ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌: ಉಚಿತ ನೋಟ್‌ ಪುಸ್ತಕ ವಿತರಣೆ

Call us

Call us

ಕುಂದಾಪುರ: ಕನ್ನಡ ಮಾಧ್ಯಮದ ಬಗ್ಗೆ ಗ್ರಾಮೀಣ ಜನತೆ ಯಾವುದೇ ಕೀಳರಿಮೆ ಹೊಂದದೆ ಶಿಕ್ಷಣದಲ್ಲಿ ಪ್ರಗತಿ ಸಾಧಿಸಬೇಕಾದ ಅಗತ್ಯ ಇದೆ. ಕನ್ನಡ ಮಾಧ್ಯಮದಲ್ಲಿ ಕಲಿತವರೂ ಇಂದು ಉನ್ನತ ಸ್ಥಾನ ಪಡೆದಿದ್ದಾರೆ. ಶಿಕ್ಷಣದ ಸವಲತ್ತುಗಳನ್ನು ಪಡೆದು ಸಮಾಜದ ಋಣ ತೀರಿಸುವ ಪ್ರಯತ್ನ ನಡೆಸಿ ಎಂದು ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌ ಹೇಳಿದರು.

Call us

Call us

Call us

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌, ಮೊಗವೀರ ಯುವ ಸಂಘಟನೆ ವತಿಯಿಂದ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಶನಿವಾರ 5,200 ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ ಪುಸ್ತಕ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಸಂಘಟನೆ ಅಧ್ಯಕ್ಷ ಸದಾನಂದ ಬಳ್ಕೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಗ್ವಾಡಿ ಕುಂದಾಪುರ ಶಾಖೆ ಮೊಗವೀರ ಮಹಾಜನ ಸೇವಾ ಸಂಘದ ಅಧ್ಯಕ್ಷ ಎಂ.ಎಂ. ಸುವರ್ಣ, ಉದ್ಯಮಿ ಕೆ.ಕೆ. ಕಾಂಚನ್‌ ಉಪಸ್ಥಿತರಿದ್ದರು. ಗಣೇಶ್‌ ಕಾಂಚನ್‌ ಸ್ವಾಗತಿಸಿ ಸುಧಾಕರ ಕಾಂಚನ್‌ ಕಾರ್ಯಕ್ರಮ ನಿರೂಪಿಸಿದರು. ಅಶೋಕ್‌ ತೆಕ್ಕಟ್ಟೆ ವಂದಿಸಿದರು.

Leave a Reply

Your email address will not be published. Required fields are marked *

eleven − five =