ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘ ಮಹಾಸಭೆ

Call us

Call us

Call us

Call us

ಕುಂದಾಪುರ: ತಾಲೂಕಿನ ಮಡಾಮಕ್ಕಿ ಗ್ರಾಮವನ್ನು ಹೊರತುಪಡಿಸಿ, ಉಳಿದ ೧೦೦ ಗ್ರಾಮಗಳ ವ್ಯಾಪ್ತಿಗೆ ತನ್ನ ಕಾರ್ಯಕ್ಷೇತ್ರವನ್ನು ಹೊಂದಿರುವ ಈ ಸಂಘವು ಆಯಾ ಗ್ರಾಮಗಳ ನೋಂದಾಯಿತ ಸದಸ್ಯರಿಗೆ ಸೇವೆ ನೀಡುತ್ತಿದೆ. ಸದಸ್ಯತ್ವ ವರ್ಷಂತ್ಯಕ್ಕೆ 31.42 ವೃದ್ಧಿಯಾಗಿದ್ದು, ಪಾಲುಹಣ ಶೇ. 18.19 ರಷ್ಟು, ಶೇ. 17.16 ರಷ್ಟು ವೃದ್ದಿಯಾಗಿ ವೃದ್ಧಿಯಾಗಿದೆ ಎಂದು ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘ ನಾವುಂದ ಇದರ ಅಧ್ಯಕ್ಷರಾದ ರಮೇಶ ಗಾಣಿಗ ತಿಳಿಸಿದರು. ಅವರು ಸಂಘದ ಪ್ರಧಾನ ಕಛೇರಿಯಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Call us

Click Here

Click here

Click Here

Call us

Visit Now

Click here

ಸಂಘವು 2014-15 ನೇ ಸಾಲಿನ ಲೆಕ್ಕ ಪರಿಶೋಧನೆ ವರದಿಯಂತೆ ರೂ. 8,85,713 ನಿವ್ವಳ ಲಾಭ ಗಳಿಸಿದ್ದು, ಲಾಭಾಂಶದಲ್ಲಿ ಸದಸ್ಯರಿಗೆ ಶೇಕಡಾ 11 ಡಿವಿಡೆಂಡ್ ಘೋಷಿಸಬಹುದು, ಬಾಕಿ ಲಾಭವನ್ನು ಸಹಕಾರಿ ನಿಯಮದಂತೆ ಹಂಚಲಾಗುವುದು ಸಂಘವು ವರದಿ ಸಾಲಿನಲ್ಲಿ ರೂ. 15,76,23,307.45 ವ್ಯವಹಾರ ಮಾಡಿದ್ದು, ಶೇ. 30.42 ರಷ್ಟು ವೃದ್ದಿಯಾಗಿದೆ. ಪ್ರಸಕ್ತ ಸಾಲಿನ ಅಡಿಟ್ ವರ್ಗೀಕರಣವು ’ಎ’ ತರಗತಿಯಲ್ಲಿದೆ ಎಂದರು. ಇದು ಕೇವಲ ಏಳು ವರ್ಷದ ಯಶಸ್ವಿ ಸಾಧನೆ ಎಂದು ಹೇಳಬಹುದು. ಮುಂದಿನ ದಿನಗಳಲ್ಲಿ ಸಂಘದ ಅಧೀನದಲ್ಲಿ ಸ್ವ-ಸಹಾಯ ಗುಂಪುಗಳನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದರು.

ವರದಿ ವರ್ಷದ ಆರಂಭಕ್ಕೆ ಸಂಘದಲ್ಲಿ 1,112 ’ಎ’ ತರಗತಿಯ ಸದಸ್ಯರಿದ್ದು, ವರದಿ ಸಾಲಿನಲ್ಲಿ 57 ಸದಸ್ಯರು ಸೇರ್ಪಡೆಯಾಗಿ, ವರ್ಷಾಂತ್ಯಕ್ಕೆ 1,167 ಸದಸ್ಯರಿದ್ದಾರೆ. ವರ್ಷಾಂತ್ಯಕ್ಕೆ ಒಟ್ಟು 3,087 ಸದಸ್ಯರಿದ್ದಾರೆ ಇದು ಪ್ರತಿಶತ 31.42 ರಷ್ಟು ವೃದ್ದಿಯಾಗಿದೆ. ವರದಿ ವರ್ಷದ ಆರಂಭದಲ್ಲಿ ’ಎ’ ತರಗತಿಯ ರೂ. 22,51,800 ಪಾಲು ಹಣವಿದ್ದು, ವರದಿ ಸಾಲಿನಲ್ಲಿ ರೂ. 501,900ಜಮಾ ಆಗಿ, ರೂ. 2,41,700 ಮರುಪಾವತಿಯಾಗಿ ವರ್ಷಾಂತ್ಯಕ್ಕೆ ರೂ. 25,12,000 ಇರುತ್ತದೆ. ಸಂಘದ ಸದಸ್ಯರಿಗೆ ಯಶಸ್ವಿನಿ ವಿಮೆ ನೋಂದಣಿ ಸೌಲಭ್ಯವನ್ನು ನೀಡುತ್ತಿದ್ದೇವೆ. ಕಳೆದ ಸಾಲಿನಲ್ಲಿ 150 ಸದಸ್ಯರನ್ನು ಈ ಯೋಜನೆಯಡಿ ನೋಂದಾಯಿಸಿ ಕೊಳ್ಳಲಾಗಿದ್ದು, ಈ ಸಾಲಿನಲ್ಲಿ ಇಲ್ಲಿ ತನಕ 170 ಸದಸ್ಯರನ್ನು ನೋಂದಾಯಿಸಲಾಗಿದೆ. ಸಂಘದ ವ್ಯಾಪ್ತಿಯಲ್ಲಿ ಕಲಿತ ಸದಸ್ಯರ ಮಕ್ಕಳಿಗೆ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ನಗದು ರೂಪದಲ್ಲಿ ಪ್ರತಿಭಾ ಪುರಸ್ಕಾರ, ಈ ಸಾಲಿನಲ್ಲಿ ಗ್ರಾಮ ಪಂಚಾಯತ್‌ಗೆ ಆಯ್ಕೆಯಾದ ಸದಸ್ಯರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ಸುಧೀರ್ ಪಂಡಿತ್ ಕುಂಭಾಶಿ, ನಿರ್ದೇಶಕರಾದ ಶಶಿಕಲಾ ನಾರಾಯಣ ಗಾಣಿಗ ಕುಂದಾಪುರ, ನವೀನ್ ಎನ್.ಗಾಣಿಗ ನಾವುಂದ, ಮಂಜುನಾಥ ಗಾಣಿಗ ಗಂಗೊಳ್ಳಿ, ಕೆ.ರಮಾನಂದ ಕುಂದಾಪುರ, ಬಿ.ಎಂ.ನಾಗರಾಜ ಗಾಣಿಗ ಬೈಂದೂರು, ಜಾನಕಿ ಗಾಣಿಗ ಶಿರೂರು ಉಪಸ್ಥಿತರಿದ್ದರು. ಪ್ರಧಾನ ವ್ಯವಸ್ಥಾಪಕ ನಾಗರಾಜ ಗಾಣಿಗ ಹಿಲ್ಕೋಡು ವರದಿ ಮಂಡಿಸಿದರು. ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ್ ಗಾಣಿಗ ಬೈಂದೂರು ವಂದಿಸಿದರು.

Gopalakrishna vividoddesha seva sahakari sanga nagoor byndoor (1)r

Call us

Leave a Reply

Your email address will not be published. Required fields are marked *

11 + 17 =