ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಹಾಗೂ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಳ್ಳುವುದರ ಮೂಲಕ 9 ಮಂದಿ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಘವೇಂದ್ರ, ನಿಖಿಲ್, ಮಂಜುನಾಥ್ ಶೆಟ್ಟಿ, ವಿನಯ್ ಚಿನ್ನದ ಪದಕ, ಸುಶಾಂತ್, ತನ್ಮಯ್ ಗಡಿಯಾರ್, ಕಾರ್ತಿಕ್ ಭಟ್, ದಿಶಾನ್ ಡಿ ಶೆಟ್ಟಿ, ಕೌಶಿಕ್ ಮೇರ್ಡಿ ಬೆಳ್ಳಿ ಪದಕ, ಸೂರಜ್ ಆರ್., ಶ್ರೀವತ್ಸ ಕಾಮತ್,ಸುದೀಪ್, ವರುಣ್ ಹೇರಂಭ ಆರ್ ನಾಕ್ ಕಂಚಿನ ಪದಕವನ್ನು ಗಳಿಸುವುದರ ಮೂಲಕ 14 ಪದಕಗಳನ್ನು ತಮ್ಮದಾಗಿಸಿಕೊಳ್ಳುವುದರ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿಜೇತ ತಂಡದೊಂದಿಗೆ ಕಾಲೇಜಿನ ಪ್ರಾಶುಂಪಾಲರಾದ ಗಣೇಶ ಮೊಗವೀರ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಘವೇಂದ್ರ ಗಾಣಿಗ, ತರಬೇತುದಾರ ಕೃಷ್ಣ ಮೊಗವೀರ ಉಪಸ್ಥಿತರಿದ್ದರು. ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಶುಂಪಾಲರು ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.