ಗ್ರಾಮೀಣ ಭಾಗದಲ್ಲಿ ಸದಭಿರುಚಿಯ ಸಾಂಸ್ಕೃತಿಕ ಎಚ್ಚರ ಸಾಧನೆ: ವೆಂಕಟೇಶ ಪ್ರಸಾದ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಂಗಭೂಮಿಯ ಯಶಸ್ಸಿನಲ್ಲಿ ಪ್ರೇಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ. ಸುರಭಿ ಸಂಸ್ಥೆ ೧೯ ವರ್ಷಗಳಿಂದ ಬೈಂದೂರಿನಂತಹ ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಚಟುವಟಿಕೆಗಳ ಜತೆಗೆ ವಿವಿಧ ಕಲೆಗಳಲ್ಲಿ ಮಕ್ಕಳನ್ನು ತರಬೇತಿಗೊಳಿಸುವ ಮೂಲಕ ಸದಭಿರುಚಿಯ ಸಾಂಸ್ಕೃತಿಕ ಎಚ್ಚರ ಮೂಡಿಸಿರುವುದು ದೊಡ್ಡ ಸಾಧನೆ ಎಂದು ವೆಂಕಟೇಶ ಪ್ರಸಾದ್ ಹೇಳಿದರು.

Call us

Call us

Visit Now

ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಬೈಂದೂರು ಆಶ್ರಯದಲ್ಲಿ ಆಯೋಜಿಸಲಾದ ರಂಗಸುರಭಿ – ೨೦೧೯ ತ್ರಿದಿನ ನಾಟಕೋತ್ಸವದ ಅಂತಿಮ ದಿನವಾದ ಮಂಗಳವಾರ ದಿನದ ನುಡಿ ಆಡಿದರು.

Click here

Call us

Call us

ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ತಾವು ಅದನ್ನು ತ್ಯಜಿಸಿ ತಮ್ಮ ಆಸಕ್ತಿಯ ರಂಗಭೂಮಿಯಲ್ಲಿ ಪೂರ್ಣಕಾಲಿಕವಾಗಿ ತೊಡಗಿಕೊಂಡಿರುವುದಾಗಿ ಹೇಳಿದ ಅವರು ತಮ್ಮ ತಾಯಿ ಬೈಂದೂರಿನವರಾಗಿರುವುದರಿಂದ ತಮ್ಮಲ್ಲಿ ಈ ಮಣ್ಣಿನ ಗುಣ ಸೇರಿದೆ ಎಂದರು.

ಸನ್ಮಾನ ಸ್ವೀಕರಿಸಿದ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ಪ್ರವರ್ತಕ ಅರೆಹೊಳೆ ಸದಾಶಿವ ರಾವ್ ತಮ್ಮ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳೂರಿನಲ್ಲಿ ರಂಗಭೂಮಿ ಚಟುವಟಿಕೆಗಳನ್ನು, ನಂದಗೋಕುಲ ಸಂಘಟನೆಯ ಆಶ್ರಯದಲ್ಲಿ ನೃತ್ಯ, ಸಂಗೀತ ಚಟುವಟಿಕೆಗಳನ್ನು ನಡೆಸುತ್ತಿದ್ದು, ಅವು ತಮಗೆ ಆತ್ಮಸಂತೋಷ ನೀಡುತ್ತಿವೆ ಎಂದರು.

ಸುರಭಿ ಅಧ್ಯಕ್ಷ ಸತ್ಯನಾ ಕೊಡೇರಿ ಅಧ್ಯಕ್ಷತೆ ವಹಿಸಿದ್ದರು. ಮರವಂತೆಯ ವೈದ್ಯೆ ಡಾ. ರೂಪಶ್ರೀ, ಉದ್ಯಮಿ ಜಯಾನಂದ ಹೋಬಳಿದಾರ್, ನಿವೃತ್ತ ಉಪನ್ಯಾಸಕ ವಾಸುದೇವ ಕಾರಂತ್, ವಲಯ ಅರಣ್ಯಾಧಿಕಾರಿ ಶ್ರೀಧರ ಪಿ. ಅತಿಥಿಗಳಾಗಿದ್ದರು.

ಈ ಸಂದರ್ಭ ಸುರಭಿಯ ಮಹಿಳಾ ಕಲಾವಿದರಾದ ನಿಶ್ಮಿತಾ, ಕೀರ್ತಿ ಹಾಗೂ ಭ್ರಮರ ಉಡುಪ ಅವರ ಪೋಷಕರನ್ನು ಹಾಗೂ ಕಲಾವಿದೆ ಕಾವೇರಿ ಅವರನ್ನು ಗೌರವಿಸಲಾಯಿತು.

ಸುರಭಿ ಜೊತೆ ಕಾರ್ಯದರ್ಶಿ ಅಬ್ದುಲ್ ರವೂಫ್ ಸ್ವಾಗತಿಸಿ, ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ವಂದಿಸಿದರು. ಕೀರ್ತಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಣ ವೈ. ಕೊರಗ ಸಹಕರಿಸಿದರು. ಬಳಿಕ ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಅಭಿನಯ, ವೆಂಕಟೇಶ್ ಪ್ರಸಾದ್ ಅನುವಾದಿಸಿ ನಿರ್ದೇಶಿಸಿದ ’ಒಂದು ಪ್ರೀತಿಯ ಕಥೆ’ ನಾಟಕ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *

eleven + 1 =