ಜನಾರ್ದನ್ ಕೊಡವೂರು ಅವರಿಗೆ ಕರಾವಳಿ -ಇ – ಧ್ವನಿ ಡಿಜಿಟಲ್ ಮಾಧ್ಯಮ ಪ್ರಶಸ್ತಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಖ್ಯಾತ ಯುವ ಪತ್ರಕರ್ತ ಹಾಗೂ ಛಾಯಾಗ್ರಾಹಕ ಜನಾರ್ದನ್ ಕೊಡವೂರು ಅವರು ಕರಾವಳಿ-ಇ-ಧ್ವನಿ ಡಿಜಿಟಲ್ ಮಾಧ್ಯಮ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ. ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ (ಪಿ.ಆರ್.ಸಿ.ಐ.) ಉಡುಪಿ – ಮಣಿಪಾಲ ಘಟಕ ಆಶ್ರಯದಲ್ಲಿ ವಿಶ್ವ ಸಂವಹನಕಾರರ ದಿನಾಚರಣೆ ಅಂಗವಾಗಿ ಕರಾವಳಿ ಇ – ಧ್ವನಿ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.

Call us

Call us

ಹುಟ್ಟುರಾದ ಕಂಜೂರಿನ ದಿ. ಲಕ್ಷ್ಮೀನಾರಾಯಣ ಹಾಗು ಸತ್ಯಭಾಮಾ ದಂಪತಿಗಳ ಪುತ್ರ ಜನಾರ್ದನ್ ಕೊಡವೂರು ಅವರು, ವಿಜಯವಾಣಿ ಪತ್ರಿಕೆಯ ಪ್ರಮುಖ ವರದಿಗಾರರಾಗಿಯೂ ಹಲವು ವರ್ಷದಿಂದ ವೃತ್ತಿಯಲ್ಲಿ ಸೇವೆ ಸಲ್ಲಿದ್ದಾರೆ.

Call us

Call us

2013ರಲ್ಲಿ ದೊರೆತ ಜಿಲ್ಲಾ ಕನ್ನಡ ರಾಜೋತ್ಸವ ಪ್ರಶಸ್ತಿ, ಉಪಾಧ್ಯಾಯ ಸಮ್ಮಾನ್ ಎಂಬ ರಾಜ್ಯ ಮಟ್ಟದ ಪ್ರಶಸ್ತಿ ಜೊತೆಗೆ ಯಶೋ ಮಾಧ್ಯಮ ಅವಾರ್ಡ್, ಪಲಿಮಾರು ಶ್ರೀಗಳು ಅನುಗ್ರಹಿಸಿ ನೀಡಿದ ಮಾಧ್ಯಮ ರತ್ನ ಪ್ರಶಸ್ತಿಗಳು ಹೀಗೆ ಹತ್ತು ಹಲವು ಅಭಿನಂದನಾ ಪತ್ರಗಳು ಅವರನ್ನು ಅರಸಿಕೊಂಡು ಬಂದಿದೆ.

‘ಕಾಲದೊಂದಿಗೆ ಓಟ’ ಕಂಬಳದ ಯಶಸ್ವಿ ಛಾಯಾಚಿತ್ರ ಪ್ರದರ್ಶನ, ನವರಾತ್ರಿ ನವರಸೋತ್ಸವದ ‘ಆಡಿಸಿದರೆ ಜಗದೋದ್ದಾರನ’ ಛಾಯಾಂಕನ ಪ್ರದರ್ಶನ ‘ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ತಂದಿತ್ತ ‘ಯತಿಗಳೊಂದಿಗೆ ಒಂದು ದಿನ’ಎಂಬ ರಾಷ್ಟ್ರೀಯ ಉತ್ಸವದಲ್ಲಿ ಅದಮಾರು ಶ್ರೀಗಳ ದಿನಚರಿಯ ಛಾಯಾಚಿತ್ರ ಪ್ರದರ್ಶನಗೊಂಡಿದೆ.

ಪ್ರತಿಷ್ಠಿತ ರೋಟರಾಕ್ಟ್ ಕ್ಲಬ್ ಸಗ್ರಿಯ ಉಪಾಧ್ಯಕ್ಷರಾಗಿ, ಮಲ್ಪೆ ಕೊಡವೂರು ರೋಟರಿಯ ಕಾರ್ಯದರ್ಶಿಯಾಗಿ ವೃತ್ತಿಗೆ ಸಂಬಂಧಪಟ್ಟಂತೆ ಉಡುಪಿ ಪ್ರೆಸ್ ಫೋಟೋಗ್ರಾಫರ್ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಸ್ತುತ ಅದರ ಅಧ್ಯಕ್ಷನಾಗಿ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರತರ ಸಂಘದ ಸದಸ್ಯನಾಗಿ, ಪ್ರತಿಷ್ಠಿತ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ನ ಜೊತೆ ಕಾರ್ಯದರ್ಶಿಯಾಗಿದ್ದು, ಇತ್ತೀಚೆಗಷ್ಟೇ ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅವರ ಪತ್ನಿ ಅಂಚೆ ಕಛೇರಿ ಉದ್ಯೋಗಿ ಪೂರ್ಣಿಮಾ ಜನಾರ್ದನ್ ಅವರು ಇತ್ತೀಚೆಗಷ್ಟೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಪೂಜಾ, ಪ್ರಜ್ಞಾ ಇಬ್ಬರು ಪುತ್ರಿಯರಿದ್ದಾರೆ.

Leave a Reply

Your email address will not be published. Required fields are marked *

three × 3 =