ಗೋಡೆ ವೀಡಿಯೊ ಸಂಸ್ಥೆಯಿಂದ ಜಿಲ್ಲೆಯ ಪ್ರಥಮ ಎಲ್‌ಇಡಿ ವಾಲ್ ಬಿಡುಗಡೆ

Call us

Call us

ಕುಂದಾಪುರ: ವೇಗವಾಗಿ ಮುನ್ನಡೆಯುತ್ತಿರುವ ಆಧುನಿಕ ಜಗತ್ತಿನ ಜನಜೀವನಕ್ಕೆ ಹತ್ತಿರವಾಗುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಸಾಂಸ್ಕೃತಿಕ, ಸಂಘಾಟನಾತ್ಮಕ ಚಟುವಟಿಕೆಯ ಮೆರಗನ್ನು ಇಮ್ಮಡಿಗೊಳಿಸಬಲ್ಲ ಎಲ್‌ಇಡಿ ವಾಲ್‌ನ್ನು ಪರಿಚಯಿಸುತ್ತಿರುವ ಗೋಡೆ ವೀಡಿಯೊ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಎಸ್‌ಕೆಪಿಎ ಕುಂದಾಪುರ ವಲಯದ ಸಲಹಾ ಸಮಿತಿ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ ಹೇಳಿದರು.

Call us

Call us

Call us

ಅವರು ಕುಂದಾಪುರದ ಹೋಟೆಲ್ ಹರಿಪ್ರಸಾದ್‌ನ ಅಕ್ಷತಾ ಸಭಾಂಗಣದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ ಎಸೋಸಿಯೇಶನ್(ರಿ) ಕುಂದಾಪುರ ವಲಯದ 21ನೇ ಮಹಾಸಭೆಯಲ್ಲಿ ಕುಂದಾಪುರದ ಗೋಡೆ ಡಿಜಿಟಲ್ ಸ್ಟುಡಿಯೋ ಮತ್ತು ವೀಡಿಯೋ ಅವರ ಎಲ್‌ಇಡಿ ವಾಲ್‌ನ್ನು ಬಿಡುಗಡೆಗೊಳಿಸಿ ಮಾತನಾಡಿದರು.

Call us

Call us

ವಿಶೇಷ ಸಭೆ, ಸಮ್ಮೇಳನ, ರಾಜಕೀಯ ಸಮಾವೇಶ, ಸಾಂಸ್ಕೃತಿಕ ಉತ್ಸವ, ಧಾರ್ಮಿಕ ಉತ್ಸವ, ಶಾಲಾ, ಕಾಲೇಜು ವಾರ್ಷಿಕೋತ್ಸವ, ಮದುವೆ ಮೊದಲಾದ ಶುಭ ಸಮಾರಂಭಗಳ ಅಂದವನ್ನು ಇಮ್ಮಡಿಗೊಳಿಸಬಲ್ಲ ಎಲ್‌ಇಡಿ ವಾಲ್‌ನ್ನು ಬಳಸಿಕೊಳ್ಳಬಹುದಾಗಿದೆ.

ಈ ಸಂದರ್ಭದಲ್ಲಿ ಕುಂದಾಪುರದ ಗೋಡೆ ಡಿಜಿಟಲ್ ಸ್ಟುಡಿಯೋ ಮತ್ತು ವೀಡಿಯೋ ಮಾಲಕ ದಿನೇಶ್ ಗೋಡೆ, ಉಡುಪಿ ಜಿ. ಪಂ. ಉಪಾಧ್ಯಕ್ಷ ಪ್ರಕಾಶ್ ಟಿ. ಮೆಂಡನ್, ಕುಂದಾಪುರ ಉಪ ಪೊಲೀಸ್ ಅಧೀಕ್ಷಕ ಮಂಜುನಾಥ ಶೆಟ್ಟಿ, ಉದ್ಯಮಿಗಳಾದ ಉದಯಚಂದ್ರ ಎಚ್.ಎಸ್., ಜಿತೇಶ್ ಕಿದಿಯೂರು, ಎಸ್‌ಕೆಪಿಎ(ರಿ) ಅಧ್ಯಕ್ಷ ವಾಸುದೇವ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಮಧು ಮಂಗಳೂರು, ಆನಂದ್ ಬಂಟ್ವಾಳ, ಎಸ್‌ಕೆಪಿಎ ಕುಂದಾಪುರ ವಲಯದ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಗೌರವಾಧ್ಯಕ್ಷ ರೋಬರ್ಟ್ ಡಿಸೋಜಾ, ಕಾರ್ಯದರ್ಶಿ ರಾಜಾ ಮಠದಬೆಟ್ಟು, ಉಪಾಧ್ಯಕ್ಷರಾದ ಗ್ರೇಶನ್ ಡಯಾಸ್, ದೊಟ್ಟಯ್ಯ ಪೂಜಾರಿ, ಕೋಶಾಧಿಕಾರಿ ರಾಘು ವಿಠ್ಠಲವಾಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

3 × one =