ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಜೇಸಿಐ ಕುಂದಾಪುರ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಜೇಸಿಐ ರಾಷ್ಟ್ರೀಯ ಅಧ್ಯಕ್ಷ ಅರ್ಪಿತ್ ಹಾಥಿ ಅವರ ಹುಟ್ಟುಹಬ್ಬದ ದಿನದಂದು ರೆಡ್ ಕ್ರಾಸ್ ಸಂಸ್ಥೆಯಲ್ಲಿ ಜರುಗಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರದ ಅಧ್ಯಕ್ಷರಾದ ಶ್ರೀನಾಥ್ ಗಾಣಿಗ ಇವರು ವಹಿಸಿದ್ದರು.ಜೇಸಿಐ ನ ಪೂರ್ವ ರಾಷ್ಟ್ರೀಯ ಕಾನೂನು ಸಲಹೆಗಾರ ಶ್ರೀಧರ್ ಪಿ.ಎಸ್. ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಚೇರ್ಮನ್ ಶ್ರೀ ಜಯಕರ್ ಶೆಟ್ಟಿ ಹಾಗೂ ಜೇಸಿಐನ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ರಾದ ಸದಾನಂದ ನಾವಡ ಉಪಸ್ಥಿತರಿದ್ದರು. ಸುಮಾರು17 ಯೂನಿಟ್ ಗಳಷ್ಟು ರಕ್ತವನ್ನು ಜೇಸಿಐ ಸದಸ್ಯರಿಂದ ಸಂಗ್ರಹಿಸಲಾಯಿತು. ಜೇಸಿಐ ಕುಂದಾಪುರದ ಅಧ್ಯಕ್ಷರಾದ ಶ್ರೀನಾಥ್ ಗಾಣಿಗ ಇವರು ಸ್ವಾಗತಿಸಿದರು.ಜೇಸಿಐ ಕುಂದಾಪುರದ ಕಾರ್ಯದರ್ಶಿ ಚೇತನ್ ದೇವಾಡಿಗ ವಂದಿಸಿದರು.
ಜೇಸಿಐ ಕುಂದಾಪುರದಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
