ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಬ್ರಹ್ಮರಥೋತ್ಸವದ ಅಂಗವಾಗಿ ಗ್ರೀಷ್ಮಾ ಕಿಣಿ ಮಂಗಳೂರು ಇವರಿಂದ ಭಜನ ಗಂಗಾ ಭಜನೆ ಕಾರ್ಯಕ್ರಮ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವಿದ್ಯಾಧಿರಾಜ ಸಭಾಭವನದಲ್ಲಿ ಜರಗಿತು.
ಹಾರ‍್ಮೋನಿಯಂನಲ್ಲಿ ಎಂ.ಮುಕುಂದ ಪೈ ಗಂಗೊಳ್ಳಿ, ಕೆ.ಕಾರ್ತಿಕ ಕಾಮತ್ ಕೋಟೇಶ್ವರ ತಬಲಾದಲ್ಲಿ ಮತ್ತು ಎನ್.ಅಜಿತ್ ನಾಯಕ್ ತಾಳದಲ್ಲಿ ಸಹಕರಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಜಿ.ವೇದವ್ಯಾಸ ಕೆ.ಆಚಾರ್ಯ, ಎಚ್.ಸುನೀಲ್ ನಾಯಕ್, ಟಿ.ರತ್ನಾಕರ ಶೆಣೈ, ಗಣೇಶ ಕಿಣಿ ಕಾರ್ಯಕ್ರಮ ಉದ್ಘಾಟಿಸಿದರು. ಸುಧಾ ವಿ.ಪೈ ಹಾಗೂ ಎಂ.ರಾಮಕೃಷ್ಣ ಪೈ ಕಲಾವಿದರನ್ನು ಗೌರವಿಸಿದರು. ನಿನಾದ ಸಂಸ್ಥೆಯ ಅಧ್ಯಕ್ಷ ಎಂ.ಮುಕುಂದ ಪೈ, ಸಂಸ್ಥೆಯ ಸದಸ್ಯರು, ಸಮಾಜಬಾಂದವರು ಮತ್ತಿತರರು ಉಪಸ್ಥಿತರಿದ್ದರು.