ಜೆಸಿಐ ಶಿರೂರಿಗೆ ರಾಷ್ಟ್ರೀಯ ಅಧ್ಯಕ್ಷರ ಭೇಟಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷರಾದ ಸೆನೆಟರ್ ಅರ್ಪಿತ್ ಹಾಥಿಯವರು ಜೆಸಿಐ ಶಿರೂರು ಗ್ರಾಮೀಣ ಘಟಕಕ್ಕೆ ಭೇಟಿ ನೀಡಿ, ಅಳ್ವೆಗದ್ದೆ ಕಡಲ ಕಿನಾರೆಗೆ ಹೋಗುವ ದಾರಿ ಸೂಚನಾ ಫಲಕವನ್ನು ಅನಾವರಣ ಗೊಳಿಸಿದರು ಹಾಗೂ ಜೆಸಿಐ ಶಿರೂರು ಸದಸ್ಯರು ಕೊಡಗು ಸಂತ್ರಸ್ತರಿಗೆ ಕೊಡಮಾಡಿದ ಹಲವು ಪರಿಕರಗಳನ್ನು ಹಸ್ತಾಂತರಿಸಿ, ಶಿರೂರು ಘಟಕವು ಅತ್ಯುತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಪ್ರಶಂಸನಾರ್ಹವಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಜರುಗಿ ಯಶಸ್ವಿಯಾಗಲಿ ಎಂದು ಶುಭ ಹಾರೈಕೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ದಾರಿ ಸೂಚನಾ ಫಲಕದ ಪ್ರಯೋಜಕರಾದ ಮೋಹನ ರೇವಣ್ಕರ್ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ರಾಕೇಶ ಕುಂಜೂರು, ಜೆಸಿಐ ಶಿರೂರು ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ, ಚಂದ್ರಶೇಖರ್ ನಾಯರ್ ,ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು, ಮೋಹನ ರೇವಣ್ಕರ್, ಅರುಣ್ ಕುಮಾರ, ಪ್ರಕಾಶ ಮಾಕೋಡಿ, ಗಿರೀಶ ಮೇಸ್ತ, ಹರೀಶ ಶೇಟ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಗೇಶ ಟಿ, ನಾರಾಯಣ ಅಳ್ವೆಗದ್ದೆ, ಮಹಾದೇವ ಅಳ್ವೆಗದ್ದೆ ವಲಯಾಧಿಕಾರಿಗಳು, ಜೆಸಿಐ ಶಿರೂರಿನ ಸದಸ್ಯರು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಪ್ರಸಾದ ಪ್ರಭು ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ ಮಾಕೋಡಿ ವಂದಿಸಿದರು.

Call us

Call us

Visit Now

 

Click here

Call us

Call us

Leave a Reply

Your email address will not be published. Required fields are marked *

16 + five =