ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪುಂದ ಜೆಸಿ ಘಟಕಕ್ಕೆ ವಲಯಾಧ್ಯಕ್ಷರ ಭೇಟಿಯ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಸುರಭಿ. ಎಸ್. ಶೆಟ್ಟಿಗೆ ಜೆಸಿಐ ಉಪ್ಪುಂದದಿಂದ ಗೌರವ, ಝೋನ್ 15ರ ವಲಯಾಧ್ಯಕ್ಷರಾದ ಜೆಸಿ ಕಾರ್ತಿಕೇಯ ಮಧ್ಯಸ್ಥ ಜೆಸಿಐ ಉಪ್ಪುಂದ ಘಟಕಕ್ಕೆ ಭೇಟಿ ನೀಡಿದ ಸಂದರ್ಭ ಸುರಭಿ ಎಸ್. ಶೆಟ್ಟಿ ಹಾಗೂ ಆಕೆಯ ಪೋಷಕರನ್ನು ಗೌರವಿಸಿಲಾಯಿತು.
ಈ ಸಂದರ್ಭ ವಲಯ ಉಪಾಧ್ಯಕ್ಷರಾದ ಸಂತೋಷ್ ಕುಮಾರ್, ಶೇಷಗಿರಿ ನಾಯಕ್, ಘಟಕಾಧ್ಯಕ್ಷರಾದ ದೇವರಾಯ ದೇವಾಡಿಗ, ನಿಕಟಪೂರ್ವಾಧ್ಯಕ್ಷರಾದ ಪುರಂದರ ಖಾರ್ವಿ, ವಲಯ ನಿರ್ದೇಶಕ ಮಂಗೇಶ್ ಶಾನುಭಾಗ್, ಪೂರ್ವಾಧ್ಯಕ್ಷರಾದ ಯು ಪ್ರಕಾಶ್ ಭಟ್, ಸುಬ್ರಹ್ಮಣ್ಯ ಜಿ, ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಕಾರ್ಯಕ್ರಮ ನಿರ್ದೇಶಕ ಪುರುಷೋತ್ತಮ್ ದಾಸ್, ಜೆಜೆಸಿ ಅಧ್ಯಕ್ಷ ಮಹೇಶ್ ಹಾಗೂ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.