ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಆಚರಣೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾವುಂದದ ಮೊಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಸಂಭ್ರಮಾಚರಣೆ ನಡೆಯಿತು. ನಸುಕಿನಲ್ಲಿ ಖತೀಬ್ ಇಕ್ರಮುಲ್ಲಾ ಸಖಾಫಿ ಅವರ ನೇತೃತ್ವದಲ್ಲಿ ನಬೀ ಮದಹ್‌ಗೀತೆ ಹಾಗೂ ಬುರ್ದಾ ಮಜ್ಲಿಸ್ ನಡೆಸಿ ನಬೀ ಜನ್ಮದಿನಾಚರಣೆಗೆ ಚಾಲನೆ ನೀಡಲಾಯಿತು. ಬೆಳಿಗ್ಗೆ ಮುತವಲ್ಲಿ ಬಿ. ಎ. ಸಯ್ಯದ್ ಧ್ವಜಾರೋಹಣಗೈದರು. ಮೆರವಣಿಗೆಯ ಬಳಿಕ ಮಧ್ಯಾಹ್ನ ಬೃಹತ್ ಅನ್ನದಾನ ನಡೆಯಿತು.

Call us

Call us

ಈದ್ ಮಿಲಾದ್ ಪೂರ‍್ವಭಾವಿಯಾಗಿ ರವಿವಾರ ಜಮಾತ್ ಅಧ್ಯಕ್ಷ ಎನ್. ಅಬ್ದುಲ್ಲಾ ತೌಫೀಕ್ ಅವರ ಅಧ್ಯಕ್ಷತೆಯಲ್ಲಿ ಮಕ್ಕಳ ಪ್ರತಿಭಾ ಪ್ರದರ್ಶನ ನಡೆಯಿತು. ಕೇರಳ ಸಂಯುಕ್ತ ಸುನ್ನಿ ಶಿಕ್ಷಣ ಮಂಡಳಿ ನಡೆಸಿದ್ದ ಹತ್ತನೆ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ನಾವುಂದ ಕೋಯಾನಗರ ಬುಸ್ತಾನುಲ್ ಮದರಸದ ವಿದ್ಯಾರ್ಥಿನಿ ಆಯಿಶತ್ ಮೆಹರಾಜ್, ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ ಶಂಸೀರಾ ಮತ್ತು ಉಸ್ತಾದ್ ಹನೀಫ್ ಸಅದಿ ಅವರನ್ನು ಸನ್ಮಾನಿಸಲಾಯಿತು. ಬಿ. ಎಸ್. ಮೊಯ್ದಿನ್, ಡಬ್ಲ್ಯುಎಫ್‌ಕೆ ಹುಸೇನ್ ಹಾಜಿ, ಎಂ. ಎ. ಕಾದರ್ ಹಾಜಿ, ಇತರರು ವೇದಿಕೆಯಲ್ಲಿದ್ದರು. ಬಿ. ಎ. ಸತ್ತಾರ್ ವಂದಿಸಿದರು. ಕಾರ್ಯದರ್ಶಿ ಬಿ. ಎ. ಅಬ್ದುಲ್ ಹಮೀದ್ ನಿರೂಪಿಸಿದರು.

Leave a Reply

Your email address will not be published. Required fields are marked *

6 + three =