ಚುನಾವಣೆಗೆ ಸರ್ವ ಸಿದ್ಧತೆ: ಮಸ್ಟರಿಂಗ್ ಬಳಿಕ ಬೂತ್‌ನತ್ತ ಹೊರಟ ಸಿಬ್ಬಂಧಿಗಳು

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ೨೩ರಂದು ನಡೆಯಬೇಕಾದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆಯನ್ನು ನಿರ್ವಹಿಸಬೇಕಾದ ಎಲ್ಲ ಸಿಬ್ಬಂದಿ ಸೋಮವಾರ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ಥಾಪಿಸಿರುವ ಮಸ್ಟರಿಂಗ್ ಕೇಂದ್ರದಲ್ಲಿ ಹಾಜರಾಗಿ ತಮ್ಮತಮ್ಮ ಕೇಂದ್ರಗಳಿಗೆ ಅಗತ್ಯವಿರುವ ಮತದಾನ ಯಂತ್ರ ಮತ್ತು ಅನ್ಯ ಪರಿಕರಗಳನ್ನು ಸ್ವೀಕರಿಸಿ, ತಮಗೆ ನಿಗದಿಗೊಳಿಸಿದ ವಾಹನಗಳಲ್ಲಿ ತೆರಳಿದರು.

Call us

Call us

Visit Now

ಸಿಬ್ಬಂದಿ ಹಾಜರಾತಿ ದಾಖಲಿಸಲು ಮತ್ತು ಪರಿಕರಗಳನ್ನು ವಿತರಿಸಲು ಸೆಕ್ಟರ್ ಅಧಿಕಾರಿಗಳ ನೇತೃತ್ವದ ೨೦ ವಿಭಾಗಗಳನ್ನು ತೆರೆಯಲಾಗಿತ್ತು. ಅವುಗಳಿಗೆ ಸಂಬಂಧಿಸಿದ ವಿವರಗಳ ಫಲಕಗಳನ್ನು ಅಲ್ಲಲ್ಲಿ ಪ್ರದರ್ಶಿಸಲಾಗಿತ್ತು. ಬೆಳಗ್ಗಿನಿಂದ ಬಂದ ಸಿಬ್ಬಂದಿ ಫಲಾಹಾರ ಪೂರೈಸಿ, ತಮ್ಮ ವಿಭಾಗದಲ್ಲಿ ಸೇರಿ ಪರಸ್ಪರ ಪರಿಚಯ ಮಾಡಿಕೊಂಡು, ಪರಿಕರಗಳನ್ನು ಸ್ವೀಕರಿಸಿ, ಪರಿಶೀಲನೆ ನಡೆಸಿದರು. ಮಧ್ಯಾಹ್ನದ ಊಟದ ಬಳಿಕ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದ ಮತಯಂತ್ರಗಳನ್ನು ಪಡೆದು, ಅವುಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಂಡರು. ಆ ಬಳಿಕ ತಮಗೆ ನಿಗದಿಯಾಗಿದ್ದ ವಾಹನಗಳ ಮೂಲಕ ಮತಗಟ್ಟೆಗಳತ್ತ ಮುಖ ಮಾಡಿದರು.

Click here

Click Here

Call us

Call us

ಅತ್ತ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸುವ ಕಾರ್ಯ ಕಾಲೇಜಿನ ಮೈದಾನದಲ್ಲಿ ನಡೆದಿತ್ತು. ಅದರಂತೆ ರಕ್ಷಣಾ ಸಿಬ್ಬಂದಿ ಕೂಡ ನಗದಿತ ವಾಹನಗಳಲ್ಲಿ ಮತಗಟ್ಟೆಗೆ ತೆರಳಿದರು. ಸಹಾಯಕ ಚುನಾವಣಾಧಿಕಾರಿ ಕುಸುಮಾಧರ, ತಹಶೀಲ್ದಾರ್ ಬಸಪ್ಪ ಪೂಜಾರ್ ಮತ್ತು ಮತದಾನ ಮೇಲ್ವಿಚಾರಣೆ ಅಧಿಕಾರಿ ಅಬ್ದುಲ್ ನಜೀರ್ ಮಸ್ಟರಿಂಗ್‌ನ ಉಸ್ತುವಾರಿ ನಡೆಸಿದರು. ಕಾರಣಾಂತರದಿಂದ ಗೈರು ಹಾಜರಾದ ಸಿಬ್ಬಂದಿಗಳಿಗೆ ಕಾಯ್ದಿರಿಸಿದ್ದ ಸಿಬ್ಬಂದಿಗಳನ್ನು ನಿಯೋಜಿಸಿದರು. ಮಸ್ಟರಿಂಗ್ ಕೇಂದ್ರದಲ್ಲಿ ಎಲ್ಲ ಕೆಲಸಗಳು ಯಾವುದೇ ಗೊಂದಲಗಳಿಲ್ಲದೆ ಸುಸೂತ್ರವಾಗಿ ನಡೆದಿವೆ ಎಂದು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು. ಕ್ಷೇತ್ರದ ೨೪೬ ಮತಗಟ್ಟೆಗಳನ್ನು ಅದಾಗಲೆ ಸುಸಜ್ಜಿತಗೊಳಿಸಲಾಗಿದೆ. ಅಲ್ಲಿ ಸಿಬ್ಬಂದಿ ವಸತಿ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು, ಊಟೋಪಹಾರಗಳ ವ್ಯವಸ್ಥೆಯನ್ನು ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು
ನೋಡಿಕೊಳ್ಳುವುದರಿಂದ ಯಾವುದೇ ತೊಂದರೆ ಆಗದು ಎಂದರು. 41 ಬಸ್ ಮತ್ತು 45 ವ್ಯಾನ್‌ಗಳ ಮೂಲಕ 86 ರೂಟ್‌ಗಳಿಗೆ ಹೋಗುವ ಸಿಬ್ಬಂದಿಗಳನ್ನು ಸಾಗಿಸುವ ವ್ಯವಸ್ಥೆ ಮಾಡಲಾಗಿದೆ. ಮತದಾನ ಮುಗಿದ ಬಳಿಕ ಡಿಮಸ್ಟರಿಂಗ್ ಕೂಡ ಇಲ್ಲಿಯೇ ನಡೆದು, ಮತಪೆಟ್ಟಿಗೆಗಳನ್ನು ಅದೇ ರಾತ್ರಿ ಶಿವಮೊಗ್ಗಕ್ಕೆ ಕಳುಹಿಸಲಾಗುವುದು.

Click Here

ಕಮಲಶಿಲೆ ಗ್ರಾಮದ ಎಳಬೇರು ಮತಗಟ್ಟೆಯಲ್ಲಿ ಅಧ್ಯಕ್ಷಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಕಾರ್ಕಳದಿಂದ ಬಂದಿದ್ದ ಅಲ್ಲಿನ ಎಸ್‌ವಿ ಪ್ರೌಢಶಾಲೆಯ ಗಣಿತ ಶಿಕ್ಷಕ ನಾರಾಯಣ ಶೆಣೈ ಮಸ್ಟರಿಂಗ್ ಕೇಂದ್ರದಲ್ಲಿನ ವ್ಯವಸ್ಥೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ವಾಸಸ್ಥಾನದಿಂದ ದೂರವಿರುವ ಮತಕೇಂದ್ರಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಯಡ್ತರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರೂಪಾ, ಹೇರಂಜಾಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕಿ ಕಮಲಾ ಕೆ.ವಿ ಹಾಲೂಡುವ ಶಿಶುವನ್ನು ಬಿಟ್ಟಿರುವುದು ಕಷ್ಟವಾದ್ದರಿಂದ ಹತ್ತಿರದ ಕೇಂದ್ರಕ್ಕೆ ಬದಲಾಯಿಸುವಂತೆ ಚುನಾವಣಾಧಿಕಾರಿಯನ್ನು ವಿನಂತಿಸುತ್ತಿದ್ದುದು ಕಂಡುಬಂತು.

ಮಸ್ಟರಿಂಗ್ ಕೇಂದ್ರದ ಸನಿಹ ವಾಹನ ಸಂಚಾರ ನಿಯಂತ್ರಣ, ರಕ್ಷಣೆ, ಮತಗಟ್ಟೆಗಳಿಗೆ ರಕ್ಷಣಾ ಸಿಬ್ಬಂದಿಯ ರವಾನೆಯ ನೇತೃತ್ವವನ್ನು ಕುಂದಾಪುರ ಡಿವೈಎಸ್‌ಪಿ ಬಿ. ಪಿ. ದಿನೇಶ್‌ಕುಮಾರ್ ಮತ್ತು ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಪರಮೇಶ್ವರ ಗುನಗ ವಹಿಸಿದ್ದರು.

ಕ್ಷೇತ್ರದಲ್ಲಿ ಬೈಂದೂರು ತಾಲ್ಲೂಕಿನ 26, ಕುಂದಾಪುರ ತಾಲ್ಲೂಕಿನ 39 ಸೇರಿ 65 ಗ್ರಾಮಗಳು ಇವೆ. 1,10,237 ಪುರುಷ, 1,16,249 ಮಹಿಳಾ ಮತ್ತು 1 ಅನ್ಯ ಸೇರಿ ಒಟ್ಟು 2,26,587 ಮತದಾರರು 246 ಮತದಾನ ಕೇಂದ್ರಗಳಲ್ಲಿ ಹಕ್ಕು ಚಲಾಯಿಸಲಿದ್ದಾರೆ. ಅವುಗಳಲ್ಲಿ 75 ಸೂಕ್ಷ್ಮ ಮತ್ತು 171 ಸಾಮಾನ್ಯ ಕೇಂದ್ರಗಳು ಎಂದು ಗುರುತಿಸಲಾಗಿದೆ.

ಹೆಮ್ಮಾಡಿಯಲ್ಲಿ 2 ಮತ್ತು ತಲ್ಲೂರಿನಲ್ಲಿ 3 ಸಖಿ ಮತಗಟ್ಟೆಗಳಿರುತ್ತವೆ. ಎಲ್ಲ ಕೇಂದ್ರಗಳಲ್ಲೂ ಅಂಗವಿಕಲರಿಗೆ, ಅಶಕ್ತರಿಗೆ, ಗರ್ಭಿಣಿಯರಿಗೆ ಮತ್ತು ಹಿರಿಯ ನಾಗರಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. 1088 ಮತಗಟ್ಟೆ ಸಿಬ್ಬಂದಿ ಮತ್ತು 246 ಸಹಾಯಕ ಸಿಬ್ಬಂದಿ ಚುನಾವಣೆಯ ಕರ್ತವ್ಯ ನಿರ್ವಹಿಸುವರು. ಸುರಕ್ಷತೆಯ ಹೊಣೆಯನ್ನು ಮೂವರು ಡಿವೈಎಸ್‌ಪಿ ನೇತೃತ್ವದಲ್ಲಿ 103 ಇನ್‌ಸ್ಪೆಕ್ಟರ್, 33 ಎಸ್‌ಐ, 149 ಎಎಸ್‌ಐ ಹಾಗೂ 23 ಸಿಬ್ಬಂದಿ ನೋಡಿಕೊಳ್ಳುವರು. 110 ಡಿಎಆರ್, 24 ಕೇಂದ್ರೀಯ ದಳದ ಸಿಬ್ಬಂದಿ ಬೆಂಬಲಕ್ಕೆ ಇದ್ದಾರೆ. ತಲಾ 12–13 ಬೂತ್‌ಗಳ ಮೇಲೆ ನಿಗಾವಹಿಸಲು 20 ಸೆಕ್ಟರ್ ಅಧಿಕಾರಿಗಳು ಕಾರ್ಯನಿರತರಾಗಿರುತ್ತಾರೆ. ಹೆಚ್ಚುವರಿ ರಕ್ಷಣಾ ಸಿಬ್ಬಂದಿಗೆ ಬೇಡಿಕೆ ಸಲ್ಲಿಸಲಾಗಿದೆ.

ಸಿ-ವಿಜಿಲ್ ಮೂಲಕ ಈ ವರೆಗೆ 33 ದೂರುಗಳು ದಾಖಲಾಗಿವೆ. ದಾಖಲೆಇಲ್ಲದೆ ಸಾಗಿಸುತ್ತಿದ್ದ ₹65,000 ವಶಕ್ಕೆ ಪಡೆಯಲಾಗಿದೆ.

ತಪ್ಪದೆ ಮತದಾನ ಮಾಡಿ: ಸಿದ್ಧತೆಗಳ ಬಗ್ಗೆ ವಿವರ ನೀಡಿದ ಉಭಯ ಅಧಿಕಾರಿಗಳು ಮತದಾರರು ತಪ್ಪದೆ ಮತ ಚಲಾಯಿಸಬೇಕು ಎಂಬ ಸಂದೇಶ ನೀಡಿದರು.

Leave a Reply

Your email address will not be published. Required fields are marked *

twelve + 10 =