ಗೋ ಗ್ರೀನ್ ವೀಕ್ ಪರಿಸರ ಸಪ್ತಾಹ ಉದ್ಘಾಟನೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೇಸಿಐ ಉಪ್ಪುಂದ ಇವರ ನೇತೃತ್ವದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ’ಗೋ ಗ್ರೀನ್ ವೀಕ್’ ಪರಿಸರ ಸಪ್ತಾಹ ಹೇರಂಜಾಲು ಮೊರಾರ್ಜಿ
ದೇಸಾಯಿ ವಸತಿ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಗೋಕುಲ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿ
ಶುಭ ಹಾರೈಸಿದರು.

Call us

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಮಾತನಾಡಿ ’ಪರಿಸರ ಮತ್ತು ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳು.
ಈ ಜಗತ್ತು ಕೇವಲ ಮಾನವನಿಗೆ ಮಾತ್ರ ಸೇರಿದ್ದಲ್ಲ. ಹಾಗಾಗಿ ಪರಿಸರ ಮಾಲಿನ್ಯವನ್ನು ನಿರಂತರವಾಗಿ ಮಾಡುತ್ತಿರುವ ನಾವುಗಳು ಎಚ್ಚೆತ್ತುಕೊಳ್ಳಬೇಕು. ಅರಣ್ಯ ನಾಶದಂತಹ
ವಿನಾಶಕಾರಿ ನಡಿಗೆಗಳಿಂದ ಮನುಷ್ಯ ಆರೋಗ್ಯಪೂರ್ಣ ಪರಿಸರಕ್ಕೆ ಕಂಟಕಪ್ರಾಯನಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಅಭಿವೃದ್ದಿ ಎಂಬುವುದು ಪರಿಸರಕ್ಕೆ
ಪೂರಕವಾಗಿರಬೇಕೆ ಹೊರತು ಅದನ್ನು ಹಾಳುಗೆಡಹುದಲ್ಲ. ಆಧುನಿಕತೆಯ ಭರಾಟೆಯಲ್ಲಿ ಪ್ರಜ್ಞಾವಂತಿಕೆಯನ್ನು ನಾವುಗಳು ಕಳೆದುಕೊಳ್ಳುತ್ತಿದ್ದೇವೆನೋ ಎನ್ನುವ ಭಾವನೆ
ಮೂಡುತ್ತಿದೆ. ಪ್ರಕೃತಿಯನ್ನು ಅನುಸರಿಸಿ ನಡೆದರೆ ಮಾತ್ರ ನಮ್ಮ ಅಸ್ಥಿತ್ವ ಉಳಿಯಲು ಸಾಧ್ಯ. ಅದಲ್ಲವಾದಲ್ಲಿ ಪರಿಸರ ನಾಶದೊಂದಿಗೆ ಮನುಕುಲದ ನಾಶವಾಗುವುದು ನಿಶ್ಚಿತ’
ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ್ಪುಂದ ಜೇಸಿಐ ಅಧ್ಯಕ್ಷ ನರಸಿಂಹ ಹಳಗೇರಿ ವಹಿಸಿದ್ದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಕಮಲಾ ನಾಯಕ್, ಜೇಸಿಐ
ನಿಕಟಪೂರ್ವ ಅಧ್ಯಕ್ಷರಾದ ಸುಬ್ರಹ್ಮಣ್ಯ ಜಿ., ಗಿರೀಶ ಶ್ಯಾನುಭಾಗ್, ದಿವಾಕರ ಶೆಟ್ಟಿ, ಉದಯ ಮೊದಲಾದವರು ಉಪಸ್ಥಿತರಿದ್ದರು. ಜೇಸಿಐ ಕಾರ್ಯದರ್ಶಿ ಮಂಜುನಾಥ ದೇವಾಡಿಗ
ವಂದಿಸಿದರು.

Leave a Reply

Your email address will not be published. Required fields are marked *

one × one =