ಚಿನ್ನದ ಪದಕ ಗೆದ್ದ ಅಥ್ಲೆಟಿ ಶಂಕರ ಪೂಜಾರಿ

Click Here

Call us

Call us

ಬೈಂದೂರು: ಸಮೀಪದ ಬಿಜೂರಿನವರಾದ ಶಂಕರ ಪೂಜಾರಿ ಕಾಡಿನತಾರು ಎ.25ರಿಂದ 29ರ ತನಕ ಗೋವಾದ ಪಣಜಿಯಲ್ಲಿ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಫೆಡರೇಷನ್‌ ಆಯೋಜಿಸಿದ ರಾಷ್ಟ್ರ ಮಟ್ಟದ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್ ಶಿಫ್ -2015 ಇದರಲ್ಲಿ 4×100 ರಿಲೇ ಓಟದ 35ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಬಂಗಾರದ ಪದಕವನ್ನು ಗೆದ್ದಿದ್ದಾರೆ.

Click Here

Call us

Call us

Visit Now

ಇವರು ಕಳೆದ ಬಾರಿ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಿ ಮೂರು ಪದಕ ಪಡೆದು ಫ್ರಾನ್ಸ್‌ ದೇಶದಲ್ಲಿ ಇದೇ ಅಗಸ್ಟ್‌ನಲ್ಲಿ ನಡೆಯುವ ವಿಶ್ವ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ – 2015 ಕ್ಕೆ ಆಯ್ಕೆಯಾಗಿರುತ್ತಾರೆ.

Click here

Click Here

Call us

Call us

ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ಅಧೀಕ್ಷಕರ ಕಛೇರಿಯ ನಿಸ್ತಂತು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಂಕರ ಪೂಜಾರಿ ಇವರನ್ನು ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಕೆ.ಅಣ್ಣಾಮಲೈ ಐ.ಪಿ.ಎಸ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಸಂತೋಷ್‌ ಕುಮಾರ್‌ ಹಾಗೂ ಉಡುಪಿ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಕೆ.ಎಂ ಚಂದ್ರಶೇಖರರವರು ಅಭಿನಂದಿಸಿರುತ್ತಾರೆ.

Leave a Reply

Your email address will not be published. Required fields are marked *

four − 2 =