ಜಯ ಕರ್ನಾಟಕ ಜಿಲ್ಲಾ ಯುವ ಘಟಕ ಮತ್ತು ಬೈಂದೂರು ತಾಲೂಕು ಯುವ ಘಟಕದ ಪದಗ್ರಹಣ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ನಾವುಂದ: ಜಯ ಕರ್ನಾಟಕ ಜಿಲ್ಲಾ ಯುವ ಘಟಕ ಮತ್ತು ಬೈಂದೂರು ತಾಲೂಕು ಯುವ ಘಟಕದ ಉದ್ಘಾಟನಾ ಸಮಾರಂಭ ಹಾಗೂ ಪದಗ್ರಹಣ ಸಮಾರಂಭ ನಾವುಂದ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ನಡೆಯಿತು.

Call us

Call us

Visit Now

ಜಯ ಕರ್ನಾಟಕದ ಸಂಘಟನೆಯ ರಾಜಾಧ್ಯಕ್ಷ ಎಚ್.ಎಸ್.ದೀಪಕ್ ಉದ್ಘಾಟಿಸಿ ಮಾತನಾಡಿ, ಯುವ ಘಟಕವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಎಚ್.ಎಸ್.ದೀಪಕ್, ನಮ್ಮ ಹಕ್ಕುಗಳನ್ನು ಪಡೆಯಬೇಕಾದರೆ ಸಂಘಟನೆ ಬಲಿಷ್ಠವಾಗಿರಬೇಕು. ಜಯ ಕರ್ನಾಟಕ ಸಂಘಟನೆ ಉತ್ತಮ ಸಂಘಟನೆಯಾಗಿದ್ದು, ಸಾಮಾನ್ಯ ಜನರಿಗೆ ನ್ಯಾಯ ಒದಗಿಸಲು ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.

Click Here

Click here

Click Here

Call us

Call us

ಸರಕಾರಿ ಆಸ್ಪತ್ರೆಗಳಲ್ಲಿ ಗರಿಷ್ಠ ಸೌಲಭ್ಯಕ್ಕಾಗಿ ಹೋರಾಟ ನಡೆಸಿದ ಪರಿಣಾಮ ಇಂದು ಸರಕಾರ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ವಿಶೇಷ ಆರೋಗ್ಯ ಪ್ಯಾಕೆಜ್ ಒದಗಿಸಿದೆ. ಈ ಸಂಘಟನೆಯ ಶಾಲನ್ನು ನೋಡಿದರೆ ಭ್ರಷ್ಟ ಅಧಿಕಾರಿ ವರ್ಗದವರು ಭಯಪಡುತ್ತಿದ್ದಾರೆ ಇದು ನಮ್ಮ ಸಂಘಟನೆಯಿಂದ ಸಾಧ್ಯವಾಗಿದೆ. ರಾಜ್ಯದ ಯಾವುದೇಪ್ರದೇಶದಲ್ಲಿ ನಮ್ಮ ಸದಸ್ಯರಿಗೆ ಅನ್ಯಾಯವಾದಲ್ಲಿ ತ್ವರಿತವಾಗಿ ಸ್ಪಂದಿಸುತ್ತೇವೆ ಎಂದರು.

ಸಮಾರಂಭ ಅಧ್ಯಕ್ಷತೆಯನ್ನು ಜಯಕರ್ನಾಟಕ ಜಿಲ್ಲಾಧ್ಯಕ ಅಧ್ಯಕ್ಷ ಹಾಗೂ ಆಶ್ರಯದಾತ ಯೂನಿಯನ್ ಅಧ್ಯಕ್ಷ ಕೆ.ರಮೇಶ್ ಶೆಟ್ಟಿ ವಹಿಸಿ ಮಾತನಾಡಿ ನಾವು ಯಾರಿಗೂ ಹೆದರಿ ಹಿಂದೆ ಹೋಗಬೇಕಾಗಿಲ್ಲ, ನಾವುಗಳು ಧೈರ್ಯದಿಂದ ಯಾವುದೇ ಕೆಲಸಗಳನ್ನು ಮಾಡುವ ಶಕ್ತಿಯಿದೆ. ಜಯ ಕರ್ನಾಟಕದ ಶಾಲುಗಳು ಪ್ರತಿಯೊಬ್ಬರ ಮನೆಯಲ್ಲಿ ಇದ್ದರೇ ಯಾವ ವ್ಯಕ್ತಿಯೂ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ. ಹಾಗೇ ಸಮಾಜದಲ್ಲಿ ಅರಿವು ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ನಮ್ಮ ಸಂಘಟನೆಯಿಂದ ನಡೆಸಲಾಗಿದೆ, ಇದರ ಜೊತೆಗೆ ನಾಗರಿಕರ ಪಾತ್ರ ಬಹು ದೊಡ್ಡದು. ಎಲ್ಲಾ ಕಡೆಗೆ ಸಂಘಟನೆಯ ಶಾಖೆಗಳನ್ನು ತೆರೆದು ಲಕ್ಷಾಂತರ ಕಾರ್ಯಕರ್ತರನ್ನು ಹೊಂದಿಗೆ. ಈ ಸಮಾಜಕ್ಕೆ ಸಮಾನತೆಯ ಅವಶ್ಯಕತೆ ಇದೆ. ಹೋರಾಟಗಳಿಂದಲೇ ನಾವು ಅಭಿವೃದ್ಧಿ ಕಾಣಲು ಸಾಧ್ಯ ಎಂದರು.

ಜಯಕರ್ನಾಟಕ ಜಿಲ್ಲಾ ಗೌರವ ಸಲಹೆಗಾರ ಸುಧಾಕರ್ ರಾವ್ ಪ್ರಾಸ್ತಾವಿಕ ಮಾತನಾಡಿ ಜಯಕರ್ನಾಟಕ ಸಂಘಟನೆಯ ಯುವ ಕಾರ್ಯಕರ್ತರು ಸಮಾಜದ ಒಳಿತಿಗಾಗಿ ಬಡ ಹಾಗೂ ನೊಂದ ಕುಟುಂಬಗಳ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು. ಹಾಗಾದಾಗ ಮಾತ್ರ ಸಂಘಟನೆಯ ಸ್ಥಾಪನೆಯ ಉದ್ದೇಶ ಸಾರ್ಥಕವಾಗುವುದು ಎಂದರು.

ಈ ಸಂದರ್ಭದಲ್ಲಿ ಜಯಕರ್ನಾಟಕ ಜಿಲ್ಲಾ ಪ್ರದಾನ ಕಾರ್ಯದರ್ಶಿ ನಿತ್ಯಾನಂದ ಅಮೀನ್, ಜಿಲ್ಲಾ ಕಾರ್ಯಧ್ಯಕ್ಷ ಕರುಣಾಕರ ಪೂಜಾರಿ, ಪ್ರದಾನ ಸಂಚಾಲಕ ಅಣ್ಣಪ್ಪ ಕುಲಾಲ್ ಹೆಬ್ರಿ, ಉಪಾಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ, ಶಶಿಕಾಂತ ಶೆಟ್ಟಿ, ಅಕ್ಬರ್ ಬಾಷಾ,ಬೈಂದೂರು ತಾಲೂಕು ಅಧ್ಯಕ್ಷ ಮಾಣಿಕ್ಯ ಹೋಬಳಿದಾರ್, ಜಿಲ್ಲಾ ಮಾದ್ಯಮ ವಕ್ತಾರ ಗಣೇಶ್ ರಾಜ್ ಸರಳೆಬೆಟ್ಟು, ತಾಲೂಕು ಮಾದ್ಯಮ ವಕ್ತಾರ ಎಚ್.ಸುಶಾಂತ್ ಬೈಂದೂರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕರುಣಾಕರ್ ಮಾರ್ಪಳ್ಳಿ, ಗಿರೀಶ ಕಲ್ಮಾಡಿ, ವಿ.ಕೆ ರಾಘು, ವಕ್ವಾಡಿ ಘಟಕದ ಅಧ್ಯಕ್ಷ ರಾಘವೇಂದ್ರ ವಕ್ವಾಡಿ, ಮರವಂತೆ ಘಟಕದ ಅಧ್ಯಕ್ಷ ಧರ್ಮರಾಜ್, ಬೈಂದೂರು ತಾಲೂಕು ಮಹಿಳಾ ಘಟಕದ ಅಧ್ಯಕ್ಷ ರೇಣುಕಾ ಪುರುಷೋತ್ತಮ ಗಾಣಿಗ, ಆಲಂದೂರು ಘಟಕದ ಅಧ್ಯಕ್ಷೆ ಮಾಲತಿ ಆರ್ ಶೆಟ್ಟಿ, ಶಿರೂರು ಘಟಕದ ಅಧ್ಯಕ್ಷೆ ರಜನಿ ಗಣೇಶ್ ಗಾಣಿಗ, ಚಂದಣ ಘಟಕದ ಅಧ್ಯಕ್ಷ ಪೂರ್ಣಿಮಾ ವಿನೋದ ಗಾಣಿಗ, ಶಿರೂರು ಮಾರುಕಟ್ಟೆ ಅಧ್ಯಕ್ಷೆ ಪುಷ್ಪರಘುರಾಮ್, ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಸಂಧ್ಯಾ ವಿಶ್ವನಾಥ, ಯಳಜಿತ ಗ್ರಾಮದ ಅಧ್ಯಕ್ಷೆ ದೇವಿ, ತಾಲೂಕು ಉಪಾಧ್ಯಕ್ಷೆ ಶಾರದಾ ಗಾಣಿಗ, ಕಡ್ಕೆ ಘಟಕದ ಅಧ್ಯಕ್ಷೆ ಸುಶೀಲಾ ಕರ‍್ನಿಗದ್ದೆ, ಕಡ್ಕೆ ಯುವ ಘಟಕದ ಅಧ್ಯಕ್ಷ ಮಂಜು ಗೊಂಡ, ರೇಷ್ಮಾ, ಜ್ಯೋತಿ ಸಂತೆಕಟ್ಟೆ, ಜಿಲ್ಲಾ ಯುಕ ಘಟಕದ ಅಧ್ಯಕ್ಷ ವಿನೀತ್ ಕುಮಾರ್, ತಾಲೂಕು ಯುವ ಘಟಕದ ಅಧ್ಯಕ್ಷ ಜೆ.ಪಿ.ಬಡಾಕೆರೆ, ಉಪಸ್ಥಿತರಿದ್ದರು.

ಬೈಂದೂರು ತಾಲೂಕು ಜಯಕರ್ನಾಟಕ ಅಧ್ಯಕ್ಷ ಜಯಪ್ರಕಾಶ ಸ್ವಾಗತಿಸಿದರು, ಪೂಣಿರ್ಮಾ ಆಚಾರ್ಯ ಸೇನಾಪುರ ಕಾರ್ಯಕ್ರಮ ನಿರ್ವಹಿಸಿ/ನಿರೂಪಿಸಿದರು. ಬೈಂದೂರು ಘಟಕ ಮಾಧ್ಯಮ ವಕ್ತಾರ ಪುರುಷೋತ್ತಮದಾಸ್ ವಂದಿಸಿದರು.

Leave a Reply

Your email address will not be published. Required fields are marked *

12 − seven =