ಜಾನುವಾರು ವಧೆ; ಮೂವರ ಬಂಧನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಕ್ರಮವಾಗಿ ಜಾನುವಾರುಗಳನ್ನು ವಧೆ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಗಂಗೊಳ್ಳಿ ಪೊಲೀಸರು ಮೂವರನ್ನು ಬಂಧಿಸಿದ ಘಟನೆ ತ್ರಾಸಿಯ ಮೊವಾಡಿಯ ಆನ್‌ಗೊàಡು ಗಾಣದಮಕ್ಕಿ ಕೊರಗರ ಕಾಲೋನಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

Call us

Call us

Call us

ಮೊವಾಡಿ ಗಾಣದ ಮಕ್ಕಿ ಕೊರಗರ ಕಾಲನಿಯಲ್ಲಿರುವ ಮನೆಯೊಂದರ ಹಿಂಭಾಗದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಮಾಂಸಕ್ಕಾಗಿ ಕಡಿಯಲಾ ಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗಂಗೊಳ್ಳಿ ಪೊಲೀಸರು ಅಕ್ರಮವಾಗಿ ಜಾನುವಾರುಗಳನ್ನು ಕಡಿಯುತ್ತಿದ್ದ ಹರೀಶ, ಹರೀಶ್‌ ಹಾಗೂ ಬಿದ್ಕಲ್‌ಕಟ್ಟೆಯ ಶ್ರೀಕಾಂತ ಅವರ‌ನ್ನು ಬಂಧಿಸಿದ್ದಾರೆ.

ಸ್ಥಳದಲ್ಲಿದ್ದ ಜಾನುವಾರು ಮಾಂಸವನ್ನು ಠಾಣೆಗೆ ಸಾಗಿಸಿ ಜಾನುವಾರುಗಳನ್ನು ವಧೆ ಮಾಡಲು ಉಪಯೋಗಿಸಿದ್ದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳದಲ್ಲಿ ಒಂದು ಜಾನುವಾರುವನ್ನು ಕಡಿದು ಇಡಲಾಗಿದ್ದು, ಇನ್ನೊಂದು ಜಾನುವಾರಿನ ಕುತ್ತಿಗೆಯನ್ನು ಕತ್ತರಿಸಿ ಇಟ್ಟಿರುವುದು ಕಂಡುಬಂದಿತ್ತು.

ಜಾನುವಾರು ಪರಿರಕ್ಷಣೆ ಮತ್ತು ಗೋ ವಧೆ ಪ್ರತಿಬಂಧಕ ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

seventeen − 15 =