ಜೆಸಿಐ ಶಿರೂರು ನಡಿಗೆ ರೈತರ ಕಡೆಗೆ ವಿನೂತನ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಜೆಸಿಐ ಶಿರೂರು ಸದಸ್ಯರು ಶಿರೂರಿನ ನಿರೋಡಿಯ ರೈತರ ಗದ್ದೆಯಲ್ಲಿ ಒಂದು ದಿನ ನಡೆದ ಗದ್ದೆ ನೆಟ್ಟಿ ಕಾರ್ಯದಲ್ಲಿ ಭತ್ತದ ಸಸಿಯನ್ನು ನೆಡುವುದರ ಮೂಲಕ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆ ಮೂಲಕ ರೈತರ ಕಾರ್ಯಗಳಿಗೆ ಪ್ರೋತ್ಸಾಹ ಮಾಡಿದರು.

ಈ ಸಂದರ್ಭದಲ್ಲಿ ಜೆಸಿಐ ಶಿರೂರು ವತಿಯಿಂದ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಿರೂರು ಜೆಸಿ ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ ಅಧ್ಯಕ್ಷತೆ ವಹಿಸಿದರು.

ಜೆಸಿಐ ಶಿರೂರು ಸ್ಥಾಪಕ ಅಧ್ಯಕ್ಷ ಮೋಹನ ರೇವಣ್ಕರ್, ಶ್ರೀಕಾಂತ ಕಾಮತ್, ಮಂಜುನಾಥ ಪೂಜಾರಿ, ರಾಜು ಪೂಜಾರಿ, ಗಿರೀಶ ಮೇಸ್ತ, ವೆಂಕಟೇಶ ಕಾಮತ್, ಕೃಷ್ಣಮೂರ್ತಿ ಶೇಟ್, ನಾಗೇಶ ಕೆ, ಅಬ್ದುಲ್ ರವೂಫ್ , ರಮೇಶ ನಾಯ್ಕ, ಜೆಜೆಸಿ ಆದರ್ಶ ಶೇಟ್, ವಿನೋದ ಮೇಸ್ತ, ಕೃಷ್ಣ ಪೂಜಾರಿ, ನಾಗೇಂದ್ರ ಪ್ರಭು, ಅವಿನಾಶ ಪ್ರಭು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

five + 20 =