ಜನರಿಗೆ ಸತ್ಯ ತಿಳಿಸಲು ಜನಾಶೀರ್ವಾದ ಯಾತ್ರೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮೋದಿ ಸರಕಾರ ಉತ್ತಮ ಕಾರ್ಯ ಮಾಡುತ್ತಿದ್ದು, ವಿರೋಧ ಪಕ್ಷಗಳು ಅವರ ಹೆಸರನ್ನು ಕೆಡಿಸುವ ಕಾರ್ಯದಲ್ಲಿ ತೊಡಗಿವೆ. ಹಾಗಾಗಿಯೇ ಸರಕಾರದ ಯೋಜನೆ ಹಾಗೂ ಉತ್ತಮ ಕಾರ್ಯಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಜನಾಶೀರ್ವಾದ ಯಾತ್ರೆ ಕೈಗೊಳ್ಳಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದರು.

Call us

Click Here

Click here

Click Here

Call us

Visit Now

Click here

ಬಿಜೆಪಿ ಕಛೇರಿಗೆ ಗುರುವಾರ ಭೇಟಿ ನೀಡಿದ ಸಂದರ್ಭ ಭಾರತ ಮಾತೆಯ ಪೋಟೋಗೆ ಪುಷ್ಪಾರ್ಚನೆ ಮಾಡಿದ ಬಳಿಕ ಅವರು ಮಾತನಾಡಿ ಕೃಷಿ ಸಚಿವಾಲಯದಲ್ಲಿ ತುಂಬಾ ಕಠಿಣವಾದ ಜವಾಬ್ದಾರಿ ಇದೆ. ಕೃಷಿಕರ ಅಭ್ಯುದಯ, ಕೃಷಿ ಕ್ಷೇತ್ರದ ಬೆಳವಣಿಗೆಯ ಬಗ್ಗೆ ಕಳೆದ 60 ವರ್ಷಗಳಿಂದ ನೀಡಲಾದ ವರದಿಯ ಆಧಾರದಲ್ಲಿ ಕೃಷಿ ಮಸೂದೆಯನ್ನು ಮಂಡಿಸಲಾಗಿದೆ. ನಮ್ಮ ಸರಕಾರ ಹೊಸದಾಗಿ ಈ ಮಸೂದೆಯನ್ನು ಜಾರಿಗೆ ತಂದಿಲ್ಲ. ಆದರೆ ಅನಗತ್ಯವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೇರೆ ಬೇರೆ ಬೆಳೆಗಳಿಗೆ ಇರುವ ಬೆಂಬಲ ಬೆಲೆ ಮೊದಲಾದ ತೊಡಕುಗಳನ್ನು ಶೀಘ್ರ ಬಗೆಹರಿಸುವುದಾಗಿ ಅವರು ತಿಳಿಸಿದರು.

ಲೋಕಸಭಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಮತಗಳಿಂದ ನನ್ನನ್ನು ಗೆಲ್ಲಿಸಿದ ಕ್ಷೇತ್ರ ಕುಂದಾಪುರ ಕ್ಷೇತ್ರ. ತಮ್ಮೆಲ್ಲರ ಶ್ರಮದಿಂದ ನನಗೆ ಈಗ ಸಚಿವ ಸ್ಥಾನ ದೊರೆತಿದೆ ಎಂದರು. ಬಳಿಕ ನೂತನ ಸಚಿವರನ್ನು ಅವರನ್ನು ಕುಂದಾಪುರ ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು. ಇದೇ ವೇಳೆ ಸೌದಿಯಿಂದ ಬಿಡುಗಡೆಗೊಂಡು ಹುಟ್ಟೂರಿಗೆ ಬಂದಿದ್ದ ಹರೀಶ್ ಬಂಗೇರ ಅವರನ್ನು ಗೌರವಿಸಲಾಯಿತು.

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ಶೆಟ್ಟಿ, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ರಾಜೇಶ್ ಕಾವೇರಿ, ವಿಧಾನಪರಿಷತ್ ಸದಸ್ಯ ಮುನಿರಾಜ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ರಾಜೇಶ್ ಕಾವೇರಿ ಮೊದಲಾದವರು ಉಪಸ್ಥಿತರಿದ್ದರು. ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಸ್ವಾಗತಿಸಿದರು.

Leave a Reply

Your email address will not be published. Required fields are marked *

twelve + seventeen =