ಜೇಸಿಐ ಕುಂದಾಪುರದಿಂದ ಬೈಕ್ ಜಾಥಾ

ಕುಂದಾಪುರ ಡಾಟ್ ಕಾಂ ಸುದ್ದಿ
ಕುಂದಾಪುರ: ಭಾರತೀಯ ಜೇಸಿಸ್ ನ ವಲಯ 15ರ ಪ್ರತಿಷ್ಠಿತ ಘಟಕ ಜೇಸಿಐ ಕುಂದಾಪುರ ಹಾಗೂ ಜೇಸಿಐ ಕುಂದಾಪುರ ಜ್ಯೂನಿಯರ್ ಜೇಸಿ ವಿಭಾಗ ಇವರ ಜಂಟಿ ಆಶ್ರಯದಲ್ಲಿ ಅಂತರಾಷ್ಟ್ರೀಯ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ವಲಯದ ರಕ್ತದಾನ ವಿಭಾಗದ ವಲಯ ಸಂಯೋಜಕರ ನೇತೃತ್ವದಲ್ಲಿ ಶಿರೂರುನಿಂದ ಪ್ರಾರಂಭವಾಗಿ ಮಂಗಳೂರಿನ ತನಕ ನಡೆದ ಬೈಕ್ ಜಾಥಾವನ್ನು ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಲಯಾಧ್ಯಕ್ಷ ಜೆ.ಎಫ್.ಪಿ. ರಾಕೇಶ್ ಕುಂಜೂರು ವಲಯ ರಕ್ತದಾನ ವಿಭಾಗ ಸಂಯೋಜಕ ಜೇಸಿ ಸುನೀಲ್ ಡಿ ಬಂಗೇರಾ ಇವರನ್ನು ಶಾಲು ಹೊದಿಸುವುದರ ಮುಖಾಂತರ ಸ್ವಾಗತಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರ ಕಾರ್ಯದರ್ಶಿ ಜೇಸಿ ಚೇತನ್ ದೇವಾಡಿಗ ವಹಿಸಿದ್ದು ವಲಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಜೇಸಿ ಶ್ರೀನಿವಾಸ್ ಐತಾಳ್ ಜೆಸಿಐ ಕಟಪಾಡಿ ಪೂರ್ವ ಅಧ್ಯಕ್ಷ ಜೇಸಿ ಮಹೇಶ್ ಅಂಚ್‌ನ್ ಜೇಸಿಐ ಕುಂದಾಪುರ ಜ್ಯೂನಿಯರ್ ಜೇಸಿ ಅಧ್ಯಕ್ಷ ವಿಶ್ವ ಪ್ರಸನ್ನ ಗೋಡೆ ಹಾಗೂ ಜೇಸಿಐ ಕಟಪಾಡಿಯ ಸದಸ್ಯರು ಉಪಸ್ಥಿತರಿದ್ದರು.

ಘಟಕದ ಅಧ್ಯಕ್ಷರು ಹಾಗೂ ಸದಸ್ಯರು ಪ್ರಾಯೋಜಿಸಿದ ತಂಪು ಪಾನೀಯವನ್ನು ವಲಯ ಉಪಾಧ್ಯಕ್ಷ ಜೆ.ಎಫ್.ಪಿ. ರಾಘವೇಂದ್ರ ಪ್ರಭು ಕರ್ವಾಲು ವಿತರಿಸಿದರು.

ಜೇಸಿಐ ಕುಂದಾಪುರ ಕಾರ್ಯಕ್ರಮ ವಿಭಾಗದ ನಿರ್ದೇಶಕ ಜೇಸಿ ಕಾರ್ತಿಕ್ ಉಡುಪ ವಂದಿಸಿದರು.

 

Leave a Reply

Your email address will not be published. Required fields are marked *

8 − 7 =