ಜಿಲ್ಲಾ ಕಾಲೇಜು ವಿದ್ಯಾರ್ಥಿಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವಿಕಲಚೇತನ ರೋಹನ್ ನಾಯಕ್ ಆಯ್ಕೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿ ಯು. ಶೇಷಗಿರಿ ಶೆಣೈ ಸ್ಮರಣಾರ್ಥ ಕುಂದಪ್ರಭ ಕುಂದಾಪುರ ಇವರ ಸಹಭಾಗಿತ್ವದೊಂದಿಗೆ ಆಯೋಜಿಸಿದ ನಾಲ್ಕನೆಯ ಉಡುಪಿ ಜಿಲ್ಲಾ ಕಾಲೇಜು ವಿದ್ಯಾರ್ಥಿಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ರೋಹನ್ ನಾಯಕ್ ಆಯ್ಕೆಯಾಗಿದ್ದಾರೆ.

Call us

Call us

ವಿಶೇಷವೆಂದರೆ ರೋಹನ್ ಹುಟ್ಟು ಅಂಧ. ಕಣ್ಣಿಲ್ಲದಿದ್ದರೂ ಸದಾ ಕ್ರಿಯಾಶೀಲ, ಕುತೂಹಲ ಸ್ವಭಾವದ ನಗುಮೊಗದ, ಉಪನ್ಯಾಸಕರ ಅಚ್ಚುಮೆಚ್ಚಿನ ವಿದ್ಯಾರ್ಥಿ. ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ಉದ್ಯಮಿ ನಾಗರಮಠ ರಘುನಂದನ್ ನಾಯಕ್ ದಂಪತಿಯ ಹಿರಿಯ ಪುತ್ರನಾಗಿರುವ ಈತನ ಮಾತೃ ಭಾಷೆ ಕೊಂಕಣಿ. ಕೆ.ಜಿ. ತರಗತಿಯಿಂದ ೭ ನೇ ತರಗತಿಯವರೆಗೆ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಅನಂತರ ೮ ರಿಂದ ೧೦ ರವರೆಗೆ ಮಂಗಳೂರಿನ ಖomಚಿಟಿ & ಅಚಿಣheಡಿiಚಿಟಿ ಐobo Sಛಿhooಟ ಈoಡಿ ಖಿhe ಃಟiಟಿಜನಲ್ಲಿ ವ್ಯಾಸಂಗ ಮಾಡಿರುವ ಈತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ಪಿ.ಯು. ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಈತನಿಗೆ ಬಿ.ಎ. ಮಾಡಿ. ಸಾಧ್ಯವಾದರೆ ಎಲ್.ಎಲ್.ಬಿ ಮಾಡಿ ವಕೀಲನಾಗಬೇಕೆಂಬಾಸೆ ಈತನದ್ದು.

Call us

Call us

ಮಂಗಳೂರಿನಲ್ಲಿದ್ದಾಗ ಬ್ರೈಲ್ ಲಿಪಿಯನ್ನು ಅಭ್ಯಸಿರುವ ಈತ ಅಲ್ಲಿನ ಗುರುಗಳ ಮತ್ತು ಸ್ನೇಹಿತರ ಸಹಾಯದಿಂದ ಕನ್ನಡ, ಹಿಂದಿ, ಇಂಗ್ಲಿಷ್‌ನ್ನು ಬರೆಯಲು ಹಾಗೂ ಓದಲು ಕಲಿತಿದ್ದಾನೆ. ಹತ್ತನೆ ತರಗತಿಯ ಪರೀಕ್ಷೆ ಬರೆಯಲು ಬ್ರೈಲ್ ಲಿಪಿಯಲ್ಲಿ ಅವಕಾಶವಿಲ್ಲದ ಕಾರಣ ಪರೀಕ್ಷಾ ಮಂಡಳಿಯ ನಿಯಮದ ಪ್ರಕಾರ ಈತನಿಗಿಂತ ಕಡಿಮೆ ವಯಸ್ಸಿನ, ಈತನ ಪಾಠದ ವಿಷಯಕ್ಕೆ ಹೊರತಾದ ಸಹಾಯಕರೋರ್ವರನ್ನು ಸ್ಕ್ರೈಬ್ ಆಗಿ ನೇಮಿಸಿಕೊಂಡು ಪರೀಕ್ಷೆ ಬರೆದು ಉತ್ತೀರ್ಣನಾಗಿದ್ದಾನೆ.

ಓದುವುದೆಂದರೆ ಈತನಿಗೆ ಬಲು ಇಷ್ಟ. ಆಗಾಗ ಸಂಗೀತವನ್ನು ಆಲಿಸುತ್ತಿರುವ ಈತ ಟಿ.ವಿ.ಯ ನ್ಯೂಸ್‌ಗಳನ್ನು ನಿತ್ಯವೂ ಕೇಳುತ್ತಾನೆ. ತನ್ನ ಸ್ನೇಹಿತರೊಂದಿಗೆ ಸದಾ ಮಾತಾಡುತ್ತಾ ಖುಷಿ ಪಡುತ್ತಾನೆ. ಎದುರಿಗೆ ಯಾರೇ ಬರಲಿ, ಯಾರೋ ಬಳಿಯಲ್ಲಿದ್ದಾರೆ ಎಂಬುದು ಈತನಿಗೆ ಕೂಡಲೆ ಅರಿವಿಗೆ ಬರುತ್ತದೆ. ಎಷ್ಟೋ ವರ್ಷಗಳ ಹಿಂದೆ ಸಿಕ್ಕವರು ಮತ್ತೆ ಸಿಕ್ಕರೂ ಅವರ ಮಾತುಗಳಿಂದ ಆ ವ್ಯಕ್ತಿಯನ್ನು ಗುರುತಿಸಿ ಮಾತನಾಡಿಸುತ್ತಾನೆ.

ಈ ಪ್ರಪಂಚದಲ್ಲಿ ಎಷ್ಟೋ ಜನರು ನನ್ನಂತೆ ಅಂಧರಿದ್ದಾರೆ. ಮತ್ತೊಬ್ಬರ ಕಣ್ಣುಗಳನ್ನು ದಾನವಾಗಿ ಪಡೆದು ಮತ್ತೆ ಪ್ರಪಂಚವನ್ನು ನೋಡಿದವರಿದ್ದಾರೆ. ಹಾಗಾಗಿ ನಿಮ್ಮಲ್ಲಿ ಕೇಳುವುದಿಷ್ಟೆ. ನೀವು ನಿಮ್ಮ ಅಂಗಾಂಗಗಳನ್ನು ನಿಮ್ಮ ಕಾಲಾನಂತರ ದಾನಮಾಡಿ. ದೇಹವನ್ನು ಮಣ್ಣು ಮಾಡುವುದಕ್ಕೂ ಮೊದಲು ನಿಮ್ಮ ಕಣ್ಣುಗಳನ್ನು ದಾನಮಾಡಿ. ಬೆಳಕಿಲ್ಲದ ಅಂಧರ ಬಾಳಿಗೆ ಬೆಳಕಾಗಿ ಎಂಬುದು ಈತನ ಕಳಕಳಿ.

 

Leave a Reply

Your email address will not be published. Required fields are marked *

one + fourteen =