ಜವಾಬ್ದಾರಿಯುಳ್ಳ ಪತ್ರಕರ್ತ ಪತ್ರಿಕೋದ್ಯಮಕ್ಕೆ ಮಾದರಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಸಮಸ್ಯೆಗಳ ಬಗೆಗೆ ಸುದ್ದಿ ಪ್ರಕಟಿಸಿ ಸುದ್ದಿಯಾಗುವ ಬದಲು ಸಮಸ್ಯೆಯನ್ನು ಬಗೆಹರಿಸಿ ಸುದ್ದಿಯಾಗುವುದು ಶ್ರೇ? ಎಂದು ಹಿರಿಯ ಉಪಸಂಪಾದಕ ಮೋಹನ ದಾಸ್ ಮರಕಡ ಅಭಿಪ್ರಾಯಪಟ್ಟರು.

Click here

Click Here

Call us

Call us

Visit Now

Call us

Call us

ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಅಭಿವ್ಯಕ್ತಿ ಫೋರಂ ವತಿಯಿಂದ ನಡೆದ ವಿಶೇ? ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ’ಪತ್ರಕರ್ತರು ಹಾಗೂ ಸಾಮಾಜಿಕ ಹೊಣೆಗಾರಿಕೆ’ ವಿಷಯದ ಕುರಿತು ಮಾತನಾಡಿದರು. ಹೊಣೆಗಾರಿಕೆಯುಳ್ಳ ಪತ್ರಕರ್ತ ಸುದ್ದಿ ಪ್ರಕಟಣೆಯ ಬಳಿಕ ಸುದ್ದಿಯನ್ನು ಬೆಂಬಿಡದೆ ಪುನರ್‌ಪರಿಶೀಲಿಸಿ ಸಮಸ್ಯೆ ಬಗೆಹರಿದಿದೆಯೇ ಎಂದು ಖಾತ್ರಿ ಪಡಿಸಿಕೊಳ್ಳಬೇಕು ಹಾಗೂ ಅಂತವರಿಂದ ಮಾತ್ರ ಸಮಾಜಕ್ಕೆ ಅದ್ಬುತವಾದದ್ದನ್ನು ಕೊಡುಗೆ ನಿರೀಕ್ಷಿಸಬಹುದು ಎಂದರು.

ಪತ್ರಿಕೋದ್ಯಮ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವ ಕಾರ‍್ಯಕ್ಕೆ ಮುಂದಾಗಬೇಕು ಹಾಗೂ ತನ್ನ ವೈಯಕ್ತಿಕ ನೆಲೆಯಲ್ಲಿ ಎಲ್ಲಾ ರೀತಿಯ ಮಾರ್ಗದರ್ಶನ, ಸಹಕಾರ ನೀಡುವುದಾಗಿ ತಿಳಿಸಿದರು.

ಪತ್ರಿಕೋದ್ಯಮದಲ್ಲಿ ವಿಷಯವನ್ನು ಕೆಣಕುವುದು ಅನಿವಾರ್ಯ, ಆದರೆ ಭಾವನೆಯನ್ನು ಕೆಣಕುವುದು ಸಮಂಜಸವಲ್ಲ. ಸೂಕ್ಷ ಸಂಧರ್ಭಗಳಲ್ಲಿ ಅದು ಸಾವಿನ ಮನೆಯಾಗಿರಬಹುದು ಅಥವಾ ಅಪಘಾತದ ಕ್ಷಣವಾಗಿರಬಹುದು ಅಲ್ಲಿ ಮಾನವೀಯತೆಯೇ ಮುಖ್ಯವಾಗಿರುತ್ತದೆ ಎಂದರು.

ಪತ್ರಕರ್ತರು ಬಡವರ ಪಾಲಿಗೆ ಆಶಾಕಿರಣವಾಗಿ ಅವರ ಬದುಕಿನಲ್ಲಿ ಹೊಸ ಚೈತನ್ಯ ಮೂಡುವಂತೆ ಮಾಡಬೇಕು ಎಂದರು. ತಮ್ಮ ವೃತ್ತಿ ಜೀವನದಲ್ಲಿ ಎದುರಾದ ಹತ್ತು ಹಲವು ಸಮಸ್ಯೆಗಳನ್ನು ಮೆಟ್ಟಿ ನಿಂತ ಬಗೆಯನ್ನು ವಿವರಿಸಿದರು. ಕಾರ‍್ಯಕ್ರಮವನ್ನು ಹರ್ಷಿತಾ ನಿರೂಪಿಸಿದರು. ಉಪನ್ಯಾಸ ಕಾರ್ಯಕ್ರಮದಲ್ಲಿ ವಿಭಾಗದ ಸಂಯೋಜಕರಾದ ಪ್ರಸಾದ್ ಶೆಟ್ಟಿ ಉಪನ್ಯಾಸಕರಾದ ಡಾ ಶ್ರೀನಿವಾಸ್ ಹೊಡೆಯಾಳ, ಡಾ. ಸಫಿಯಾ, ಸುಶ್ಮಿತಾ, ನಿಶಾನ್ ಹಾಗು ವಿದ್ಯಾರ್ಥಿಗಳು ಹಾಜರಿದ್ದರು.

Call us

Leave a Reply

Your email address will not be published. Required fields are marked *

eleven − 7 =