ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದ ಅಧ್ಯಯನ ಕೇಂದ್ರವು ಡಾ|| ಕನರಾಡಿ ವಾದಿರಾಜ ಭಟ್ಟ ಮತ್ತು ಮಿತ್ರರೊಡಗೂಡಿ ಸಂಪಾದಿಸಿದ ಹೊಳ್ಳ ದಂಪತಿ ಕುರಿತ ಅಭಿನಂದನಾ ಗ್ರಂಥವನ್ನು ಉಪ್ಪುಂದ ಶಂಕರ ಕಲಾಮಂದಿರದ ಸಮೃದ್ಧ ಸಭಾಭವನದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಜುಲೈ ೨ರಂದು ಅಪರಾಹ್ನ ಮೂರು ಘಂಟೆಗೆ ಸಭಾ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಿರುವರು.
ಸಮಾರಂಭದ ಅಧ್ಯಕ್ಷತೆಯನ್ನು ಬಸ್ರೂರು ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಗಡೆ ವಹಿಸಲಿರುವರು ಬೈಂದೂರಿನ ಶಾಸಕ ಕೆ. ಗೋಪಾಲ ಪೂಜಾರಿ ಶುಭಾಶಂಸನೆ ಗೈಯಲಿರುವರು. ಬೆಂಗಳೂರಿನ ಮಾದ್ಯಮ ಭಾರತಿ ನಿರ್ದೇಶಕ ಎಮ್ ಜಯರಾಮ ಅಡಿಗರು ಉದ್ಘಾಟಿಸಲಿರುವರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಭಿನಂದನಾ ಭಾಷಣಗೈಯಲಿದ್ದಾರೆ.
ಕುಂದ ಅಧ್ಯಯನ ಕೇಂದ್ರದಿಂದ ಪ್ರತಿವರ್ಷ ನಾಡಿನ ಆಯ್ದ ಸಂಶೋದಕರಿಗೆ ಮತ್ತು ಸಮಾಜ ಸಂಘಟಕರಿಗೆ ಕುಂದಶ್ರೀ ಪ್ರಶಸ್ತೀ ನೀಡುವ ಯೋಜನೆಯ ಪ್ರಥಮ ಸಾಲಿನ ಪ್ರಶಸ್ತಿಯನ್ನು ವೇ|ಮೂ| ರಾಮಕೃಷ್ಣಜೋಶಿ, ಧರ್ಮದರ್ಶೀ ಬಿ. ಅಪ್ಪಣ್ಣ ಹೆಗ್ಗಡೆ, ಡಾ| ಯಶೋದ ಭಟ್ ಮತ್ತು ಶ್ರೀ ನಾರಾಯಣ ಪರಮೇಶ್ವರ ಭಟ್ (ಧಾರವಾಡ), ಡಾ\ ಪಿ ಎನ್ ನರಸಿಂಹ ಮೂರ್ತಿ (ಮಂಡ್ಯ), ಡಾ| ವಸತ ಮಾಧವ ಕೊಡಂಚ (ಪಾವಂಚ-ಹಳಅಂಗಡಿ), ಡಾ| ನಾ. ಮೋಗಸಾಲೆ(ಕಾಂತಾವರ), ನಂದಳಕೆ ಬಾಲಚಂದ್ರರಾವ್ (ಮುದ್ದಣ ಚಾವಡಿ-ಮಂಗಳೂರು) ಇವರಿಗೆ ಗೌರವ ಪೂರ್ವಕ ಅರ್ಪಿಸಲಾಗುವುದು.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಸ್ಥಳೀಯ ಸಾಂಸ್ಕ್ರತಿಕ ಸಂಘ ಸಂಸ್ಥೆಗಳ ಸಹಕಾರದಿಂದ ಏರ್ಪಡಿಸಲಾದ ಈ ಸಮಾರಂಭವು ಪೂರ್ವಹ್ನ 11.00 ಗಂಟೆ ಸಹೃದಯ ಸಂವಹನ ಎಂದು ಕಾರ್ಯಕ್ರಮವನ್ನು ನರೆಂದ್ರ ಕುಮಾರ್ ಕೋಟ ನಡೆಸಿ ಕೊಡುವುದರ ಮೂಲಕ ಆರಂಭವಾಗಿವುದು. ಎಂದು ಸಂಘಟಕರ ಪರವಾಗಿ ಬಿ.ರಾಮಕೃಷ್ಣ ಶೇರುಗಾರ್, ಕರ್ನಾಟಕ ಜಾನಪದ ಪರಿಷತ್ತಿನ ನಿತ್ಯಾನಂದ ಶೆಟ್ಟಿ ಮತ್ತು ಗಣಪತಿ ಹೋಬಳಿದಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.