ಚಿಕ್ಕ ಪ್ರಾಯದವರಿಗೂ ಹೃದಯಾಘಾತವಾಗುತ್ತಿದೆ. ಏಕೆ ಹೀಗಾಗುತ್ತೀದೆ?

ತುಂಬಾ ಚಿಕ್ಕ ಪ್ರಾಯದವರಿಗೆ ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಆಗುತ್ತಿರುವುದನ್ನು ಕೇಳುತ್ತಿದ್ದೇವೆ. ಹೀಗೆ ಹೃದಯಾಘಾತಕ್ಕೆ ಒಳಗಾಗುವವರು ಆರೋಗ್ಯಕರ ಆಹಾರ ಶೈಲಿ ಪಾಲಿಸುತ್ತಿರುತ್ತಾರೆ, ಕೆಲವರು ಜಿಮ್ಗೆ ಹೋಗಿ ಕಟ್ಟುಮಸ್ತಾದ ದೇಹವನ್ನು ಹೊಂದಿರುತ್ತಾರೆ. ಆದರೂ ಹೃದಯಾಘಾತದವಾಗುತ್ತಿದೆ. ಹೀಗೆ ಚಿಕ್ಕ ಪ್ರಾಯದವರಲ್ಲಿ ಈ ರೀತಿ ಹೃದಯಾಘಾತ ಉಂಟಾಗಲು ಕಾರಣವೇನು? ಎಂಬ ಪ್ರಶ್ನೆಗೆ ಇಂಡಿಯಾ ಟುಡೇಯೊಂದಿಗಿನ ಸಂದರ್ಶನದಲ್ಲಿ ಡಾ. ಅಂಬುಜ್ ರಾಯ್ ಕೆಲವೊಂದು ಅಂಶಗಳನ್ನು ವಿವರಿಸಿದ್ದಾರೆ.

ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆ ಎಲ್ಲಾ ಮಾಡಿದರೂ ಹೃದಯಾಘಾತ ಏಕೆ ಬರುತ್ತಿದೆ? ನಾವು ಆರೋಗ್ಯವಾಗಿರಲು ಆರೋಗ್ಯಕರ ಆಹಾರ ಹಾಗೂ ದಿನಾ ಸ್ವಲ್ಪ ವ್ಯಾಯಾಮ ಮಾಡಬೇಕು. ಆದರೆ ಅದರ ಜೊತೆಗೆ ಮಾನಸಿಕ ಒತ್ತಡ ಕಡಿಮೆ ಮಾಡಬೇಕು. ಅನೇಕ ಜನರಿಗೆ ಅತ್ಯಧಿಕ ಮಾನಸಿಕ ಒತ್ತಡದಿಂದಾಗಿ ಹೃದಯಾಘಾತ ಉಂಟಾಗುತ್ತಿದೆ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ. ಹೆಚ್ಚಿನವರು ತುಂಬಾ ಹೊತ್ತು ಕೆಲಸ ಮಾಡುತ್ತಾರೆ, ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೆ ಗಮನ ನೀಡುವುದೇ ಇಲ್ಲ ಈ ಕಾರಣದಿಂದಾಗಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿವೆ.

ವಂಶವಾಹಿಯಾಗಿಯೂ ಕಂಡು ಬರುತ್ತಿದೆ ಡಾ. ರಾಯ್ ಅವರು ಈ ಹೃದಯಘಾತ ಸಮಸ್ಯೆ ನಮ್ಮ ದೇಶದಲ್ಲಿ ಹೆಚ್ಚಾಗಿ ವಂಶವಾಹಿಯಾಗಿ ಕಂಡು ಬರುತ್ತಿದೆ, ಏಷ್ಯಾದ ಜನರಿಗೆ ಈ ಹೃದಯ ಸಂಬಂಧಿ ಸಮಸ್ಯೆ ಜೀನ್ನಲ್ಲಿಯೇ ಇದೆ, ಪಾಶ್ಚಿಮಾತ್ಯ ದೇಶಕ್ಕೆ ಹೋಲಿಸಿದರೆ ನಮ್ಮ ದೇಶದಲ್ಲಿ ಅನೇಕ ಯುವ ಜನರಿಗೆ ಈ ಹೃದಯಾಘಾತ ಸಮಸ್ಯೆ ಉಂಟಾಗುತ್ತಿದೆ.

ಹೃದಯಾಘಾತ ತಡೆಗಟ್ಟುವುದು ಹೇಗೆ?

  • ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದು: ಅತ್ಯಧಿಕ ಮಾನಸಿಕ ಒತ್ತಡದ ಕೆಲಸ ಅನೇಕ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಆದ್ದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಬೇಕು. ಯೋಗ, ಧ್ಯಾನ ಇವೆಲ್ಲಾ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ತುಂಬಾನೇ ಸಹಕಾರಿಯಾಗಿದೆ.
  • ಧೂಮಪಾನ ವರ್ಜಿಸುವುದು: ಹೃದಯಾಘಾತಕ್ಕೆ ಒತ್ತಡದ ಜೊತೆಗೆ ಮತ್ತೊಂದು ಕಾರಣ ಧೂಮಪಾನ. ಈ ಚಟದಿಂದ ಹೊರಬರಬೇಕು.
  • ನಿಯಮಿತ ಆರೋಗ್ಯ ತಪಾಸಣೆ ಮಾಡಿಸುವುದು: ಕಾಯಿಲೆ ಬಂದ ಮೇಲೆಯೇ ಆಸ್ಪತ್ರೆಗೆ ಹೋಗುವುದು ಎಂದು ಕೂರಬೇಡಿ, ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿ. ಈ ರೀತಿ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಬಹುದಾಗಿದೆ.

ಕುಂದಾಪ್ರ ಡಾಟ್ ಕಾಂ ಲೇಖನ

Leave a Reply

Your email address will not be published. Required fields are marked *

4 × 2 =