ಜಿಎಸ್‌ಬಿ ಕ್ರಿಕೆಟ್ ಪಂದ್ಯಾಟ: ಕೋಟೇಶ್ವರ ಕೊಂಕಣ್ ಎಕ್ಸ್‌ಪ್ರೆಸ್ ತಂಡ ಪ್ರಥಮ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾರ್ಕಳದ ಸ್ವರಾಜ್ಯ ಮೈದಾನದಲ್ಲಿ ಜರುಗಿದ ಜಿಎಸ್‌ಬಿ ಅಂಡರ್-19 ಕ್ರಿಕೆಟ್ ಪಂದ್ಯಾಟದಲ್ಲಿ ಕೋಟೇಶ್ವರದ ಕೊಂಕಣ್ ಎಕ್ಸ್‌ಪ್ರೆಸ್ ತಂಡ ವಿಜೇತರಾಗಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ದ್ವಿತೀಯ ಸ್ಥಾನವನ್ನು ಜಿಎಸ್‌ಬಿ ಕೋಟ ತಂಡ ಪಡೆದುಕೊಂಡಿದೆ. ಅಂತಿಮ ಪಂದ್ಯದ ಪಂದ್ಯಶ್ರೇಷ್ಟ ಮತ್ತು ಉತ್ತಮ ದಾಂಡಿಗ ಪ್ರಶಸ್ತಿಯನ್ನು ಕಾರ್ತಿಕ್ ಶ್ಯಾನುಭಾಗ್, ಉತ್ತಮ ಎಸೆತಗಾರನಾಗಿ ಅನಂತ ಶೆಣೈ, ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ವಿವೇಕ ಪ್ರಭು ಪಡೆದರು. ಕೊಂಕಣ್ ಎಕ್ಸ್‌ಪ್ರೆಸ್ ಪುರುಷೋತ್ತಮ ಕಾಮತ್ ತಂಡಕ್ಕೆ ಶುಭಕೋರಿದರು. ತಂಡದ ಅಧ್ಯಕ್ಷರಾದ ಸತೀಶ ಕಾಮತ್, ಉಪಾಧ್ಯಕ್ಷರಾದ ರಾಜೇಶ ಪ್ರಭು, ರವೀಂದ್ರ ನಾಯಕ್ ಹಾಗೂ ಸರ್ವಸದಸ್ಯರು ಪಾಲ್ಗೊಂಡಿದ್ದರು.

Call us

Call us

Leave a Reply

Your email address will not be published. Required fields are marked *

ten − three =