ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಡ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಎಮ್ಎಸ್ಸಿ ಘಟಕ ಯೋಜನೆಯಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಗೋದಾಮು ಕಟ್ಟಡದ ಕಾಮಗಾರಿಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್ ಬೀಸಿನಪಾರೆಯಲ್ಲಿ ಶಿಲನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ರಾಜು ಪೂಜಾರಿ, ಸಹಕಾರಿ ಸಂಘಗಳ ವಲಯ ಮೇಲ್ವಿಚಾರಕರಾದ ಶಿವರಾಮ ಪೂಜಾರಿ, ಜಡ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ದೇವದಾಸ್ ವಿ.ಜೆ. ಜಡ್ಕಲ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಅಡಿಗ, ಮುದುರೂ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರು ಹಾಗೂ ಗುತ್ತಿದಾರರಾದ ನಕ್ಷತ್ರ ಬೋವಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವೆಂಕರಮಣ ಶರ್ಮ. ಸಂಘದ ನಿರ್ದೇಶಕರುಗಳಾದ ಸುರೇಂದ್ರ ನಾಯ್ಕ್, ಮನೋಜ್ ಪಿ.ಜೆ, ಜೋಶಿ ಪಿಪಿ. ಜೋಸೆಫ್ ಕೆ.ಎಮ್ ವಿನೋದ್ ಜೋರ್ಜ್ ನಾರಾಯಣ ಶೆಟ್ಟಿ. ಮಹಾಬಲ ಪೂಜಾರಿ. ಗುರುರಾಜ್ ಪೂಜಾರಿ. ಮುತ್ತ. ರೊಸಮ್ಮ, ಸವಿತಾ ಶೆಟ್ಟಿ ಹಾಗೂ ಸಂಘದ ಸಿಬಂಧಿ ವರ್ಗದವರು ಉಪಸ್ಥಿತರಿದ್ದರು.
ಉಪಾಧ್ಯಕ್ಷರಾದ ದೇವದಾಸ್ ವಿ ಜೆ ಸ್ವಾಗತಿಸಿದರು ನಿರ್ದೇಶಕರಾದ ಜೋಸೆಫ್ ಕೆ ಎಂ ವಂದಿಸಿದರು.
