ಗಂಗೊಳ್ಳಿ: ಕಳೆದ ಸೋಮವಾರ ಇಲ್ಲಿನ ಮ್ಯಾಂಗನೀಸ್ ರಸ್ತೆಯಲ್ಲಿನ ಭಗತ್ ಸಿಂಗ್ ಅಭಿಮಾನಿ ಬಳಗವು ಭಗತ್ ಸಿಂಗ್ ಜನ್ಮದಿನಾಚರಣೆಯನ್ನು ಆಚರಿಸಿತು.ಗಂಗೊಳ್ಳಿಯ ಉದ್ಯಮಿ ವಿಠಲ್ ಶೆಣೈ ಅವರು ದೀಪ ಬೆಳಗಿಸಿ ನುಡಿ ನಮನ ಸಲ್ಲಿಸಿದರು. ಆ ಬಳಿಕ ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ ಮೌನ ಪ್ರಾರ್ಥನೆಯನ್ನು ಮಾಡಲಾಯಿತು, ಅಭಿಮಾನಿ ಬಳಗದ ಅಧ್ಯಕ್ಷ ವಿಶ್ವನಾಥ ಖಾರ್ವಿ ಮತ್ತು ಸರ್ವ ಸದಸ್ಯರು ಹಾಜರಿದ್ದರು.
ವರದಿ : ನರೇಂದ್ರ ಎಸ್ ಗಂಗೊಳ್ಳಿ