ಗೋಪಾಡಿ: ಸಾಮೂಹಿಕ ಗೋಪೂಜೆ, ಭವ್ಯ ಶೋಭಾಯಾತ್ರೆ

Call us

Call us

ಕುಂದಾಪ್ರ ಡಾಟ್ ಕಾಂ ಸದ್ದಿ.
ಕುಂದಾಪುರ:
ಇಂದಿನ ಆಧುನಿಕ ಜಗತ್ತಿನ ಪ್ಯಾಷನ್ ಲೋಕದಲ್ಲಿ ಲಕ್ಷಗಟ್ಟಲೇ ಹಣ ನೀಡಿ ನಾಯಿಗಳನ್ನು ಸಾಕುತ್ತಾರೆ. ಇದರಿಂದ ಶ್ರೀಮಂತಿಕೆ ಎಂಬುಂದನ್ನು ತೋರ್ಪಡಿಸುವುದು ಬಿಟ್ಟರೆ ಬೇರೆ ಯಾವುದೇ ಲಾಭಗಳಿಲ್ಲ. ಆದರೆ ಪ್ರಸ್ತುತ ಪರಿಸ್ಥಿತಿಗೆ ಪ್ರತಿ ಮನೆಗೊಂದು ಗೋವುಗಳನ್ನು ಸಾಕಬೇಕಾಗಿದೆ. ಗೋವು ನಮ್ಮ ಮನೆಯ ದೇವರು ಎಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಜಿಲ್ಲಾ ಸಹಸಂಚಾಲಕ ಸುರೇಂದ್ರ ಕೋಟೇಶ್ವರ ಹೇಳಿದರು.

Call us

Click here

Click Here

Call us

Call us

Visit Now

Call us

ಅವರು, ವಿಶ್ವ ಹಿಂದೂ ಪರಿಷದ್ ಬಜರಂಗದಳ ಕುಂದಾಪುರ ಪ್ರಖಂಡ ಬೀಜಾಡಿ ವಲಯದ ನೇತೃತ್ವದಲ್ಲಿ ಗೋಪಾಡಿ ಶ್ರೀ ಚಿಕ್ಕು ಅಮ್ಮ ದೈವಸ್ಥಾನದ ವಠಾರದಲ್ಲಿ 2ನೇ ವರ್ಷದ ಸಾಮೂಹಿಕ ಗೋಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದರು.

ಮುಂಜಾನೆ ಹಾಸಿಗೆಯಿಂದ ಎದ್ದ ಬಳಿಕ ಗೋವಿನ ಮುಖ ಮೊದಲು ನೋಡಿದರೆ ಅದೆಷ್ಟೂ ನಮ್ಮ ಕರ್ಮವನ್ನು ತೊಳೆದ ಫಲಗಳು ನಮಗೆ ಸಿಗುತ್ತದೆ. ಸಾರ್ವಜನಿಕರಲ್ಲಿ ಗೋವುಗಳ ಬಗ್ಗೆ ಜಾಗೃತಿ ಮತ್ತು ಸನಾತನ ಹಿಂದೂ ಸಂಸ್ಕೃತಿಯ ಉಳಿವಿಗಾಗಿ ಇತಂಹ ಸಾಮೂಹಿಕ ಗೋಪೂಜೆಯನ್ನು ದೇಶದ್ಯಾಂತ ವಿಶ್ವ ಹಿಂದೂ ಪರಿಷತ್ ಬಜರಂಗದಳ ನಡೆಸಿಕೊಂಡು ಬರುತ್ತಿದೆ ಎಂದರು.

ಕುಂದಾಪುರ ಪ್ರಖಂಡ ಮಠ ಮಂದಿರ ಸಂಪರ್ಕ ಪ್ರಮುಖ್ ಶ್ರೀನಿವಾಸ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ಸಂಘಚಾಲಕ ಗುರುರಾಜ್ ರಾವ್, ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಸಂಪರ್ಕ ಪ್ರಮುಖ್ ಗಿರೀಶ್ ಕುಂದಾಪುರ, ಕುಂದಾಪುರ ಪ್ರಖಂಡ ಬಜರಂಗದಳ ಸಂಚಾಲಕ ಸುಧೀರ್ ಮೇರ್ಡಿ, ಬೀಜಾಡಿ ವಲಯ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಗಣೇಶ್ ಕಾಂಚನ್, ಬೀಜಾಡಿ ವಲಯ ಬಜರಂಗದಳ ಸಂಚಾಲಕ ಮಣೀಶ್ ಶ್ರೀಯಾನ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬೀಜಾಡಿ ಮೀನುಗಾರಿಕಾ ಸೊಸೈಟಿ ಸರ್ಕ್‌ಲ್ ನಿಂದ ಗೋಪಾಡಿ ಚಿಕ್ಕು ಅಮ್ಮ ದೈವಸ್ಥಾನದ ತನಕ ಭವ್ಯ ಶೋಭಾಯಾತ್ರೆಯೊಂದಿಗೆ ಭಜನೆ, ನಾಮಸಂರ್ಕೀತನೆ, ಚಂಡೆವಾದನ ಶೋಭಾ ಯಾತ್ರೆಯ ಮೆರಗನ್ನು ಹೆಚ್ಚಿಸಿತು. ಬೀಜಾಡಿ ಹೊದ್ರಾಳಿ ಘಟಕದ ಕಾರ್ಯದರ್ಶಿ ಶ್ರೀಕಾಂತ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Call us

Leave a Reply

Your email address will not be published. Required fields are marked *

ten − three =