ಜನಸಂಪರ್ಕ ಸಭೆ: ಫಲಾನುಭವಿಗಳಿಗೆ ಸವಲತ್ತು ವಿತರಣೆ

Call us

Call us

ಕುಂದಾಪುರ: ಕಾಂಗ್ರೆಸ್ ಸರಕಾರ ನೀಡಿದ ಬಹುಪಾಲು ಭರವಸೆಗಳನ್ನು ಪೂರೈಸಿದ ಸಂತೋಷವಿದೆ. ಇನ್ನಷ್ಟು ಜನಪರ ಕಾರ್ಯಗಳನ್ನು ಮಾಡಲು ಸರಕಾರ ಸಿದ್ಧವಿದೆ ಎಂದು ಜಿಲ್ಲಾ ಉಸ್ತುವಾರಿ ವಿನಯ್ ಕುಮಾರ್ ಸೊರಕೆ ಹೇಳಿದರು. ಕುಂದಾಪುರ ಕುಂದಾಪುರದ ಆರ್‌ಎನ್ ಶೆಟ್ಟಿ ಸಭಾಂಗಣದಲ್ಲಿ ಜರುಗಿದ ತಾಲೂಕು ಮಟ್ಟದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

Call us

Click here

Click Here

Call us

Call us

Visit Now

Call us

ಆಶ್ರಯ ಮನೆಗಳಿಗೆ ಬಡ್ಡಿ ಸಮೇತ ಸಾಲು ಕಟ್ಟಲು ಭಾಕಿ ಇರುವವರ ಸಾಲಮನ್ನಾ ಮಾಡಲಾಗಿದ್ದು. ಪ್ರಮಾಣ ಪತ್ರವನ್ನು ಕೂಡ ಹಲವು ಮನೆಗಳಿಗೆ ನೀಡಲಾಗಿದೆ. ಸ್ತ್ರೀ ಶಕ್ತಿ ಸಂಘಗಳಿಗೆ ೫೦೦೦ ಸುತ್ತು ನಿಧಿಯನ್ನು ನೀಡಲಾಗುತ್ತಿದ್ದು. ಈ ಸುತ್ತು ನಿಧಿಯನ್ನು ಐದುಸಾವಿರದಿಂದ ಇಪ್ಪತೈದುಸಾವಿರಕ್ಕೆ ಏರಿಸಲಾಗಿದೆ. ಎಂದರು. ನಂತರ ಜನರಿಂದ ಅಧಿಕಾರಿಗಳಿಗೆ ಪ್ರಶ್ನೆಗಳನ್ನು ಕೇಳಲಾಯಿತು. ಹೊಸ ಪಂಚಾಯತ್‌ಗಳಿಗೆ ದಾನ ಬಿಡುಗಡೆಯಾಗುತ್ತದೆ ಎಂದರು. ರೇಷನ್‌ಕಾರ್ಡ್ ವಿತರಣೆ ಮಾಡಿ ಕೆಲವು ದಿನಗಳ ಬಳಿಕ ಅದನ್ನು ರದ್ದುಗೊಳಿಸಲಾಗುತ್ತದೆ. ಇದರಿಂದ ಬಡ ಜನರಿಗೆ ತೊಂದರೆಯಾಗುತ್ತಿದೆ. ಎಂಬ ಪ್ರಶ್ನೆಗೆ ಉತ್ತರಿಸಿದ ಸೊರಕೆ ಈ ಹಿಂದಿನ ಸರ್ಕಾರವಿದ್ದಾಗ ಶೆ. 30ರಷ್ಟು ಮಾತ್ರ ರೇಷನ್ ಕಾರ್ಡ್ ವಿತರಣೆ ಮಾಡಲಾಗಿತ್ತು. ನಾವು ಈಗ 70ರಷ್ಟು ರೇಷನ್‌ಕಾರ್ಡ್‌ಗಳನ್ನು ವಿತರಣೆ ಮಾಡಿದ್ದೇವೆ. ಈಗ ತೊಂದರೆಯಾದ ಕುಟುಂಬಗಳಿದ್ದರೆ ಅರ್ಜಿ ಸಲ್ಲಿಸಿ ಪರಿಶೀಲಿಸಿ ಕಾರ್ಡ ವಿತರಣೆ ಮಾಡಲಾಗುತ್ತದೆ ಎಂದರು.

ಈ ಸಂದರ್ಭ ಮಾತನಾಡಿದ ಬಿಜೆಪಿ ಮುಖಂಡ ರಾಜೇಶ್ ಕಾವೇರಿ ಹಕ್ಕುಪತ್ರ ವಿತರಣೆ ಸಂದರ್ಭ ಮೊದಲು 10,000 ಸಾವಿರ ರೂಪಾಯಿ ಹಣವನ್ನು ಪಡೆಯಲಾಗಿತ್ತು, ಈಗ ನೀವು 2,000 ಮಾತ್ರ ನೀಡಲು ನೀವು ಹೇಳುತ್ತಾ ಇದ್ದಿರಿ. ಈಗ ಹಕ್ಕುಪತ್ರಕ್ಕಾಗಿ ಹತ್ತುಸಾವಿರ ಕೊಟ್ಟ ಜನರು ಗತಿ ಏನು ಎಂದು ಪ್ರಶ್ನಿಸಿದರು. ನಾವು ಜನರಿಗೆ ಹಕ್ಕು ಪತ್ರಕ್ಕಾಗಿ ಹಣ ನೀಡಬೇಡಿ ಎಂದೇ ಹೇಳಿದ್ದೇವೆ. ಆದರೆ ಜನರು ಹಣವನ್ನು ನೀಡಿರುವುದು ಎಂದರು. ಇದಕ್ಕೆ ಮರುಪ್ರಶ್ನೆ ಹಾಕಿದ ರಾಜೇಶ್ ಕಾವೇರಿ ಹಣಕೊಡದಿದ್ರೆ ಹಕ್ಕುಪತ್ರ ಸಿಗೋದಿಲ್ಲ ಎಂದ ಕಾರಣಕ್ಕೆ ಹಣ ನೀಡಿರೋದು ಈಗ ನೀವು ಹೀಗೆ ಹೇಳುತ್ತಾ ಇದ್ದಿರಿ ಎಂದರು. ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ಸೊರಕೆ ಸಮಜಾಯಿಷಿ ನೀಡಿದರು.

ಪಹಣಿ ಪತ್ರ ಪಡೆಯುವಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಬೆಳಿಗ್ಗೆ ಬಂದು ಟೋಕನ್ ಪಡೆದರೆ ಸಂಜೆವರೆಗೆ ಕಾಯಬೇಕು. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಎಂದು ಜಿ.ಪಂ ಸದಸ್ಯ ಗಣಪತಿ ಶ್ರೀಯಾನ್ ಪ್ರಶ್ನೆಗೆ ಜಿಲ್ಲಾಧಿಕಾರಿ ಆರ್ ವಿಶಾಲ್ ಉತ್ತರಿಸಿ ಈ ಸಮಸ್ಯೆ ನಮ್ಮ ಗಮನಕ್ಕೂ ಬಂದಿದೆ. ಇದನ್ನು ಪಹಣಿ ಪತ್ರ ವಿತರಣೆಯನ್ನು ನಾವು ಗ್ರಾಮಪಂಚಾಯತ್‌ನಲ್ಲಿ ನೀಡಲು ಪ್ರಯತ್ನಿಸುತ್ತಿದ್ದೇವೆ, ಇದಕ್ಕೆ ಕೆಲವೊಂದು ತಾಂತ್ರಿಕ ಅವಶ್ಯಕತೆಗಳನ್ನು ಪೂರೈಸಿ ಮುಂದುವರಿಯಬೇಕಾಗುತತ್ತದೆ ಇದಕ್ಕೆ ಕನಿಷ್ಠ ಒಂದುವರ್ಷಗಳ ಅವಧಿ ಬೇಕಾಗುತ್ತದೆ ಎಂದರು.

409 ಮಂದಿ ಫಲಾನುಭವಿಗಳಿಗೆ ಸಹಾಯಧನ ಪರಿಹಾರ ಧನ ವನ್ನು ವಿತರಿಸಲಾಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಆರ್ ವಿಶಾಲ್, ಸಿಇಓ ಪ್ರಿಯಾಂಕ ಫ್ರಾನ್ಸಿಸ್ ಡಿಸೋಜಾ, ಉಪವಿಭಾಗಾಧಿಕಾರಿ ಅಶ್ವಥಿ. ಎಸ್, ತಹಶೀಲ್ದಾರ್ ಗಾಯತ್ರಿ ಎಸ್. ನಾಯಕ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Call us

News Janasamparka Sabhe in Kundapura (2)

Leave a Reply

Your email address will not be published. Required fields are marked *

2 + fourteen =