ಜಿಲ್ಲಾ ಮಟ್ಟದ ವಿಕಲ ಚೇತನರ ಕ್ರೀಡಾಕೂಟ: ಕುಂದಾಪುರ ವಲಯಕ್ಕೆ ಸಮಗ್ರ ಪ್ರಶಸ್ತಿ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಇವರು ಮೂಡುಬೆಳ್ಳೆಯ ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಸಿದ ಜಿಲ್ಲಾ ಮಟ್ಟದ ವಿಕಲ ಚೇತನರ ಕ್ರೀಡಾಕೂಟದಲ್ಲಿ ಕುಂದಾಪುರ ವಲಯದ ವಿವಿಧ ಶಾಲೆಗಳಿಂದ ಭಾಗವಹಿಸಿದ ೧೮ ವಿದ್ಯಾರ್ಥಿಗಳು ೧೨ ಚಿನ್ನ,೮ ಬೆಳ್ಳಿ ಹಾಗೂ ೧೦ ಕಂಚಿನ ಪದಕಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಕುಂದಾಪರ ವಲಯದ ಬಿ.ಐ.ಇ.ಆರ್.ಟಿ.ಶ್ರೀ ಸೀತಾರಾಮ ಶೆಟ್ಟಿಯವರು ತಂಡದ ವ್ಯವಸ್ಥಾಪಕರಾಗಿ ಮಾರ್ಗದರ್ಶನ ಮಾಡಿರುತ್ತಾರೆ.

Call us

Call us

ಸಮಗ್ರ ಪ್ರಶಸ್ತಿ ಪಡೆದ ಕುಂದಾಪುರ ವಲಯದ ಈ ತಂಡವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಅಶೋಕ್ ಕಾಮತ್ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಶ್ರೀ ಸದಾನಂದ ಬೈಂದೂರು ಅಭಿನಂದಿಸಿ, ರಾಜ್ಯ ಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

 

Call us

Call us

Leave a Reply

Your email address will not be published. Required fields are marked *

4 × four =