ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೇಸಿಐ ಬೈಂದೂರು ಸಿಟಿ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಜೇಸಿ ವಲಯ 15ರ ಉಪಾಧ್ಯಕ್ಷ ಜೆಎಫ್‌ಎಫ್ ನಾಗೇಶ್ ನಾವಡ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಪ್ರತಿಯೊಂದು ಜೀವಿಗೆ ಉಸಿರಾಡಲು ಗಾಳಿ ಅತ್ಯವಶ್ಯ, ಪರಿಸರ ಕಾಳಜಿ ಇಂದು ಪ್ರಮುಖವಾಗಿದ್ದು, ಸಸಿಗಳನ್ನು ನೆಟ್ಟು ಅವುಗಳನ್ನು ಹೆಮ್ಮರವಾಗಿಸುವ ಜವಾಬ್ದಾರಿ ನಮ್ಮೆಲ್ಲರಲ್ಲಿದೆ ಎಂದರು.
ಜೇಸಿಐ ಬೈಂದೂರು ಸಿಟಿಯ ಅಧ್ಯಕ್ಷ ಜೇಸಿ ಶ್ರೀಧರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಜೇಸಿ ಬೈಂದೂರು ಸಿಟಿಯ ವಲಯಾಧಿಕಾರಿ ಜೇಸಿ ಮಣಿಕಂಠ ಎಸ್, ಘಟಕದ ಪೂರ್ವಾಧ್ಯಕ್ಷೆ ಜೇಸಿ ಪ್ರಿಯದರ್ಶಿನಿ ಬೆಸ್ಕೂರು, ಘಟಕದ ಜೇಸಿರೇಟ್ ಅಧ್ಯಕ್ಷೆ ಜೇಸಿರೆಟ್ ಅನಿತಾ ಆರ್. ಕೆ. ಮರವಂತೆ, ಘಟಕದ ಉಪಾಧ್ಯಕ್ಷರಾದ ಜೇಸಿ ಸಕ್ಕು ಕಲ್ಮಕ್ಕಿ, ಜೇಸಿ ಸೌಮ್ಯ, ಜೇಸಿ ಸುಶಾಂತ್ ಆಚಾರ್, ಘಟಕದ ಖಜಾಂಚಿ ಜೇಸಿ ಪ್ರೇಮಾ ವಿ. ಶೆಟ್ಟಿ, ಸದಸ್ಯರಾದ ಜೇಸಿ ರಾಘವೇಂದ್ರ ಹೊಳ್ಳ, ಜೇಸಿ ಸುಮಾ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.
ಸುಮಾರು 15 ವಿವಿಧ ರೀತಿಯ ಸಸ್ಯಗಳನ್ನು ಬೈಂದೂರಿನ ಕೃಷಿ ತೋಟದಲ್ಲಿ ನೆಡಲಾಯಿತು. ಘಟಕದ ಕಾರ್ಯದರ್ಶಿ ಜೇಸಿ ಸವಿತಾ ದಿನೇಶ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದ್ದರು.