ಗೋಳಿಹೊಳೆ: ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಮಾವೇಶ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅಖಿಲ ಭಾರತ ನಿಮಾ೯ಣಕಾಮಿ೯ಕರ ಫೆಡರೇಶನ್ ನವದೆಹಲಿಗೆ ಸಂಯೋಜಿಸಲ್ಪಟ್ಟ ಕನಾ೯ಟಕ ರಾಜ್ಯ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಫೆಡರೇಶನ್ ನೇತೃತ್ವದಲ್ಲಿ ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಂಘದಡಿಯಲ್ಲಿ ಗೋಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರೆಶಿರೂರು ಪ್ರದೇಶದ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಮಾವೇಶವು ಅರೆಶಿರೂರು ಪ್ರಾಥಮಿಕ ಶಾಲಾ ವಠಾರದಲ್ಲಿ ಜರುಗಿತು.

Click Here

Call us

Call us

ಬೈಂದೂರು ತಾಲೂಕು ಹಾಗೂ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಂಘ (ಸಿಐಟಿಯು)ದ ಕಾಯ೯ದಶಿ೯ ಶ್ರೀಧರ ಉಪ್ಪುಂದ ಮಾತನಾಡಿ, ಕನಾ೯ಟಕ ಕಟ್ಟಡ ಮತ್ತು ಇತರೆ ನಿಮ೯ಣ ಕಾಮಿ೯ಕರ ಕಲ್ಯಾಣ ಮಂಡಳಿಯಲ್ಲಿ ಕಾಮಿ೯ಕರ ಸಾಮಾಜಿಕ ಭದ್ರತೆಯ ವಿವಿಧ ಸೌಲಭ್ಯಕ್ಕಾಗಿ ಜಮೆ ಯಾಗಿರುವ ಕೋಟ್ಯಾಂತರ ರೂಪಾಯಿ ಕಾಮಿ೯ಕರ ಹಕ್ಕಿನ ಸೆಸ್ ಹಣ,ಮೀಸಲಿಟ್ಟಿರುವುದನ್ನು ಸಕಾಲದಲ್ಲಿ ಮಂಜೂರು ಮಾಡುವುದಕ್ಕೆ ಸೂಕ್ತ ಕ್ರಮವಹಿಸಬೇಕು ಎಂದು ಸರಕಾರವನ್ನುಒತ್ತಾಯಿಸಿದರು.

Click here

Click Here

Call us

Visit Now

ಕಾಮಿ೯ಕ ಮುಖಂಡ ವೆಂಕಟೇಶ್ ಕೋಣಿ ಸಭೆಯನ್ನದ್ದೇಶಿಸಿ ಮಾತನಾಡಿ, ಕಟ್ಟಡ ಕಾಮಿ೯ಕರ ಕಲ್ಯಾಣ ಮಂಡಳಿಯಿಂದ ಲಭ್ಯವಿರುವ ವಿವಿಧ ಸೌಲಭ್ಯಗಳ ಮಾಹಿತಿ ನೀಡಿದರು.

ಅರೆಶಿರೂರು ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಂಘಕ್ಕೆ ಅಧ್ಯಕ್ಷರಾಗಿ ರಾಘವೇಂದ್ರ ಗಾಣಿಗ, ಉಪಾಧ್ಯಕ್ಷರಾಗಿ ನಾರಾಯಣ ನಾಯ್ಕ, ಕಾಯ೯ದಶಿ೯ ರಾಘವೇಂದ್ರ ಕೊಠಾರಿ, ಜೊತೆ ಕಾಯ೯ದಶಿ೯ಯಾಗಿ ಪ್ರಶಾಂತ ನಾಯ್ಕ ಇವರನ್ನು ಸವಾ೯ನುಮತದಿಂದ ಆಯ್ಕೆ ಮಾಡಲಾಯಿತು.

Call us

Leave a Reply

Your email address will not be published. Required fields are marked *

four + 12 =