ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಿಎಸ್ಬಿ ಸೇವಾ ಟ್ರಸ್ಟ್ ಕುಂಭಾಸಿ ಇವರ ನೇತೃತ್ವದಲ್ಲಿ ನೂತನವಾಗಿ ನಿರ್ಮಣಗೊಳ್ಳುತ್ತಿರುವ ಭಜನಾ ಮಂದಿರದ ಶಿಲಾನ್ಯಾಸ ಕಾರ್ಯಕ್ರಮವು ಜರುಗಿತು. ವೇ.ಮೂ. ಕೋಟ ಕಪಿಲದಾಸ್ ಭಟ್ ಹಾಗೂ ವೇ.ಮೂ. ರಾಮಚಂದ್ರ ಭಟ್ ಸೌಡ ಅವರ ಮುಂದಳತ್ವದ ಪೌರೋಹಿತ್ಯದಲ್ಲಿ ಟ್ರಸ್ಟಿನ ಅಧ್ಯಕ್ಷ ಕೆ. ಗಣೇಶ ಪ್ರಭು ಹಾಗೂ ಸರ್ವ ವಿಶ್ವಸ್ತ ಸಮಾಜ ಭಾಂದವರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು.
ಈ ಸಂದರ್ಭ ಮಂಜೇಶ್ವರ ಶ್ರೀಮದನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ದಿನೇಶ್ ಕಾಮತ್ ಕೋಟೇಶ್ವರ, ತೆಕ್ಕಟ್ಟೆ ಜಿಎಸ್ಬಿ ಸೇವಾ ಸಂಘದ ಅಧ್ಯಕ್ಷ ಟಿ. ಸಂತೋಷ್ ನಾಯಕ್, ಉದ್ಯಮಿಗಳಾದ ಟಿ.ಅನಂತ್ ನಾಯಕ್ ತೆಕ್ಕಟ್ಟೆ, ಕೆ.ರಾಧಾಕೃಷ್ಣ ನಾಯಕ್ ಕೋಟ, ಸ್ಥಳ ದಾನಿಗಳ ಪರವಾಗಿ ಎಸ್.ನಾಗೇಶ್ ಶಾನುಭಾಗ್ ಸಾಲಿಗ್ರಾಮ, ಜಿಎಸ್ಬಿ ಸೇವಾ ಟ್ರಸ್ಟ್ ಕುಂಭಾಶಿಯ ಪದಾಧಿಕಾರಿಗಳು, ಗ್ರಾಮದ ಗೌಡ ಸಾರಸ್ವತ ಸಮಾಜದ ಸದಸ್ಯರು ಉಪಸ್ಥಿತರಿದ್ದರು.
