ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗ್ರಾಮೀಣ ಪ್ರದೇಶದ ಸಂಪರ್ಕ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಅಗತ್ಯವಿರುವ ರಸ್ತೆ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.
ತ್ರಾಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಣದಮಕ್ಕಿ-ದೇವಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೋಟೆಮಕ್ಕಿ ಕ್ರಾಸ್ನಿಂದ ಮೊವಾಡಿ ಕ್ರಾಸ್ವರೆಗೆ ಎಸ್ಸಿಪಿ ಯೋಜನೆಯ ಅಡಿಯಲ್ಲಿ ₹ 38.21 ಲಕ್ಷ ಅಂದಾಜು ವೆಚ್ಚದಲ್ಲಿ 800 ಮೀಟರ್ ಕಾಂಕ್ರೀಟ್ ರಸ್ತೆಯಾಗುವುದರಿಂದ ಮಣ್ಣಿನ ರಸ್ತೆ ಮೇಲ್ದರ್ಜೆಗೇರಲಿದೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟ ಪೂಜಾರಿ, ಸದಸ್ಯ ರೇನ್ಸಮ್ ಪಿರೇರಾ, ರಮೇಶ ಆಚಾರ್ಯ ಅರಾಟೆ, ಸೀತಾರಾಮ ಶೆಟ್ಟಿ ಕೋಟೆಮಕ್ಕಿ, ಬಿಜೆಪಿ ಮುಖಂಡ ಶಿವರಾಮ ಶೆಟ್ಟಿ ಕಮ್ಮಾರಕೊಡ್ಲು, ಮಂಜು ಶೆಟ್ಟಿ, ನಾಗರಾಜ ಅರಾಟೆ, ರಾಘವೇಂದ್ರ ಆಚಾರ್ಯ, ಮಂಜುನಾಥ್, ಗುತ್ತಿಗೆದಾರ ಗುರುಪ್ರಸಾದ್ ಶೆಟ್ಟಿ ಯಡೇರಿ ಇದ್ದರು.