ಜೆಡಿಎಸ್ ಕುಂದಾಪುರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತೆಕ್ಕಟ್ಟೆ ಘಟಕದ ಉದ್ಘಾಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.,
ಕುಂದಾಪುರ: ಜೆಡಿಎಸ್ ಕುಂದಾಪುರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತೆಕ್ಕಟ್ಟೆ ಘಟಕದ ಉದ್ಘಾಟನೆ ಮತ್ತು ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮವು ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪ ತೆಕ್ಕಟ್ಟೆಯಲ್ಲಿ ಕುಂದಾಪುರ ಬ್ಲಾಕ್ ಅಧ್ಯಕ್ಷ ತೆಕ್ಕಟ್ಟೆ ಪ್ರಕಾಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಗೊಂಡಿತು.

Call us

Call us

Call us

ನಂತರ ಮಾತನಾಡಿದ ಅವರು ಯಾವಗ ಕುಂದಾಪುರ ದಲ್ಲಿ ಜೆಡಿಎಸ್ ಪಕ್ಷ ಕಟ್ಟುತ್ತೆವೆ ಎಂದು ಹೊರಡ್ತೆವೆಯೊ ಆವಾಗ್ಲೆ ನಮಗೆ ಹಲಾವಾರು ರೀತಿಯ ಅವಮಾನಗಳು,ಎನು ಇಲ್ಲದೆ ಇರುವ ಪಕ್ಷವನ್ನ ಹೇಗೆ ಕಟ್ಲಿಕ್ಕೆ ಸಾದ್ಯ ಆಗ್ತದೆ ಅನ್ನುವ ಮಾತಿನಿಂದ ನಮ್ಮ ಒಂದು ಕನಸನ್ನ ಕುಗ್ಗಿಸುವಂತ ಕೆಲಸಕ್ಕೆ ಕೆಲವೊಂದು ಜನ ಪ್ರಯತ್ನಿಸ್ಲಿಕ್ಕೆ ಶುರು ಮಾಡಿದ್ರು ನಮ್ಮೊಂದಿಗೆ ಬರುವವರ ದಿಕ್ಕನ್ನ ತಪ್ಪಿಸಿದ್ರು ಆದರೆ ಎರಡು ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತ ಜನ,ಕುಮಾರಸ್ವಾಮಿ ಯವರ 20 ತಿಂಗಳ ಅವದಿಯಲ್ಲಿ ಹಲವಾರು ಅಬಿವ್ರದ್ದಿ ಕೆಲಸಗಳಿಂದ ಪ್ರೇರಿತರಾಗಿ ನಮ್ಮೊಂದಿಗೆ ಕೈ ಜೊಡಿಸಿದ್ರು ನಮಗೆ ನಮ್ಮ ಕ್ಷೇತ್ರದ ಎಲ್ಲಾ ಬಾಗದಿಂದಲು ಕರೆ ಬರುತ್ತಿದೆ ಕೆಲವೆ ಸಮಯದಲ್ಲಿ ನಾವು ಎಲ್ಲಾ ಬಾಗದಲ್ಲು ನಮ್ಮ ಪಕ್ಷದ ಇರುವಿಕೆಯನ್ನ ತೊರಿಸುವ ಕೆಲಸ ತ್ವರಿತಗತಿಯಲ್ಲಿ ಸಾಗುತ್ತಿದೆ. ಮುಂದಿನ ದಿನದಲ್ಲಿ ನಮ್ಮ ಪಕ್ಷದಿಂದ ಸಾರ್ವಜನಿಕರಿಗೆ ಪಕ್ಷ ಬೇದ ಮರೆತು ಸೇವೆಯನ್ನ ನೀಡಿ ಜನಸಾಮಾನ್ಯರ ಮನಸ್ಸಿನಲ್ಲಿ ಜಾಗವನ್ನ ಪಡೆದುಕೊಳ್ತೆವೆ ಎಂದು ಈ ಸಂದರ್ಭದಲ್ಲಿ ಹೇಳಿದರು..ನಂತರ ಕಾರ್ಯಧ್ಯಕ್ಷರಾದ ಹುಸೇನ್ ಹೈಕಾಡಿ ಮಾತನಾಡಿ ಕ್ಷೇತ್ರದಲ್ಲಿ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿರುದನ್ನ ನೋಡಿದ್ರೆ ನನಗೆ ತುಂಬಾ ಸಂತೋಷವಾಗ್ತಿದೆ ಹಾಗೆಯೇ ಪಕ್ಷವನ್ನ ಬಲವರ್ಧನೆ ಮಾಡುವಲ್ಲಿ ತೆಕ್ಕಟ್ಟೆ ಪ್ರಕಾಶ್ ಶೆಟ್ಟಿಯವರಿಗೆ ನಾವೆಲ್ಲರೂ ಸಹಕರಿಸಬೇಕು ಎಂದು ಕಾರ್ಯಕರ್ತರಲ್ಲಿ ಕೇಳಿಕೊಂಡರು.‌‌‌.. ನಂತರ ಪ್ರಮುಖ ಪಕ್ಷಗಳ ಹಲವಾರು ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಂಡರು ….ನಂತರ ಮಾತನಾಡಿದ ರಮೇಶ್ ಕುಂದಾಪುರ ಇವರು ಕುಂದಾಪುರದಲ್ಲಿ ಜೆಡಿಎಸ್ ಪಕ್ಷ ಬೆಳೆಸುವಲ್ಲಿ ತೆಕ್ಕಟ್ಟೆ ಪ್ರಕಾಶ್ ಶೆಟ್ಟಿಯವರ ತಯಾರಿಯನ್ನ ನೋಡಿದರೆ ಮುಂಬರುವ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನಮ್ಮಿಂದ ಸಾದ್ಯ ಅನ್ನುವ ಲಕ್ಷಣಗಳು ಕಾಣುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.. ಇದೆ ಸಂದರ್ಭದಲ್ಲಿ ಕುಂದಾಪುರ ಜೆಡಿಎಸ್ ತಾಲೂಕು ಎಸ್ಸಿಎಸ್ಟಿ ಘಟಕದ ಅಧ್ಯಕ್ಷರನ್ನಾಗಿ ಸಂಜೀವ ಕಾಳವಾರ ಇವರಿಗೆ ಪಕ್ಷದ ದ್ವಜವನ್ನ ನೀಡುವುದರೊಂದಿಗೆ ಜವಾಬ್ದಾರಿಯನ್ನ ನೀಡಲಾಯಿತು, ಉದ್ಘಾಟನೆ ಗೊಂಡ ತೆಕ್ಕಟ್ಟೆ ಘಟಕದ ಅಧ್ಯಕ್ಷರನ್ನಾಗಿ ದಯಾನಂದ ಪೂಜಾರಿ ಇವರನ್ನ ಆಯ್ಕೆ ಮಾಡಿ ,ಕುಂಭಾಶಿ ಘಟಕದ ಅಧ್ಯಕ್ಷರನ್ನಾಗಿ ಹರೀಶ್ ಚಂದನ್ನ ಕೊರಾವಡಿ ಇವರನ್ನು, ತೆಕ್ಕಟ್ಟೆ ಘಟಕದ ಅಲ್ಪಸಂಖ್ಯಾತರ ಅಧ್ಯಕ್ಷರನ್ನಾಗಿ ಮೊಹಮ್ಮದ್ ಇರ್ಪಾನ್ ಉಪಾಧ್ಯಕ್ಷರಾಗಿ ಆದಿಲ್ ಗಪೂರ್, ತೆಕ್ಕಟ್ಟೆ ಘಟಕದ 3ನೇ ವಾರ್ಡನ ಅಧ್ಯಕ್ಷರನ್ನಾಗಿ ರಾಘವೇಂದ್ರ ತೋಟದ ಬೆಟ್ಟು,ಕೋಟ ಪಂಚಾಯತ್ ನ 3 ನೆ ವಾರ್ಡನ ಅಧ್ಯಕ್ಷರನ್ನಾ ರಾಘವೇಂದ್ರ ಪೂಜಾರಿ ಇವರೆಲ್ಲರಿಗು ಪಕ್ಷದ ಧ್ವಜವನ್ನ ನೀಡುವುದರೊಂದಿಗೆ ಜವಾಬ್ದಾರಿ ನೀಡಲಾಯಿತು ವೇದಿಕೆಯಲ್ಲಿ ಜಿಲ್ಲಾ ಮುಖಂಡರಾದ ಮುಕ್ತಾರ್ ಕೋಟೇಶ್ವರ ,ಮಹಿಳಾ ಮುಖಂಡೆ ದಿಲ್ಶಾದ್ ತೆಕ್ಕಟ್ಟೆ ತಾಲ್ಲೂಕು ಘಟಕದ ಉಪಾಧ್ಯಕ್ಷರಾದ ರಶ್ಮಿತಾ ಉಪಸ್ಥಿತರಿದ್ದು ಮೊಹಮ್ಮದ್ ಆಸೀಪ್ ಕಾರ್ಯಕ್ರಮವನ್ನ ನಿರುಪಿಸಿದರು.

Call us

Call us

 

Leave a Reply

Your email address will not be published. Required fields are marked *

14 + 17 =