ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ಕ್ರೀಡಾಕೂಟ: ಕಲ್ಯಾಣಪುರ ಮಿಲಾಗ್ರಿಸ್ ತಂಡಕ್ಕೆ ಸಮಗ್ರ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲೆ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಕುಂದಾಪುರ ಸೈಂಟ್ ಮೇರಿಸ್ ಸಂಯುಕ್ತ ಕಾಲೇಜು ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ಕ್ರೀಡಾ ಕೂಟದಲ್ಲಿ ಕಲ್ಯಾಣಪುರ ವಿಲಾಗ್ರಿಸ್ ಪದವಿಪೂರ್ವ ಕಾಲೇಜು ತಂಡ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

ಕಲ್ಯಾಣಪುರ ವಿಲಾಗ್ರಿಸ್ ಪದವಿಪೂರ್ವ ಕಾಲೇಜು ಬಾಲಕರ ತಂಡ ಸಮಗ್ರ ಪ್ರಶಸ್ತಿ ಪಡೆದಿದ್ದು, ನಿಟ್ಟೆ ಡಾ.ಎನ್.ಎಸ್.ಎ.ಎಂ. ಪದವಿಪೂರ್ವ ಕಾಲೇಜ್ ಬಾಲಕಿಯರು ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಮಣಿಪಾಲ ಪದವಿಪೂರ್ವ ಕಾಲೇಜು ಸಂಗಮೇಶ್ ಬಾಲಕರ ವೀರಾಗ್ರೇಸ ಪ್ರಶಸ್ತಿ ಪಡೆದೆಕೊಂಡರೆ, ಬಾಲಕಿಯರ ವಿಭಾಗದಲ್ಲಿ ನಿಟ್ಟೆ ಡಾ.ಎನ್.ಎಸ್.ಎ.ಎಂ. ಪದವಿಪೂರ್ವ ಕಾಲೇಜು ಭೂಮಿಕಾ ವೀರಾಗ್ರಣಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪದಲ್ಲಿ ಉಡುಪಿ ಧರ್ಮಪ್ರಾಂತ್ಯ ಛಾನ್ಸಿಲರ್ ವಂ. ವೆಲೇರಿಯನ್ ಮೆಂಡೋನ್ಸಾ ಪ್ರಶಸ್ತಿ ಪ್ರದಾನ ಮಾಡಿದರು. ಜಿಲ್ಲಾ ಕ್ರೀಡಾ ಸಂಯೋಜಕ ಎಸ್.ಶ್ರೀಧರ ಶೆಟ್ಟಿ ಕ್ರೀಡಾ ಕೂಟದಲ್ಲಿ ಶ್ರಮಿಸಿದವರಿಗೆ ಅಭಿನಂದನೆ ಸಲ್ಲಿಸಿದರು.

ಕುಂದಾಪುರ ಸಹಾಯಕ ಧರ್ಮಗುರು ರೆ.ಫಾ. ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಹೋಲಿ ರೋಜರಿ ಚರ್ಚ್ ಕಾರ್ಯದರ್ಶಿ ಫೆಲ್ಸಿಯಾನಾ ಡಿಸೋಜಾ, ಜಿಲ್ಲಾ ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಬಿ.ನಾಯ್ಕ್, ಸೈಂಟ್ ಮೇರಿ ಪಿಯು ಕಾಲೇಜು ಉಪಪ್ರಾಂಶುಪಾಲೆ ಮಂಜುಳಾ ನಾಯರ್, ಅಂಪಾರು ಬಾಲಕೃಷ್ಣ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಕುಸುಮಾಕರ ಶೆಟ್ಟಿ, ಸದಾನಂದ ಶೆಟ್ಟಿ, ಸೈಂಟ್ ಮೇರಿಸ್ ಪ್ರೌಢಶಾಲೆ ಮುಖ್ಯಶಿಕ್ಷಕಿ ಸಿಸ್ಟರ್ ಚೇತನಾ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ಸಿಸ್ಟರ್ ಜೋಯ್ಸಲಿನ್, ಸೈಂಟಿ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಡೋರತಿ ಸುವಾರಿಸ್, ಹೋಲಿ ರೋಜರಿ ಕ್ಲಿಂಟನ್ ಗಾರ್ಡ್ ಮುಖ್ಯಶಿಕ್ಷಕಿ ಶೈಲಾ ಡಿ.ಅಲ್ಮೇಡ, ಸೈಂಟ್ ಮೇರಿಸ್ ಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ಶಾಂತಿ ರಾಣಿ ಬೆರೆಟ್ಟೊ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ರತ್ನಾಕರ ಶೆಟ್ಟಿ ಇದ್ದರು.

ಸೈಂಟ್ ಮೇರಿಸ್ ಪಿಯು ಕಾಲೇಜು ಪ್ರಾಂಶುಪಾಲ ವಂ.ಫಾ.ಅಮೃತ್ ಪ್ರವೀಣ್ ಮಾರ್ಟೀಸ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸತೀಶ್ ಶೆಟ್ಟಿ ಹಾಗೂ ಗೋಪಾಲ ಶೆಟ್ಟಿ ನಿರೂಪಿಸಿದರು. ಕ್ರೀಡಾ ಕೂಟದಲ್ಲಿ ಶ್ರಮಿಸಿದ ದೆಹಿಕ ಶಿಕ್ಷಣ ಶಿಕ್ಷಕರಿಗೆ ಗೌರವ ಸಲ್ಲಿಸಲಾಯಿತು. ಕ್ರೀಡಾ ಕೂಟ ಸಂಘಟಿಕ ಚಂದ್ರಶೇಖರ ಬೀಜಾಡಿ ಅವರನ್ನು ಗೌರವಿಸಲಾಯಿತು. ಸೈಂಟ್ ಮೇರಿಸ್ ಪ್ರೌಢ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ವಂದಿಸಿದರು.

Leave a Reply

Your email address will not be published. Required fields are marked *

4 × 1 =