ಗೋವಾ: ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರಾಗಿ ರವೀಂದ್ರ ತೋಟಿಗೇರ ಆಯ್ಕೆ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಗೋವಾ: ಪ್ರತಿವರ್ಷದಂತೆ ಈ ವರ್ಷವು ಸಹ ಇದೆ ಮೇ 27 ರಂದು ಗೋವಾದ ಬೀಚೋಲಿಯಂನ ರಾಧಾಬಾಯಿ ಸಭಾಂಗಣದಲ್ಲಿ ಜರುಗಲಿರುವ ದಶಮಾನೋತ್ಸವದ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವಕೀಲರು, ಸಾಹಿತಿಗಳು ಮತ್ತು ಕನ್ನಡದ ನುಡಿ ಸೇವಕರಾದ ಶ್ರೀ ರವೀಂದ್ರ ತೋಟಿಗೇರರವರು ಆಯ್ಕೆಯಾಗಿದ್ದಾರೆ.

Call us

Call us

Visit Now

ಪೂರ್ವಭಾವಿ ಸಭೆಯಲ್ಲಿ ಗೋವಾದಲ್ಲಿ ನೆಡೆಯುವ ದಶಮಾನೋತ್ಸವ ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರಾಗಿ ರವೀಂದ್ರ ತೋಟಿಗೇರ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಅವರ ಅಧ್ಯಕ್ಷತೆಯಲ್ಲಿ ದಶಮಾನೋತ್ಸವದ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ ಜರುಗಲಿದ್ದು ಇದರಲ್ಲಿ ರಾಜ್ಯದ ಕವಿಗಳು ಭಾಗವಹಿಸಿ ತಮ್ಮ ಕವನವಾಚನ ಮಾಡಲಿದ್ದಾರೆ ಎಂದು ಕರ್ನಾಟಕ ಜಾಗೃತಿ ವೇದಿಕೆ ಅಧ್ಯಕ್ಷ ಶಿವಬಾಲ ಸಾಮಿ ತಿಳಿಸಿದ್ದಾರೆ.

Click here

Click Here

Call us

Call us

ಇದೇ ಸಂದರ್ಭದಲ್ಲಿ ಮಾತನಾಡಿದ ಮಹೇಶ ಬಾಬು ಸುರ್ವೆ ಬೆಳೆಗಾವಿಯ ವಕೀಲರು, ಸಾಹಿತಿ, ಕನ್ನಡದ ನುಡಿ ಸೇವಕ ರವೀಂದ್ರ ತೋಟಿಗೇರ ರವರು ಕಳೆದ ೨೫ ವರ್ಷಗಳಿಂದ ನಾಡಿನ ನುಡಿ ಸೇವಕರಾಗಿ ಗಡಿ ಹೋರಾಟಗಾರರಾಗಿ ಪತ್ರಕರ್ತರಾಗಿ ಸೇವೆಸಲ್ಲಿಸುತಿದ್ದಾರೆ.

Click Here

ಬರಹಗಾರರಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಜನಮಾನಸದಲ್ಲುಳಿದಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಜೀವನೋತ್ಸಾಹದ ಗಡಿ ಹೋರಾಟಗಾರರು ಎಂದೇ ಖ್ಯಾತಿ ಪಡೆದ ರವೀಂದ್ರರವರು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಸಾಂದರ್ಭಿಕವಾಗಿ ಕಾನೂನು ಬಗ್ಗೆ ಲೇಖನಗಳನ್ನು ಬರೆದಿದ್ದಾರೆ. ಖ್ಯಾತ ನಾಮ ಚಿತ್ರ ನಟರ,ಸಾಹಿತಿ ದಿಗ್ಗಜರ ಸಾಧಕರ ಒಡನಾಟದಿಂದ ಬರಹಗಾರಿಕೆಯಲ್ಲಿ ಸೈ ಎನಿಸಿಕೊಂಡಿದ್ದಾರೆ.

ಗಡಿ ಉತ್ಸವದ ಕವಿಗೋಷ್ಠಿ, ಚಂದನ ದೂರದರ್ಶನ, ಆಕಾಶವಾಣಿ ಹಾಗೂ ಅನೇಕ ಉತ್ಸವದ ಕವಿಗೋಷ್ಠಿಯಲ್ಲಿಯೂ ಕಾವ್ಯ ವಾಚನ ಸೇರಿದಂತೆ ಅನೇಕ ಕಡೆಗಳಲ್ಲಿ ಕವನ ವಾಚಿಸಿದ್ದಾರೆ. ಸಾಹಿತ್ಯಗೋಷ್ಠಿ, ಉತ್ಸವ ಮುಂತಾದ ಕಡೆಗಳಲ್ಲಿ ಉಪನ್ಯಾಸ ನೀಡಿದ ಕೀರ್ತಿ ಇವರದಾಗಿದೆ ಎಂದರು .

ಕರ್ನಾಟಕ ಕಲಾ ರತ್ನ, ಕಾಯಕ ರತ್ನ ಕರುನಾಡ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಪುಸ್ತಕ ಪ್ರಕಟಣೆಯ ಗ್ರಂಥ ಹೊರತರುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.

ಬಹುಪಾಲು ಸಂಘದ ಜಿಲ್ಲಾಧ್ಯಕ್ಷರಾಗಿಯೂ ಸೇವೆಸಲ್ಲಿಸಿದ್ದಾರೆ ಈ ಎಲ್ಲ ಅಂಶವನ್ನು ಗಣನೆಗೆ ಪರಿಗಣಿಸಿ ರವೀಂದ್ರವರನ್ನು ಆಯ್ಕೆ ಮಾಡಲಾಗಿದೆ ಎಂದರು. ಮಹೇಶ ಬಾಬು ಸುರ್ವೆ ಸೂಚಿಸಿದರು, ಶಿವಬಾಲ ಸಾಮಿ ಅನುಮೋದಿಸಿದರು.

ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ನಾಗರಿಕರ ವೇದಿಕೆಯ ರಾಜ್ಯಾದ್ಯಕ್ಷ ಮಹೇಶಬಾಬು ಸುರ್ವೆ ಅಖಿಲ ಗೋವಾ ಕನ್ನಡ ಸಂಘದ ರಾಜಾದ್ಯಕ್ಷ ಹನುಮಂತ ರಡಿ ಶಿರೊರ ರಾಜ್ಯಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ, ಅನಂತ, ರವಿ, ಶಿವಣ್ಣ ಮೊಹನ, ಮಂಜುನಾಥ, ರಾಜು ಬಸವರಾಜ ಸಿನೂರ, ಮಹಾಂತೇಶ ಹೀರೇಮಠ ಪ್ರಭು ರತ್ನಾಕರ, ಮಲ್ಲಿಕಾರ್ಜುನ ಮಠ, ಉಸಮಾನ ಸಂಗಂ ಜಿಲ್ಲಾನ ಸೇರಿದಂತೆ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

one × 4 =