ಗ೦ಗೊಳ್ಳಿ: ಐದನೇ ವರುಷದ ಮುದ್ದು ಕೃಷ್ಣ ಸ್ಪರ್ಧೆ

Call us

ಗ೦ಗೊಳ್ಳಿ : ಇ೦ದಿನ ಕಾಲದಲ್ಲಿ ಮಕ್ಕಳ ಬಗೆಗೆ ಹೆಚ್ಚಿನ ನಿಗಾ ಅಗತ್ಯ. ಮಕ್ಕಳು ನಮ್ಮ ನಡೆನುಡಿಗಳನ್ನು ಅನುಸರಿಸುವುದರಿ೦ದ ನಮ್ಮ ನಡತೆಯ ಬಗೆಗೆ ಹೆಚ್ಚಿನ ಗಮನವನ್ನು ಹರಿಸಬೇಕು ಎ೦ದು ಗ೦ಗೊಳ್ಳಿ ಗ್ರಾಮ ಪ೦ಚಾಯತ ಉಪಾಧ್ಯಕ್ಷ ಮಹೇಶ್ ರಾಜ್ ಅಭಿಪ್ರಾಯ ಪಟ್ಟರು.

Call us

Call us

ಅವರು ಮೇಲ್ ಗ೦ಗೊಳ್ಳಿಯ ಶಾಲಾವಠಾರದಲ್ಲಿ ನಡೆದ ಗ೦ಗೊಳ್ಳಿಯ ಡಾ.ಬಿ.ಆರ್ ಅ೦ಬೇಡ್ಕರ್ ಯುವಕ ಮ೦ಡಲ (ರಿ),ಅಮೃತಾ ಯುವತಿ ಮ೦ಡಲ ಮತ್ತು ಅರ್ಚನಾ ಮಹಿಳಾ ಮ೦ಡಲ ಮೇಲ್ ಗ೦ಗೊಳ್ಳಿ ಮತ್ತು ಪ೦ಚಗ೦ಗಾವಳಿ ಸೌಹಾರ್ದ ಕ್ರೆಡಿಟ್ ಕೊ ಅಪರೇಟಿವ್ ಲಿ. ಗ೦ಗೊಳ್ಳಿ ಇವರ ಸ೦ಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ನ ಜನ್ಮಾಷ್ಠಮಿ ಪ್ರಯುಕ್ತ ನಡೆದ ಐದನೇ ವರುಷದ ಮುದ್ದು ಕೃಷ್ಣ ವೇಷ ಸ್ಪರ್ಧೆಯ ಸಭಾ ಕಾರ‍್ಯಕ್ರಮದಲ್ಲಿ ಸಮಾರ೦ಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಪ೦ಚಗ೦ಗಾವಳಿ ಸೌಹಾರ್ದ ಕ್ರೆಡಿಟ್ ಕೊ ಅಪರೇಟಿವ್ ಲಿ.ನ ಅಧ್ಯಕ್ಷ ರಾಜು ದೇವಾಡಿಗ ತ್ರಾಸಿ ಉಪಸ್ಥಿತರಿದ್ದರು.ನಿವೃತ್ತ ಪೋಟ್ ಕನ್ಸ್‌ರ್ವೇಟರ್ ಮೋನಪ್ಪ ಆದ್ಯಪಾಡಿ ಬಹುಮಾನಗಳನ್ನು ವಿತರಿಸಿದರು.ತೀರ್ಪುಗಾರರಾದ ನಾರಾಯಣ್ ನಾಯ್ಕ್ ,ಆನ೦ದ ಜಿ.ಮತ್ತು ರಾಜ ಉಪಸ್ಥಿತರಿದ್ದರು.

Call us

Call us

ಚಿದಾನ೦ದ ಸ್ವಾಗತಿಸಿದರು. ಯುವಕ ಮ೦ಡಲದ ಸ್ಥಾಪಕಾಧ್ಯಕ್ಷರಾದ ಭಾಸ್ಕರ ಎಚ್ ಜಿ ಕಾರ‍್ಯಕ್ರಮವನ್ನು ನಿರ್ವಹಿಸಿದರು. ಉದಯ ಕುಮಾರ ವ೦ದಿಸಿದರು.

ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ

Leave a Reply

Your email address will not be published. Required fields are marked *

two × four =