ಜೇಸಿಐ ಕುಂದಾಪುರ ಸಿಟಿ: ಪದಪ್ರದಾನ ಸಮಾರಂಭ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯುವಕರನ್ನು ಆಕರ್ಷಿಸಿ, ಅವರಲ್ಲಿ ಸ್ಫೂರ್ತಿ ಪ್ರೇರಣೆ ತುಂಬಿ ಉತ್ತಮ ವ್ಯಕ್ತಿತ್ವ ರೂಪಿಸುವ ಏಕೈಕ ಸಂಸ್ಥೆ ಜೇಸಿಯಾಗಿದೆ ಎಂದು ಜೇಸಿ ವಲಯಾದ್ಯಕ್ಷ ರಾಕೇಶ್ ಕುಂಜೂರು ಹೇಳಿದರು. ಅವರು ಕೋಟೇಶ್ವರದ ಸಹನ ಕನ್‌ವೆನ್‌ಶನ್ ಸೆಂಟರ್‌ನ ಸುಮೇದಾ ಒಪನ್ ಪಾರ್ಕ್‌ನಲ್ಲಿ ನಡೆದ ಜೇಸಿಐ ಕುಂದಾಪುರ ಸಿಟಿಯ ೨೦೧೮ನೇ ಸಾಲಿನ ಪದ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

Click Here

Call us

Call us

ಜೇಸಿ ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು ನೂತನ ಅಧ್ಯಕ್ಷ ಪಿ.ಜಯಚಂದ್ರ ಶೆಟ್ಟಿ ಮತ್ತು ತಂಡದವರಿಗೆ ಪದಪ್ರದಾನ ನೆರವೇರಿಸಿದರು.

Click here

Click Here

Call us

Visit Now

ಮುಖ್ಯ ಅತಿಥಿಗಳಾಗಿ ಜೇಸಿಐ ಇಂಡಿಯಾ ಫೌಂಡೇಶನ್‌ನ ನಿರ್ದೇಶಕ ವೈ.ಸುಕುಮಾರ್, ರೋಟರಿ ಕ್ಲಬ್ ಕುಂದಾಪುರದ ಪೂರ್ವಾಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ವಿಕಾಸ್ ಹೆಗ್ಡೆ, ಜೇಸಿ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕ ಕಾರ್ತಿಕೇಯ ಮಧ್ಯಸ್ಥ, ಜೇಸಿರೆಟ್ ಅಧ್ಯಕ್ಷೆ ಗೀತ ಸುವರ್ಣ, ಜೆಜೇಸಿ ಅಧ್ಯಕ್ಷ ಕಾರ್ತಿಕ್, ನಿರ್ಗಮನ ಕಾರ್ಯದರ್ಶಿ ಪ್ರಶಾಂತ್ ಹವಲ್ದಾರ್, ನಿರ್ಗಮನ ಜೆಜೇಸಿ ಅಧ್ಯಕ್ಷ ಸ್ವಪ್ನಿಲ್ ತಂಗಪ್ಪನ್, ಜೇಸಿಐ ಕುಂದಾಪುರ ಸಿಟಿಯ ಪೂರ್ವಾಧ್ಯಕ್ಷರುಗಳಾದ ಹುಸೇನ್ ಹೈಕಾಡಿ, ಗಿರೀಶ್ ಹೆಬ್ಬಾರ್, ರಾಘವೇಂದ್ರ ಚರಣ ನಾವಡ, ಚಂದ್ರಕಾಂತ್, ನಾಗೇಂದ್ರ ಪೈ, ನಿತಿನ್ ಅವಭೃತ್, ಮಂಜುನಾಥ ಕಾಮತ್, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಸದಾನಂದ ನಾವಡ, ನಿಕಟ ಪೂರ್ವ ವಲಯಾಧ್ಯಕ್ಷ ಸಂತೋಷ ಜಿ. ಪ್ರಸಕ್ತ ಸಾಲಿನ ವಲಯಾಧಿಕಾರಿಗಳು, ಕುಂದಾಪುರ ಬಾರ್ ಅಸೋಸಿಯೇಷನ್ ಅಧ್ಯಕ್ಷ ಸೋಮನಾಥ ಹೆಗ್ಡೆ, ಚಲನ ಜಿ. ಶೆಟ್ಟಿ, ಪುಸರಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಖ್ಯಾತ ನ್ಯಾಯವಾದಿಗಳಾದ ಟಿ.ಬಿ.ಶೆಟ್ಟಿ, ಗಾವಳಿ ಭುಜಂಗಶೆಟ್ಟಿ, ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಜಯಕರ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.

ಜೇಸಿಐ ಸಾಲಿಗ್ರಾಮ ವಡ್ಡರ್ಸೆ ನೂತನ ಘಟಕ ತೆರೆದ ಜೇಸಿಐ ಕುಂದಾಪುರ ಸಿಟಿಯನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಜೇಸಿಐ ಇಂಡಿಯಾ ಫೌಂಡೇಶ್‌ನ್‌ಗೆ ಜೆಎಫ್‌ಪಿ ದೇಣಿಗೆ ನೀಡಿದ ಜೇಸಿ ವಲಯ ಅಬಿವೃದ್ದಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕ ಕಾರ್ತಿಕೇಯ ಮಧ್ಯಸ್ಥರವರನ್ನು ವಲಯಾಧ್ಯಕ್ಷ ರಾಕೇಶ್ ಕುಂಜೂರು ಅಭಿನಂದಿಸಿದರು. ಜೇಸಿಐ ಕುಂದಾಪುರ ಸಿಟಿ ನಿರ್ಗಮನ ಅಧ್ಯಕ್ಷ ಶ್ರೀಧರ ಸುವರ್ಣ ಸ್ವಾಗತಿಸಿದರು. ಪ್ರಸಕ್ತ ಸಾಲಿನ ಕಾರ್ಯದರ್ಶಿ ಅಭಿಲಾಷ್ ಬಿ.ಎ. ವಂದಿಸಿದರು.

 

Call us

Leave a Reply

Your email address will not be published. Required fields are marked *

9 + three =