ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತೀಯ ಜೇಸಿಸ್ ನ ವಲಯ ೧೫ ರ ನೂತನ ಘಟಕ ಜೇಸಿಐ ಕುಂದಾಪುರ ಚರಿಷ್ಮಾ ಘಟಕಕ್ಕೆ ವಲಯಾಧ್ಯಕ್ಷ ಜೆ.ಎಫ್.ಪಿ. ಸಂತೋಷ ಜಿ ಅಧಿಕೃತ ಬೇಟಿ ನೀಡಿ ವಿವಿಧ ಶಾಶ್ವತ ಯೋಜನೆಗಳಾದ ಬುಕ್ ಬ್ಯಾಂಕನ್ನು ಬಿ.ಬಿ.ಹೆಗ್ಡೆ ಪದವಿ ಕಾಲೇಜಿಗೆ ಹಾಗೂ ಪಂಪ್ ಸೆಟ್ ಅನ್ನು ಅಂಗನವಾಡಿ ಕೇಂದ್ರಕ್ಕೆ ,ಕೋಣಿ ಮಾನಸ ಜ್ಯೋತಿ ಮಕ್ಕಳಿಗೆ ಮಧ್ಯಾನದ ಭೋಜನ ವ್ಯವಸ್ಥೆಯನ್ನು ಮಾಡಿದರು ಸಂಜೆ ನೆಡೆದ ಸಭಾ ಕಾರ್ಯಕ್ರಮದಲ್ಲಿ ಜೇಸಿಐ ಕುಂದಾಪುರ ಚರಿಷ್ಮಾ ಅಧ್ಯಕ್ಷೆ ಜೇಸಿ ಸೆನೆಟರ್ ಗೀತಾಂಜಲಿ ಆರ್ ನಾಯಕ್ ಅಧ್ಯಕ್ಷತೆಯನ್ನು ವಹಿಸಿದ್ದರು ಭಾರತೀಯ ಜೇಸಿಸ್‌ಗೆ ದೇಣಿಗೆಯನ್ನು ಘಟಕ ಅಧ್ಯಕ್ಷರು ನೀಡಿದರು ಸಭಾ ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷರಾದ ಜೆ.ಎಫ್.ಎಮ್ ಮರಿಯಪ್ಪ ವಲಯಧ್ಯಕ್ಷರ ಆಪ್ತ ಕಾರ್ಯದರ್ಶಿ ಜೇಸಿ ಶ್ರೀನಿವಾಸ್ ಜಿ ಉಪಸ್ಥಿತರಿದ್ದರು ವಲಯಾಧ್ಯಕ್ಷ ದಂಪತಿಗಳನ್ನು ಘಟಕ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಪರವಾಗಿ ಜೇಸಿಐ ಕುಂದಾಪುರದ ಸ್ಥಾಪಕಾಧ್ಯಕ್ಷ ಜೇಸಿ ಎ.ಎಸ್.ಎನ್ ಹೆಬ್ಬಾರ್ ,ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಜೇಸಿ ಸೆನೆಟರ್ ಸದಾನಂದ ನಾವುಡ ಹಾಗೂ ಪೂರ್ವ ವಲಯಾಧ್ಯಕ್ಷ ಪಿ.ಪಿ.ಪಿ ಶ್ರೀಧರ್ ಪಿ.ಎಸ್, ರೋಟರಿ ಕ್ಲಬ್ ಕುಂದಾಪುರದ ಪೂರ್ವಧ್ಯಕ್ಷರಾದ ಕೆ.ಆರ್. ನಾಯಕ್ ಸನ್ಮಾನಿಸಿ ಅಭಿನಂದನಾ ಪತ್ರವನ್ನು ನೀಡಿದರು ಇದೇ ಸಂಧರ್ಭದಲ್ಲಿ ಘಟಕದ ಅತ್ಯುತ್ತಮ ಜೇಸಿ ಆಂದೋಲನದ ಕಾರ್ಯಕ್ರಮಗಳನ್ನು ನಿರ್ವಹಿಸಿದ ಘಟಕದ ಕಾರ್ಯದರ್ಶಿ ಜೇಸಿ ಜಯಲಕ್ಷ್ಮೀ ಅರುಣ್, ಖಜಾಂಚಿ ಜೇಸಿ ಸೆನೆಟರ್ ರೋಶನಿ, ಘಟಕದ ಉಪಾಧ್ಯಕ್ಷೆರಾದ ಜೇಸಿ ಶರ್ಮಿಳಾ ಕಾರಂತ್, ಜೇಸಿ ಸುನಂದಾ ಹಾಗೂ ಘಟಕದ ಸದಸ್ಯೆ ಜೇಸಿ ಕೆ.ಜಿ ಗೀತಾ ರವೀಂದ್ರ ಇವರನ್ನು ಸನ್ಮಾನಿಸಲಾಯಿತು . ಜೇಸಿಐ ಕುಂದಾಪುರ ಅಧ್ಯಕ್ಷೆ ಜೇಸಿ ಸೆನೆಟರ್ ಅಕ್ಷತಾ ಗಿರೀಶ್ ಐತಾಳ್ ಜೇಸಿಐ ಕುಂದಾಪುರದ ಪೂರ್ವಧ್ಯಕ್ಷರಾದ ಜೇಸಿ ಚಂದ್ರ ಇಂಬಾಳಿ, ಜೇಸಿರೇಟ್ ವಿಭಾಗದ ನಿಕಟಪೂರ್ವ ಅಧ್ಯಕ್ಷೆ ಮಾಲತಿ ವಿಷ್ಣು ಜೇಸಿ ನಾಗರತ್ನ ಚಂದ್ರಶೇಖರ್, ಜೇಸಿ ಚಂದನ್ ಜೇಸಿ ಗಿರೀಶ್ ಐತಾಳ್ ಜೇಸಿ ಚೇತನ್ ಜೇಸಿ ಮಹೇಂದ್ರ ಜೆಜೆಸಿ ರಾಕೇಶ್ ಪಾಲ್ಗೊಂಡಿದ್ದರು. ಜೇಸಿಐ ಕುಂದಾಪುರ ಚರಿಷ್ಮಾ ಘಟಕದ ಕಾರ್ಯದರ್ಶಿ ಜೇಸಿ ಜಯಲಕ್ಷ್ಮೀ ಅರುಣ್‌ವಂದಿಸಿದರು
ಜೇಸಿಐ ಕುಂದಾಪುರ ಚರಿಷ್ಮಾ ಘಟಕಕ್ಕೆ ವಲಯಾಧ್ಯಕ್ಷರ ಅಧಿಕೃತ ಭೇಟಿ
