ಚಲನಚಿತ್ರ ರಸಗ್ರಹಣ ತರಗತಿ

 ಕುಂದಾಪುರ: ಸಮುದಾಯ ಸಾಂಸ್ಕೃತಿಕ ಸಂಘಟನೆ ಮತ್ತು ಬಸ್ರೂರಿನ ಶ್ರೀ ಶಾರದಾ ಕಾಲೇಜಿನ ಸಹಯೋಗದೊಂದಿಗೆ ಪದವಿ ವಿದ್ಯಾರ್ಥಿಗಳಿಗಾಗಿ ಚಲನಚಿತ್ರ ರಸಗ್ರಹಣ ತರಗತಿಯನ್ನು ಹಮ್ಮಿಕೊಂಡಿತ್ತು. ಪಿ. ಶೇಷಾದ್ರಿ ನಿರ್ದೇಶಿಸಿರುವ ‘ಡಿಸೆಂಬರ್ 1’  ಚಲನಚಿತ್ರವನ್ನು ಪ್ರದರ್ಶಿಸಲಾಯಿತು. ಪ್ರದರ್ಶನದ ನಂತರ ಪ್ರದೀಪಕುಮಾರ ಶೆಟ್ಟಿ ಕೆಂಚನೂರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸಿನೇಮಾ ಪ್ರದರ್ಶನದ ಮೊದಲು ನಡೆದ ಮಾತುಕತೆಯಲ್ಲಿ ಕಾಲೇಜಿನ ಪ್ರಾಂಶುಪಾಲ ರಾಧಾಕೃಷ್ಣ ಶೆಟ್ಟಿ, ಡಾ. ದಿನೇಶ ಹೆಗ್ಡೆ, ಸಮುದಾಯ ಕುಂದಾಪುರದ ಅಧ್ಯಕ್ಷ ಉದಯ ಗಾಂವಕಾರ, ಜಿ.ವಿ.ಕಾರಂತ, ಸದಾನಂದ ಬೈಂದೂರು, ರಾಘವೇಂದ್ರ ಕಾಲ್ತೋಡು, ಪ್ರದೀಪ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

two + 19 =