ಗ್ಯಾಸ್‌ ಸೋರಿಕೆ: ಬೆಂಕಿ ತಗುಲಿ ಮಹಿಳೆ ಗಂಭೀರ

ಕುಂದಾಪುರ: ಗ್ಯಾಸ್‌ ಸೋರಿಕೆಯಿಂದಾಗಿ ಅಕಸ್ಮಿಕವಾಗಿ ಬೆಂಕಿ ತಗುಲಿ ನಗರದ ಹಂಗಳೂರು ಬಳಿಯ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಜೆಸಿಂತಾ ಡಿಸೋಜಾ ( 40) ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬುಧವಾರ ರಾತ್ರಿ ಸ್ವಲ್ಪ ಕಾಲ ಹೋದ ವಿದ್ಯುತ್‌ ಪುನಃ ಬಂದಾಗ ಗ್ಯಾಸ್‌ ಹಚ್ಚಲು ಹೋದ ಮಹಿಳೆಗೆ ಅಕಸ್ಮಿಕವಾಗಿ ಬಟ್ಟೆಗೆ ಬೆಂಕಿ ತಗುಲಿದೆ. ಇದನ್ನು ಗಮನಿಸಿದ ಅವರ ಪತಿ ತಕ್ಷಣ ಆಗಮಿಸಿ ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಇದರಿಂದ ಪತಿಗೂ ಸಹ ಬೆಂಕಿ ತಗುಲಿ ಗಾಯಗಳಾಗಿದೆ. ತಕ್ಷಣ ಆಸುಪಾಸಿನವರು ಆಗಮಿಸಿ ಬೆಂಕಿಯಿಂದ ಗಾಯಗೊಂಡ ಜೆಸಿಂತಾ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗ್ಯಾಸ್‌ ಸೋರಿಕೆಯಿಂದ ಸಂಭವಿಸಬಹುದಾದ ಇನ್ನಷ್ಟು ಅನಾಹುತವನ್ನು ತಪ್ಪಿಸಲು ತಕ್ಷಣ ಕುಂದಾಪುರದ ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿತ್ತು. ಸ್ಥಳಕ್ಕೆ ಕುಂದಾಪುರದ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ ಆಗಮಿಸಿ ಪರಿಶೀಲನೆ ನಡೆಸಿದರು. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

twenty − 17 =