಷ್ಟ ಉಂಟಾಗಿರುವುದರಿಂದ ಸಾಲ ಮಾಡಿ ಟೆಂಡರ್ ಪಡೆದ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಕಳೆದ ಸುಮಾರು 30 ವರ್ಷಗಳಿಂದ ನಿಗಮದಲ್ಲಿ ಗೇರು ಗುತ್ತಿಗೆ ಪಡೆದು ಸಮರ್ಪಕವಾಗಿ ಇಲಾಖೆಗೆ ಟೆಂಡರ್ ಹಣ ಪಾವತಿಸುತ್ತಾ ಬಂದಿದ್ದು,ಈ ಭಾರಿ ರೀಯಾಯಿತಿ ಪಡೆಯದೇ ಅನ್ಯ ಮಾರ್ಗವಿಲ್ಲ ಎಂದು ಗೇರುತೋಪು ಗುತ್ತಿಗೆದಾರರು ಮನವಿ ಮಾಡಿಕೊಂಡಿದ್ದಾರೆ. ಸುಮಾರು 25ಕ್ಕೂ ಅಧಿಕ ಗುತ್ತಿಗೆದಾರರು ತಂಡದಲ್ಲಿದ್ದರು.

Click here

Click Here

Call us

Call us

[quote font_size=”15″ bgcolor=”#ffffff” bcolor=”#71ad35″ arrow=”yes”]ಕಳೆದ 30ವರ್ಷಗಳಿಂದ ಕುಂದಾಪುರ, ಭಟ್ಕಳ, ಹೊನ್ನಾವರ ಮುಂತಾದ ಪ್ರದೇಶಗಳಲ್ಲಿ ಗೇರು ನೆಡುತೋಪು ಗುತ್ತಿಗೆ ಪಡೆದ ಅನುಭವವಿದ್ದು, ಯಾವ ವರ್ಷವೂ ಈ ರೀತಿಯ ವೈಪರಿತ್ಯ ಕಂಡುಬಂದಿಲ್ಲ. ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಗೇರು ಅಭಿವೃದ್ಧಿಗೆ ಸರಕಾರವೂ ಸಹ ವಿಶೇಷ ಆದ್ಯತೆ ನೀಡುತ್ತಾ ಬಂದಿದೆ. ಆದರೆ ಈ ಬಾರಿ ಕಳೆದ ಪ್ರಥಮ ಎಂಬಂತೆ ಗೇರುಬೀಜದ ಕೊರತೆಕಾಣುತ್ತಿದೆ. ಇದರಿಂದ ಗೇರುಬೆಳೆಯನ್ನು ನಂಬಿಕೊಂಡು ಬಂದಿರುವ ರೈತರಿಗೂ, ಕೃಷಿಕರಿಗೂ ಹಾಗೂ ಗುತ್ತಿಗೆಪಡೆದವರಿಗೂ ಆಘಾತ ನೀಡಿದೆ. ಈ ಬಗ್ಗೆ ಸರಕಾರ ರೈತರಿಗೆ ಬೆಳೆ ಪರಿಹಾರ ನೀಡಬೇಕು. ಮುಂದಿನ ದಿನಗಳಲ್ಲಿ ವೈಜ್ಞಾನಿಕ ಅಧ್ಯಯನ ನಡೆಸುವ ಮೂಲಕ ಸರಕಾರ ಇದಕ್ಕೊಂದು ಪರ್ಯಾಯ ವ್ಯವಸ್ಥೆಯ ಕಲ್ಪಿಸುವ ಕುರಿತು ಚಿಂತನೆ ನಡೆಸಬೆಕು ಎಂದರು. – ಎಸ್. ರಾಜು ಪೂಜಾರಿ[/quote]

Cashue-nut-plant

Leave a Reply

Your email address will not be published. Required fields are marked *

5 × five =