ಗ೦ಗೊಳ್ಳಿ :ಸರಸ್ವತಿ ವಿದ್ಯಾಲಯದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನ೦ಧನೆ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಗ೦ಗೊಳ್ಳಿ : ಎಲ್ಲರೂ ಪ್ರತಿಭೆಗಳನ್ನು ಹೊಂದಿರುತ್ತಾರೆ. ಆ ಪ್ರತಿಭೆಗಳನ್ನು ಸರಿಯಾಗಿ ಬಳಸಿಕೊಳ್ಳುವುದರಲ್ಲಿ ಜೀವನದ ಶ್ರೀಮಂತಿಕೆಯ ಗುಟ್ಟು ಅಡಗಿದೆ ಎ೦ದು ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಕಾರ‍್ಯದರ್ಶಿ ಸದಾಶಿವ ನಾಯಕ್ ಅಭಿಪ್ರಾಯಪಟ್ಟರು.

Call us

Click Here

Click here

Click Here

Call us

Visit Now

Click here

ಅವರು ಇತ್ತೀಚೆಗೆ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ 2015-16ರ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ವಿವಿಧ ವಿಭಾಗಗಳಲ್ಲಿ ಕಾಲೇಜಿಗೆ ಮೊದಲಿಗರಾಗಿ ಅ೦ಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನ೦ದಿಸುವ ನಿಟ್ಟಿನಲ್ಲಿ ಕಾಲೇಜಿನ ವತಿಯಿ೦ದ ಇಲ್ಲಿನ ರೋಟರಿ ಸಭಾ೦ಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಧಕ ವಿದ್ಯಾರ್ಥಿಗಳ ಅಭಿನ೦ದನಾ ಸಮಾರ೦ಭದಲ್ಲಿ ಮುಖ್ಯ ಅತಿಥಿ ಸ್ಥಾನದಿ೦ದ ಮಾತನಾಡಿದರು.

ಕಾಲೇಜಿನ ಪ್ರಾ೦ಶುಪಾಲ ಕವಿತಾ ಎಮ್ ಸಿ ಸಮಾರ೦ಭದ ಅಧ್ಯಕ್ಷತೆ ವಹಿಸಿದ್ದರು. ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅ೦ಕಗಳನ್ನು ಪಡೆದ ಪಿಸಿಎಮ್‌ಬಿ ವಿಭಾಗದ ಅಖಿಲೇಶ್ ಖಾರ್ವಿ, ಪಿಸಿಎಮ್‌ಸಿಯ ದೀಕ್ಷಿತ್ ಎಸ್ ಇಬಿಎಸಿಯ ಅಶ್ವಿನಿ ನಾಯಕ್, ಹೆಚ್‌ಇಬಿಎಯ ಬಬಿತಾಶ್ರೀ,ಗಣೇಶ್ ಶೆಣೈ ಮತ್ತು ಕಲಾ ವಿಭಾಗದ ನಿಖಿಲ್ ಖಾರ್ವಿ ಇವರನ್ನು ಈ ಸ೦ದರ್ಭದಲ್ಲಿ ಅಭಿನ೦ದಿಸಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಜಿ.ಎಸ್ .ವಿ.ಎಸ್ ಅಸೋಷಿಯೇಶನ್ ಅಧ್ಯಕ್ಷ ಡಾ. ಕಾಶೀನಾಥ ಪೈ, ಮಾಜಿ ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್, ದೈಹಿಕ ಶಿಕ್ಷಣ ಉಪನ್ಯಾಸಕ ನಾಗರಾಜ ಶೆಟ್ಟಿ, ಸಂಸ್ಕೃತ ಉಪನ್ಯಾಸಕ ಎನ್ ಸಿ ವೆಂಕಟೇಶ ಮೂರ್ತಿ , ಭಾಸ್ಕರ್ ಹೆಚ್ ಜಿ ಉಪಸ್ಥಿತರಿದ್ದರು.

ಆಂಗ್ಲಭಾಷಾ ಉಪನ್ಯಾಸಕ ಪಿ ಎ ಥಾಮಸ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕ ರಾಘವೇಂದ್ರ ಭಟ್ ಶುಭಹಾರೈಸಿದರು. ಶಾಲೆಟ್ ಲೋಬೋ ನಿರೂಪಿಸಿದರು. ಅರುಣ್ ಕುಮಾರ್ ವ೦ದಿಸಿದರು.

Call us

ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

Leave a Reply

Your email address will not be published. Required fields are marked *

eighteen + 9 =