ಗ್ರಾಮ ಮಟ್ಟದಿಂದಲೇ ಪಕ್ಷ ಸಂಘಟನೆ: ವಿನಯ ಕುಮಾರ ಸೊರಕೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಬುಧವಾರ ನಡೆದ ಪಕ್ಷದ ಕಾರ್ಯಕರ್ತರ ಹಾಗೂ ಪದಾಧಿಕಾರಿಗಳ ಸಭೆ ನಡೆಯಿತು.

Click Here

Call us

Call us

ಮಾಜಿ ಸಚಿವ ವಿನಯ ಕುಮಾರ ಸೊರಕೆ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶೇ 60 ರಷ್ಟು ಅನುದಾನಗಳು ಗ್ರಾಮ ಪಂಚಾಯಿತಿ ಯೋಜನೆಗಳ ಮೂಲಕವೇ ಅನುಷ್ಠಾನ ಆಗುವುದರಿಂದ ರಾಜಕೀಯ ಪಕ್ಷಗಳಿಗೆ ಅತ್ಯಂತ ಪ್ರಾಮುಖ್ಯ ಚುನಾವಣೆ ಇದಾಗಿದ್ದು, ಗ್ರಾಮ ಮಟ್ಟದಿಂದಲೇ ಪಕ್ಷ ಸಂಘಟನೆಗೆ ಕಾಂಗ್ರೆಸ್ ಪ್ರಯತ್ನ ನಡೆಸಲಿದೆ’ ಕೋವಿಡ್ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಿರುವುದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ. ಸಿದ್ದರಾಮಯ್ಯ ಸರ್ಕಾರ ನೀಡಿದ ಅನ್ನಭಾಗ್ಯದ ಸಹಾಯ ದೊರಕದೆ ಇದ್ದರೆ ಎಷ್ಟೋ ಜನರು ಉಪವಾಸ ಬೀಳುವ ಸಾಧ್ಯತೆಗಳಿದ್ದವು. ನರೇಗಾದಿಂದ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಲಭಿಸಿದೆ. ಸಂಬಳ, ಪರಿಹಾರ, ಅಭಿವೃದ್ಧಿಗೆ ಅನುದಾನ ನೀಡಲು ಹಣ ಇಲ್ಲದೆ ಇರುವ ಸರ್ಕಾರ ರಾಜ್ಯದಲ್ಲಿ ಇದ್ದೂ ಇಲ್ಲದಂತೆ ಇದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

Click here

Click Here

Call us

Visit Now

ಭಾವನಾತ್ಮಕ ಹಾಗೂ ಸುಳ್ಳು ಪ್ರಚಾರದೊಂದಿಗೆ ಚುನಾವಣೆ ಎದುರಿಸುವ ಬಿಜೆಪಿಯವರ ತಂತ್ರ ಈ ಬಾರಿ ನಡೆಯುವುದಿಲ್ಲ. 45 ವರ್ಷಗಳಲ್ಲಿ ಕಾಣದ ಆರ್ಥಿಕ ಅವನತಿ ದೇಶದಲ್ಲಿ ಕಾಣುತ್ತಿದೆ. ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಸರ್ಕಾರಿ ಆಸ್ತಿಗಳನ್ನು ಖಾಸಗಿಯವರಿಗೆ ಪರಭಾರೆ ಮಾಡಲಾಗುತ್ತಿದೆ. ಧರ್ಮ, ಜಾತಿಯ ಹೆಸರಿನಲ್ಲಿ ದೇಶವನ್ನು ಒಡೆಯುವ ಕೆಲಸ ಆಗುತ್ತಿದೆ .ನಾವು ಅಭ್ಯರ್ಥಿಗಳನ್ನು ಆಯ್ಕೆ ಮಾತ್ರ ಮಾಡುತ್ತೇವೆ. ಆದರೆ ಪ್ರತಿ ಪಕ್ಷದವರು ಅಭ್ಯರ್ಥಿಯನ್ನು ಕದಿಯುವುದರ ಜತೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಹೇಗೆ ಸೋಲಿಸಬೇಕು ಎನ್ನುವ ಷಡ್ಯಂತ್ರವನ್ನು ಮಾಡುತ್ತಾರೆ ಎಂದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಪ್ರಮುಖರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಬಿ.ಹಿರಿಯಣ್ಣ ಚಾತ್ರಬೆಟ್ಟು, ಶ್ಯಾಮಲಾ ಭಂಡಾರಿ,ದೇವಾನಂದ ಶೆಟ್ಟಿ, ಜ್ಯೋತಿ ವಿ. ಪುತ್ರನ್, ದೇವಕಿ ಪಿ. ಸಣ್ಣಯ್ಯ,ಗಣೇಶ್ ಶೇರುಗಾರ, ಅಶೋಕ ಪೂಜಾರಿ ಬೀಜಾಡಿ, ಇಚ್ಛಿತಾರ್ಥ, ಜಾನಕಿ ಬಿಲ್ಲವ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ ಕ್ರಾಸ್ಟೋ, ಖಜಾಂಚಿ ನಾರಾಯಣ ಆಚಾರ್ ಕೋಣಿ ಇದ್ದರು.

Leave a Reply

Your email address will not be published. Required fields are marked *

sixteen − three =