ಜನರ ರಕ್ಷಣೆಗೆ ನಿಲ್ಲಬೇಕಾಗಿದ್ದ ಸಿದ್ಧರಾಮಯ್ಯ ಅಶಾಂತಿ ಹುಟ್ಟುಹಾಕಿದ್ದಾರೆ: ಈಶ್ವರಪ್ಪ ಆರೋಪ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇದುವರೆಗೂ ಯಾವ ಮುಖ್ಯ ಮಂತ್ರಿಗಳಿಗೂ ಟಿಪ್ಪು ನೆನಪಾಗಲಿಲ್ಲ. ಸಿದ್ದರಾಮಯ್ಯ ಮೈಯಲ್ಲಿ ಟಿಪ್ಪು ರಕ್ತ ಹರಿಯುತ್ತಿದೆ ಎನ್ನುವ ಹಾಗೆ ಕ್ರೂರಿ, ಮತಾಂಧರಿ, ಹಿಂದೂ ವಿರೋಧಿ, ಟಿಪ್ಪು ಜಯಂತಿಯನ್ನು ಆಚರಿಸಿದ್ದರು. ಮುಸ್ಲಿಂರ ಓಟಿಗಾಗಿ, ಅವರನ್ನು ಸಂತೃಪ್ತಿಪಡಿಸುವುದಕ್ಕಾಗಿ ಮುಗ್ಧ ಮುಸ್ಲಿಂರ ಮೇಲಿನ ಕೇಸುಗಳನ್ನು ವಾಪಾಸು ತೆಗೆದುಕ್ಕೊಳ್ಳುತ್ತವೆ ಎನ್ನುತ್ತಾರೆ ಹಾಗಾದರೆ ನೀವು ಅಮಾಯಕರ ಮೇಲು ಕೇಸು ದಾಖಲಿಸುತ್ತಿದ್ದಿರಾ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಈಶ್ವರಪ್ಪ ರಾಜ್ಯ ಸರಕಾರವನ್ನು ಪ್ರಶ್ನಿಸಿದರು.

Call us

Call us

ಮಂಗಳೂರು ಚಲೋ ಜನ ಸುರಕ್ಷಾ ಯಾತ್ರೆಯ ಅಂಗವಾಗಿ ಉಪ್ಪುಂದದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕೋಮುವಾದ ಸಹಿಸಲ್ಲ, ಅಗತ್ಯಬಿದ್ದರೆ ಆರ್‌ಎಸ್‌ಎಸ್‌ನ್ನು ಮಟ್ಟ ಹಾಕುತ್ತೇನೆ ಎಂದು ಸಿಎಂ ಬೊಬ್ಬಿಡತ್ತಿದ್ದಾರೆ, ಆದರೆ ಇಂದಿರಾ ಗಾಂಧಿಗೆ ಆರ್‌ಎಸ್‌ಎಸ್‌ನ್ನು ಮಟ್ಟ ಹಾಕಲು ಸಾಧ್ಯವಾಗಿಲ್ಲ, ಈಗ ನಿಮ್ಮಿಂದ ಆಗುತ್ತದೆಯೇ ಎಂದು ಪ್ರಶ್ನಿಸಿದರು. ಸಿದ್ಧರಾಮಯ್ಯಗೆ ಬೇಕಾಗಿರುವುದು ಕುರ್ಚಿ, ಯಾವುದೇ ರಾಷ್ಟ್ರ ಭಕ್ತರು ಕೊಲೆಯಾದರು ಬೇಸರವಿಲ್ಲ, ಹಿಂದು-ಮುಸ್ಲಿಂ ಹೊಡೆದಾಡಿದರು ಚಿಂತೆ ಇಲ್ಲ, ಕರ್ನಾಟಕದ ಆರೂವರೆ ಕೋಟಿ ಜನರ ರಕ್ಷಣೆ ಮಾಡಬೇಕಾಗಿದ್ದ ಅವರು ಜಾತಿ, ಧರ್ಮದ ನಡುವೆ ಬೆಂಕಿ ಇಡುವ ಕೆಲಸ ಮಾಡುತ್ತಿದ್ದಾರೆ. ಆದರೆ ನಾನು ಹಿಂದು ನನ್ನ ಧರ್ಮವನ್ನು ಪೂಜಿಸುತ್ತೇನೆ, ಉಳಿದೆಲ್ಲ ಧರ್ಮವನ್ನು ಗೌರವಿಸುತ್ತೇನೆ ಎನ್ನುವ ಮಹಾಪುರುಷ ಮೋದಿ ಅವರನ್ನು ಕಂಡು ಕಲಿಯಿರಿ ಎಂದು ಸಲಹೆ ನೀಡಿದರು.

ಕುರ್ಚಿ ಉಳಿಸಿಕೊಳ್ಳಲು ವೀರಶೈವ ಮತ್ತು ಲಿಂಗಾಯುತ ಎಂದು ಒಡೆದಿದ್ದಾರೆ. ಮಠಗಳನ್ನು ಸ್ವಾದೀನ ಮಾಡಿಕೊಳ್ಳುತ್ತೇವೆ ಎಂದಾಗ, ಅನೇಕ ಸ್ವಾಮೀಜಿಗಳು ಮಸೀದಿಗಳನ್ನು ಮುಟ್ಟಿ ಎಂದಾಗ ಎಲ್ಲಿ ಹೋಯಿತು ನಿಮ್ಮ ಗಂಡಸುತನ ಎಂದು ಖಾರವಾಗಿ ಪ್ರಶ್ನಿಸಿದ ಅವರು, ನಿಮ್ಮ ತಾಯಿ ಸೋನಿಯಾ ಗಾಂಧಿ ಗೋವಾಕ್ಕೆ ಬಂದು ಕರ್ನಾಟಕಕ್ಕೆ ಒಂದೇ ಒಂದು ಹನಿ ನೀರು ಕೊಡುವುದಿಲ್ಲ ಎಂದಾಗ ಏನುಮಾಡುತ್ತಿದ್ದಿರಿ. ಈಗ ಪ್ರಧಾನಿ ಮಧ್ಯೆ ಪ್ರವೇಶಿಸಬೇಕು ಎಂದು ರಾಜಕಾರಣ ಮಾಡುತ್ತಿದ್ದೀರಾ ಎಂದು ವಂಗ್ಯವಾಡಿದರು.

Call us

Call us

ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, ಪಾಕಿಸ್ಥಾನದ ಪರ ಘೋಷಣೆ ಕೂಗಿದ ಹಾಗೂ ದೇಶದ್ರೋಹಿ ಚಟುವಟಿಕೆ ನಡೆಸಿದ ಕೆಎಫ್‌ಡಿ, ಪಿಎಫ್‌ಐ ಸದಸ್ಯರ ಮೇಲಿನ ಪ್ರಕರಣಗಳನ್ನು ವಾಪಾಸ್ಸು ಪಡೆಯಲು ಚಿಂತನೆ ನಡೆಸುತ್ತದೆ. ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುವುದು ಇವರ ಆಡಳಿತ ಭಾಗವಾಗಿದೆ ಎಚಿದರು.

ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಮುಖಂಡರಾದ ಉದಯಕುಮಾರ ಶೆಟ್ಟಿ, ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಪರೇಶ ಮೇಸ್ತ ತಂದೆ ಕಮಲಾಕರ ಮೇಸ್ತ ದಂಪತಿಗಳು ಉಪಸ್ಥಿತರಿದ್ದರು. ಜಿಪಂ ಸದಸ್ಯೆ ಶ್ಯಾಮಲಾ ಕುಂದರ್ ಪ್ರಾರ್ಥಿಸಿದರು. ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಬಿಜೆಪಿ ಮುಖಂಡರಾದ ಬಿ.ಎಂ. ಸುಕುಮಾರ ಶೆಟ್ಟಿ ಸ್ವಾಗತಿಸಿ, ಸದಾನಂದ ಉಪ್ಪಿನಕುದ್ರು ನಿರೂಪಿಸಿ, ದೀಪಕ್ ಕುಮಾರ ಶೆಟ್ಟಿ ವಂದಿಸಿದರು.

Leave a Reply

Your email address will not be published. Required fields are marked *

fifteen − 12 =