ಗೋಕರ್ಣ ಪರ್ತಗಾಳಿ ಶ್ರೀ ನಾಡ ಶ್ರೀ ರಾಮ ಮಂದಿರದಲ್ಲಿ ಮೊಕ್ಕಾಂ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹಾಗೂ ಅವರ ಪಟ್ಟಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಗುಡ್ಡೆಅಂಗಡಿ ನಾಡ ಶ್ರೀ ರಾಮ ಮಂದಿರದಲ್ಲಿ ಮೊಕ್ಕಾಂ ಮಾಡಿ ಆಶೀರ್ವಚನ ನೀಡಿದರು.

Call us

Call us

ಗಂಗೊಳ್ಳಿ ಮೊಕ್ಕಾಂನಿಂದ ಮಂಗಳವಾರ ಆಗಮಿಸಿದ ಶ್ರೀಗಳವರನ್ನು ವೈಭವದ ಪುರಮೆರರವಣಿಗೆ ಮೂಲಕ ಗುಡ್ಡೆಅಂಗಡಿ ನಾಡ ಶ್ರೀ ರಾಮ ಮಂದಿರ ಕರೆ ತರಲಾಯಿತು. ಶ್ರೀಗಳ ಮೊಕ್ಕಾಂ ಸಂದರ್ಭ ಮಧ್ಯಾಹ್ನ ಶ್ರೀ ಸಂಸ್ಥಾನ ದೇವರಿಗೆ ಮಹಾಪೂಜೆ, ಗುರುಭಿಕ್ಷೆ, ಉಭಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಧರ್ಮಸಭೆ ಜರುಗಿತು. ಗಂಗೊಳ್ಳಿ ಶ್ರೀ ವೀರವಿಠಲ ಭಜನಾ ಮಂಡಳಿ ಗಂಗೊಳ್ಳಿ ಇವರಿಂದ ಭಜನ ಗಂಗಾ ಕಾರ್ಯಕ್ರಮ ನಡೆಯಿತು. ಪುರೋಹಿತರಾದ ಜಿ.ವೇದವ್ಯಾಸ ಕೆ.ಆಚಾರ್ಯ ನೇತೃತ್ವದಲ್ಲಿ ಉಭಯ ಶ್ರೀಗಳವರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಸಮಿತಿಯ ಅಧ್ಯಕ್ಷ ಸತೀಶ ಎಂ.ನಾಯಕ್, ಕಾರ್ಯದರ್ಶಿ ಪ್ರಶಾಂತ ಪೈ, ಸಮಿತಿಯ ಸದಸ್ಯರು, ಊರಿನ ಹತ್ತು ಸಮಸ್ತರು, ಸಮಾಜಬಾಂಧವರು, ಭಗವದ್ಭಕ್ತರು ಮತ್ತಿತರರು ಉಪಸ್ಥಿತರಿದ್ದರು.

Call us

Call us

Leave a Reply

Your email address will not be published. Required fields are marked *

19 − 14 =