ಉಡುಪಿ ಜಿಲ್ಲೆಯಲ್ಲಿ ಏ. 4 ರಿಂದ 14 ರ ವರೆಗೆ ಸೇನಾ ನೇಮಕಾತಿ ರ‍್ಯಾಲಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: ಸೇನೆಯಲ್ಲಿ ಸೇರ್ಪಡೆಗೊಳ್ಳಲು ನೇಮಕಾತಿ ರ‍್ಯಾಲಿಯನ್ನು ಸೇನಾ ನೇಮಕಾತಿ ಕಚೇರಿಯಿಂದ ಏಪ್ರಿಲ್ 4 ರಿಂದ 14 ರ ವರೆಗೆ ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿದೆ.

Call us

Call us

Call us

ಬಾಗಲಕೋಟೆ, ವಿಜಯಪುರ, ಧಾರವಾಡ, ಚಿಕ್ಕಮಗಳೂರು, ದಾವಣಗೆರೆ, ಉಡುಪಿ, ಗದಗ, ಹಾವೇರಿ, ಶಿವಮೊಗ್ಗ ಮತ್ತು ಉತ್ತರ ಕನ್ನಡದ ಅಭ್ಯರ್ಥಿಗಳು ಮಾತ್ರ ಭಾಗವಹಿಸಬಹುದಾಗಿದೆ.

ಅಭ್ಯರ್ಥಿಗಳು ಆನ್‌ಲೈನ್ www.JoinIndianarmy.nic.in ನಲ್ಲಿ ನೋಂದಣಿ ಮಾಡಬೇಕು. ಆನ್‌ಲೈನ್‌ನಲ್ಲಿ ಅರ್ಜಿಯನ್ನು ನೊಂದಾಯಿಸಲು ಮಾರ್ಚ್ 20 ರ ವರೆಗೆ ಅವಕಾಶವಿರುತ್ತದೆ. ಆನ್‌ಲೈನ್ ಮೂಲಕ ನೊಂದಾಯಿಸಿದ ಅಭ್ಯರ್ಥಿಗಳು ಮಾತ್ರ ರ‍್ಯಾಲಿಯಲ್ಲಿ ಭಾಗವಹಿಸಲು ಅನುಮತಿಸಲಾಗುತ್ತದೆ.

ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ಟೆಕ್ ನರ್ಸಿಂಗ್ ಅಸಿಸ್ಟೆಂಟ್ (ಎಎಂಸಿ) / ನರ್ಸಿಂಗ್ ಸಹಾಯಕ ಪಶುವೈದ್ಯ, ಸೋಲ್ಜರ್ ಕ್ಲರ್ಕ್/ ಸ್ಟೋರ್ ಕೀಪರ್ ಟೆಕ್ನಿಕಲ್ (ಆಲ್ ಆರ್ಮ್ಸ್), ಸೋಲ್ಜರ್ ಟ್ರೇಡ್ಸ್‌ಮೆನ್ (ಆಲ್ ಆರ್ಮ್ಸ್), ಸೋಲ್ಜರ್ ಜನರಲ್ ಡ್ಯೂಟಿ (ಆಲ್ ಆರ್ಮ್ಸ್) 10 ನೇ ತರಗತಿ ಪಾಸ್ ಮತ್ತು ಸೋಲ್ಜರ್ ಟ್ರೇಡ್ಸ್‌ಮೆನ್ (ಆಲ್ ಆರ್ಮ್ಸ್) 8 ನೇ ತರಗತಿ ಪಾಸ್ ಆದವರಿಗೆ ಅವಕಾಶ ವಿರುತ್ತದೆ. ಮಾರ್ಚ್ 24 ರ ನಂತರ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿದೇಶಕರ ಕಾರ್ಯಾಲಯವನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

13 − 11 =