ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಚುನಾವಣಾ ಪ್ರಚಾರಕ್ಕಾಗಿ ಅಭ್ಯರ್ಥಿಗಳು ವಿವಿಧ ಪ್ರಚಾರ ತಂತ್ರಗಳನ್ನು ಅನುಸರಿಸುವುದು ಸಾಮಾನ್ಯ. ಹೀಗೆ ಕೊಂಬು ಕಹಳೆಯನ್ನು ಚುನಾವಣಾ ಚಿಹ್ನೆಯಾಗಿ ಪಡೆದಿದ್ದ ಅಭ್ಯರ್ಥಿಯೊರ್ವರು ಕಹಳೆಯ ಮೂಲಕವೇ ತಮ್ಮ ವಾರ್ಡಿನಲ್ಲಿ ಪ್ರಚಾರ ನಡೆಸಿ ಮತದಾರರ ಗಮನ ಸೆಳೆದಿದ್ದಾರೆ.
ತಾಲೂಕಿನ ಬಿಜೂರು ಗ್ರಾಮ ಪಂಚಾಯತ್ 1ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಸತೀಶ್ ಶೆಟ್ಟಿ ಎಂಬುವರು ಕೊಂಬು ಕಹಳೆಯೊಂದಿಗೆ ಪ್ರಚಾರಕ್ಕೆ ತೆರಳಿ ಗಮನ ಸೆಳೆದಿದ್ದು ಈ ಚಿತ್ರವೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸತೀಶ್ ಶೆಟ್ಟಿಯವರು ಈ ಹಿಂದೆ ಎರಡು ಬಾರಿ ಬಿಜೂರು ಗ್ರಾಮ ಪಂಚಾಯತ್ ಸದಸ್ಯರಾಗಿ ಒಮ್ಮೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.